ಅನಪೇಕ್ಷಿತ ಉದ್ಯಮಿಗಳ ಸಂಪರ್ಕ: ಆಜಾದ್​​ ಸಂದರ್ಶನ ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

|

Updated on: Apr 10, 2023 | 11:31 PM

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಅನಪೇಕ್ಷಿತ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಆರೋಪಿಸಿದ್ದಾರೆ.

ಅನಪೇಕ್ಷಿತ ಉದ್ಯಮಿಗಳ ಸಂಪರ್ಕ: ಆಜಾದ್​​ ಸಂದರ್ಶನ ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ರಾಹುಲ್ ಗಾಂಧಿ
Image Credit source: hindustantimes.com
Follow us on

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಅನಪೇಕ್ಷಿತ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad)​ ಅವರು ಆರೋಪಿಸಿದ್ದಾರೆ. ಆ ಮೂಲಕ ಗುಲಾಂ ನಬಿ ಆಜಾದ್​ ಮತ್ತು ಇತರೆ ನಾಯಕರು ಉದ್ಯಮಿ ಗೌತಮ್​ ಅದಾನಿ ಜೊತೆ ಸಂಪರ್ಕದಲ್ಲಿದ್ದಾರೆಂದು ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಮಲಯಾಳಂನ ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್​, ರಾಹುಲ್ ಗಾಂಧಿ ಅವರು ಭೇಟಿಯಾದ ಉದ್ಯಮಿಗಳು ಯಾರು ಮತ್ತು ಅದರ ಉದ್ದೇಶವನ್ನು ವಿವರಿಸಬೇಕು ಎಂದು ಕಿಡಿಕಾರಿದ್ದಾರೆ. ಗುಲಾಂ ನಬಿ ಆಜಾದ್ ಸೇರಿದಂತೆ ಐವರು ಮಾಜಿ ಕಾಂಗ್ರೆಸ್ಸಿಗರ ಹೆಸರುಗಳನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಇದು ಅದಾನಿ ವಿಚಾರದಿಂದ ಬೇರೆಡೆಗೆ ಸೆಳೆಯುವ ಬಿಜೆಪಿಯ ಸಾಧನಗಳಾಗಿವೆ ಎಂದು ಹೇಳಿದ್ದಾರೆ.

ಅದಾನಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಗುಲಾಮ್ ನಬಿ ಆಜಾದ್, ಇದು ನಾಚಿಕೆಗೇಡಿನ ಸಂಗತಿ, ಏಕೆಂದರೆ ನಾನು ಯಾವುದೇ ಉದ್ಯಮಿಗಳೊಂದಿಗೆ ಸಂಬಂಧವನ್ನು ಹೊಂದಿಲ್ಲ. ಆದರೆ ಇಡೀ ಕುಟುಂಬ (ಗಾಂಧಿ) ಅವರನ್ನು ಒಳಗೊಂಡಂತೆ ಉದ್ಯಮಿಗಳೊಂದಿಗೆ ಸಂಬಂಧ ಹೊಂದಿದೆ ಎಂದರು. ನನಗೆ ಅವರ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ಅವರ ವಿರುದ್ಧ ಏನನ್ನೂ ಮಾತನಾಡಲು ಬಯಸುವುದಿಲ್ಲ. ಒಂದು ವೇಳೆ ಹಾಗೇನಾದರೂ, ಅವರು ದೇಶದ ಹೊರಗಿನ ಅನಪೇಕ್ಷಿತ ಉದ್ಯಮಿಗಳನ್ನು ಎಲ್ಲಿ ಭೇಟಿ ಮಾಡುತ್ತಾರೆ ಎಂಬುದಕ್ಕೆ ನಾನು ಉದಾಹರಣೆಗಳನ್ನು ನೀಡುತ್ತಿದ್ದೆ ಎಂದು ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.

ಇದನ್ನೂ ಓದಿ: Ghulam Nabi Azad: ಯಾವುದೇ ರಾಜ್ಯದ ಚುನಾವಣೆ ಗೆಲುವಿನ ಶ್ರೇಯ ಕಾಂಗ್ರೆಸ್​​ ಕೇಂದ್ರ ನಾಯಕತ್ವಕ್ಕೆ ಸಲ್ಲದು; ಗುಲಾಂ ನಬಿ ಆಜಾದ್

ಅದಾನಿ ಕುರಿತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣದಿಂದ ಅವರು ರಾಜಕೀಯ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಅವರ ಯುಕೆ ಭಾಷಣಕ್ಕಾಗಿ; 2019 ರ ಮೋದಿ ಉಪನಾಮ(surname case) ಪ್ರಕರಣದಲ್ಲಿ ಶಿಕ್ಷೆಗೊಳಗಾಗಬೇಕಾಯಿತು. ಅದೇ ರೀತಿಯಾಗಿ ಸಾವರ್ಕರ್ ಅವರ ಹೇಳಿಕೆಗಾಗಿ ಲೋಕಸಭೆಯಿಂದ ಅನರ್ಹತೆ ಹೊಂದಬೇಕಾಯಿತು. ಸದ್ಯ ಈಗ ಅದಾನಿ ಟ್ವೀಟ್​ ಮಾಡುವ ಮೂಲಕ ಎಲ್ಲರ ಕಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ.

ಇದನ್ನೂ ಓದಿ: Ghulam Nabi Azad: ಪ್ರಧಾನಿ ಮೋದಿ ‘ರಾಜ್ಯಾಧಿಕಾರಿ’, ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ: ಗುಲಾಂ ನಬಿ ಆಜಾದ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಏನೇ ಟ್ವೀಟ್ ಮಾಡಿದರೂ ಅದು ಮಾನಹಾನಿಕರ. ಆದ್ದರಿಂದ ಪ್ರಧಾನಿ ಅಸ್ಸಾಂನಿಂದ ಹಿಂತಿರುಗಿದ ನಂತರ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಖಂಡಿತವಾಗಿಯೂ ಗುವಾಹಟಿಯಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಗುಡುಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ತಮ್ಮ ಆತ್ಮಚರಿತ್ರೆ ‘ಆಜಾದ್’ ಅನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಕಾಂಗ್ರೆಸ್​ನ್ನು ‘ಬ್ಲೂಪರ್ಸ್ ಮತ್ತು ಬೊಂಬಾಸ್ಟ್’ (‘bloopers and bombast’) ಎಂದು ವರ್ಗೀಕರಿಸಿದ್ದಾರೆ. ರಾಹುಲ್ ಗಾಂಧಿಯನ್ನು ಹಲವಾರು ಸಂದರ್ಶನಗಳಲ್ಲಿ ಅವರು ಟೀಕಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:30 pm, Mon, 10 April 23