7 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ, ಹೆಚ್ಚಿದ ಆತಂಕ: ಸಾಂಕ್ರಾಮಿಕ ರೋಗ ಪತ್ತೆಗೆ ಕೇಂದ್ರ ತಂಡ ನಿಯೋಜನೆ

ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಕ್ಕಿ ಜ್ವರ ಇರುವುದು ಖಚಿತಗೊಂಡಿದೆ.

7 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ, ಹೆಚ್ಚಿದ ಆತಂಕ: ಸಾಂಕ್ರಾಮಿಕ ರೋಗ ಪತ್ತೆಗೆ ಕೇಂದ್ರ ತಂಡ ನಿಯೋಜನೆ
ಸಂಗ್ರಹ ಚಿತ್ರ
Edited By:

Updated on: Apr 06, 2022 | 11:03 PM

ದೆಹಲಿ: ದೇಶದ ಏಳು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇರಳ, ರಾಜಸ್ಥಾನ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಹಕ್ಕಿ ಜ್ವರ ದೃಢಪಟ್ಟಿರುವ ಏಳು ರಾಜ್ಯಗಳಲ್ಲಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಹಕ್ಕಿ ಜ್ವರದ ವಿರುದ್ಧ ನಿರೂಪಿಸಿರುವ ಕಾರ್ಯತಂತ್ರಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ನಡುವೆ, ದೆಹಲಿಯ ಡಿಡಿಎ ಪಾರ್ಕ್​ನಲ್ಲಿ 16 ಹಕ್ಕಿಗಳು ಪ್ರಾಣ ತೆತ್ತಿರುವುದು ವರದಿಯಾಗಿದೆ. ಮೃತಪಟ್ಟಿರುವ ಹಕ್ಕಿಗಳ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ರವಾನಿಸಲಾಗಿದೆ.

ಏವಿಯನ್ ಇನ್​ಫ್ಲುಯೆನ್ಸಾ (AI) ಹಕ್ಕಿ ಜ್ವರ ವರದಿಯಾಗದ ರಾಜ್ಯಗಳಲ್ಲಿ, ಹಕ್ಕಿಗಳ ಸಾವಿನ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಹಕ್ಕಿಗಳು ಮರಣಿಸಿರುವುದು ಕಂಡುಬಂದರೆ, ಕೂಡಲೇ ವರದಿ ಮಾಡುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೇರಳ, ಹರ್ಯಾಣ ಹಾಗೂ ಹಿಮಾಚಲ ಪ್ರದೇಶ ಭೇಟಿ ನೀಡಿ, ಸಾಂಕ್ರಾಮಿಕ ರೋಗ ಪತ್ತೆ ಮತ್ತು ಪರಿಶೀಲನೆ ನಡೆಸಲು ಕೇಂದ್ರದಿಂದ ತಂಡವೊಂದನ್ನು ರಚಿಸಲಾಗಿದೆ.

ಶಿವಮೊಗ್ಗದ ಪಾರ್ಕ್​​​ನಲ್ಲಿ ಸತ್ತುಬಿದ್ದ ಪಕ್ಷಿಗಳು: ರಾಜ್ಯಕ್ಕೂ ವಕ್ಕರಿಸಿತಾ ಹಕ್ಕಿ ಜ್ವರ?

Published On - 6:00 pm, Sat, 9 January 21