ಪಂಜಾಬ್​​ನಲ್ಲಿ ಗೆದ್ದ ಆಮ್​ ಆದ್ಮಿ ಪಾರ್ಟಿಗೆ ಹರ್ಯಾಣದ ಹಲವು ಬಿಜೆಪಿ, ಕಾಂಗ್ರೆಸ್​ ನಾಯಕರ ಸೇರ್ಪಡೆ; ಕೇಜ್ರಿವಾಲ್​​ಗೆ ಜಾಕ್​ಪಾಟ್​

ಗುರುಗ್ರಾಮದ ಬಿಜೆಪಿ ಮಾಜಿ ಶಾಸಕ ಉಮೇಶ್​ ಅಗರ್​ವಾಲ್​, ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್​, ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ, ಹರ್ಯಾಣದ ಮಾಜಿ ಸಚಿವ ಬಲಬೀರ್ ಸೈನಿ ಮತ್ತಿತರ ಪ್ರಮುಖ ನಾಯಕರು ಇದೀಗ ಆಪ್​ ಪಕ್ಷ ಸೇರಿದ್ದಾರೆ.

ಪಂಜಾಬ್​​ನಲ್ಲಿ ಗೆದ್ದ ಆಮ್​ ಆದ್ಮಿ ಪಾರ್ಟಿಗೆ ಹರ್ಯಾಣದ ಹಲವು ಬಿಜೆಪಿ, ಕಾಂಗ್ರೆಸ್​ ನಾಯಕರ ಸೇರ್ಪಡೆ; ಕೇಜ್ರಿವಾಲ್​​ಗೆ ಜಾಕ್​ಪಾಟ್​
ಆಪ್​ ವಿಜಯಯಾತ್ರೆ ಚಿತ್ರ
Follow us
| Updated By: Lakshmi Hegde

Updated on:Mar 17, 2022 | 2:40 PM

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಗೆದ್ದಿದ್ದೇ ಗೆದ್ದಿದ್ದು, ಆ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹರ್ಯಾಣದ ಹಲವು ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಗುರುಗಾಂವ್​ ಶಾಸಕ  ಉಮೇಶ್ ಅಗರ್​ವಾಲ್​, ಮಾಜಿ ಸಚಿವ ಮತ್ತು ಕಾಂಗ್ರೆಸ್​ ನಾಯಕ ಬಿಜೇಂದ್ರ ಸಿಂಗ್​ ಸೇರಿ ಹಲವು ನಾಯಕರು ಆಪ್​​ಗೆ ಸೇರ್ಪಡೆಗೊಂಡಿದ್ದಾರೆ.

ಗುರುಗ್ರಾಮದ ಬಿಜೆಪಿ ಮಾಜಿ ಶಾಸಕ ಉಮೇಶ್​ ಅಗರ್​ವಾಲ್​, ಹಿರಿಯ ಕಾಂಗ್ರೆಸ್ ನಾಯಕ ಬಿಜೇಂದ್ರ ಸಿಂಗ್​, ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ, ಹರ್ಯಾಣದ ಮಾಜಿ ಸಚಿವ ಬಲಬೀರ್ ಸೈನಿ ಮತ್ತಿತರ ಪ್ರಮುಖ ನಾಯಕರು ಇದೀಗ ಆಪ್​ ಪಕ್ಷ ಸೇರಿದ್ದಾರೆ. ಇನ್ನು, ಸಮಲ್ಖಾದ ಮಾಜಿ ಶಾಸಕ (ಸ್ವತಂತ್ರ) ರವೀಂದ್ರ ಕುಮಾರ್​, ಕಾಂಗ್ರೆಸ್​ ನಾಯಕ ಜಗತ್​ ಸಿಂಗ್​, ಬಿಎಸ್​​ಪಿಯ ಅಶೋಕ್​ ಮಿತ್ತಲ್​, ಬಿಜೆಪಿಯ ಅಮಂದೀಪ್​ ಸಿಂಗ್​ ವಾರಾಯಿಚ್, ಬಿಜೆಪಿಯ ಬಹ್ಮ ಸಿಂಗ್ ಗುರ್ಜಾರ್​, ಹರ್ಯಾಣದ ಸರ್​ಪಂಚ್​ ಆಗಿದ್ದ ಸರ್ದಾರ್ ಗುರ್ಲಾಲ್​ ಸಿಂಗ್​ ಕೂಡ ಕೈಯಲ್ಲಿ ಪೊರಕೆ ಹಿಡಿದಿದ್ದಾರೆ. ಅರ್ಥಾತ್​ ಆಮ್​ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

ಈ ಬಗ್ಗೆ ಆಪ್​ ಶಾಸಕ ಸುಶೀಲ್​ ಗುಪ್ತಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ, ಕಾಂಗ್ರೆಸ್​ ಮತ್ತು ಇತರ ಪಕ್ಷಗಳಿಂದ ಹಲವು ಶಾಸಕರು, ಪ್ರಮುಖ ನಾಯಕರು ಆಪ್​ ಸೇರಿದ್ದಾರೆ. ಇವರೆಲ್ಲ ದೆಹಲಿಯಲ್ಲಿ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದೂ ತಿಳಿಸಿದ್ದಾರೆ. ಪಂಜಾಬ್​ ಮತ್ತು ದೆಹಲಿಯ ನಂತರ ಹರ್ಯಾಣದ ಜನರು ಆಪ್​​ನತ್ತ ಒಲವು ತೋರಿಸುತ್ತಿದ್ದಾರೆ. ಅಲ್ಲಿಯೂ ಕೂಡ ಮುಂದಿನ ಚುನಾವಣೆ ನಂತರ ಆಪ್​ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಳ್ಳೆಯ ಆಡಳಿತ, ಬೊಮ್ಮಾಯಿ ನೇತೃತ್ವದಲ್ಲಿ ಕೆಲಸಗಳು ಉತ್ತಮವಾಗಿ ಆಗುತ್ತಿವೆ, ಶಹಬಾಸ್! ಬೆಂಗಳೂರಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ

Published On - 9:23 am, Tue, 15 March 22