ಸಮಾಧಾನಕರ ಸುದ್ದಿ: ಮತ್ತೊಂದು ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಒಪ್ಪಿಗೆ ನೀಡಿದ ಡಿಸಿಜಿಐ

| Updated By: guruganesh bhat

Updated on: Apr 24, 2021 | 5:24 PM

Biological E Limited gets dcgi regulator Nod for Clinical Trial of Covid 19 Vaccine: ಬಯೋಲಾಜಿಕಲ್ ಇ‌ ಲಿಮಿಟೆಡ್ ಕಂಪನಿಯ ಈ ಲಸಿಕೆಯ 3ನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಡಿಸಿಜಿಐ ಒಪ್ಪಿಗೆ ನೀಡಿದೆ.

ಸಮಾಧಾನಕರ ಸುದ್ದಿ: ಮತ್ತೊಂದು ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಒಪ್ಪಿಗೆ ನೀಡಿದ ಡಿಸಿಜಿಐ
ಸಮಾಧಾನಕರ ಸುದ್ದಿ: ಮತ್ತೊಂದು ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಒಪ್ಪಿಗೆ ನೀಡಿದ ಡಿಸಿಜಿಐ
Follow us on

ನವದೆಹಲಿ: ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಭಾರತದ ಔಷದೋದ್ಯಮ ಮತ್ತೊಂದು ಮಹತ್ತರ ಸಾಧನೆ ಮಾಡಿದೆ. ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಬಯೋಲಾಜಿಕಲ್ ಇ‌ ಲಿಮಿಟೆಡ್ 3ನೇ ಹಂತದ ಲಸಿಕೆ ಸಿದ್ಧಪಡಿಸುವುದರಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್​ ಮೂಲದ ಸೋಂಕು ತಯಾರಿಕಾ ಕಂಪನಿ (Biological E. Limited-BE) ಬಯೋಲಾಜಿಕಲ್ ಇ‌ ಲಿಮಿಟೆಡ್ ಕಂಪನಿಯ SARS-CoV-2 ಎಂಬ ಲಸಿಕೆಯ 3ನೇ ಹಂತದ ವೈದ್ಯಕೀಯ ಪ್ರಯೋಗಕ್ಕೆ ಡಿಸಿಜಿಐ Central Drugs Standard Control Organization -CDSCO) ಒಪ್ಪಿಗೆ ನೀಡಿದೆ.

ಆಗಸ್ಟ್​ ವೇಳೆಗೆ ಈ ಕೊರೊನಾ ಲಸಿಕೆ ಜನ ಬಳಕೆಗೆ ಸಿದ್ಧವಾಗಲಿದೆ ಎಂದು ನೀತಿ ಆಯೋಗದ ಸದಸ್ಯ (NITI Aayog) ವಿಕೆ ಪಾಲ್ ಅವರು ತಿಳಿಸಿದ್ದಾರೆ. ಭಾರತದಲ್ಲಿ ಒಟ್ಟು 15 ಭಾಗಗಳಲ್ಲಿ ಈ ಕೊರೊನಾ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. 18 ವರ್ಷ ವಯಸ್ಸಿನಿಂದ ಹಿಡಿದು 80 ವರ್ಷದವರ ಮೇಲೆ ಇದರ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ಒಟ್ಟು 1,268 ಮಂದಿ ಆರೋಗ್ಯವಂತರ ಮೇಲೆ ಇದರ ಪ್ರಯೋಗ ನಡೆಯಲಿದೆ. ಕಳೆದ ವರ್ಷ ನವೆಂಬರ್​ ತಿಂಗಳಲ್ಲಿ Biological E Limited company 1 ಮತ್ತು 2 ನೆಯ ಹಂತದ ಕ್ಲಿನಿಕಲ್​ ಟ್ರಯಲ್​ಗಳನ್ನು ಆರಂಭಿಸಿತ್ತು.

#BiologicalELimited #CentralDrugsStandardControlOrganization #CDSCO #PhaseIIIClinicalTrial #COVID19 #COVID19Vaccine…

Posted by Biological E. Limited on Saturday, 24 April 2021

(Biological E Limited company gets dcgi regulator Nod to Start Phase III Clinical Trial of its Covid 19 Vaccine)

Published On - 4:54 pm, Sat, 24 April 21