ತಮಿಳುನಾಡು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ; ಕುಟುಂಬದವರೂ ಮೋಸ ಮಾಡಿದರು !

| Updated By: Lakshmi Hegde

Updated on: Feb 22, 2022 | 5:46 PM

ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕೂಡ, ಆಡಳಿತ ಪಕ್ಷ ಡಿಎಂಕೆ ಅಭೂತಪೂರ್ವ ಜಯಗಳಿಸಿದೆ. ಚೆನ್ನೈನಲ್ಲೇ 134 ವಾರ್ಡ್​ಗಳನ್ನು ಗೆದ್ದುಕೊಂಡಿದೆ.

ತಮಿಳುನಾಡು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ; ಕುಟುಂಬದವರೂ ಮೋಸ ಮಾಡಿದರು !
ಬಿಜೆಪಿ ಅಭ್ಯರ್ಥಿ
Follow us on

ಈರೋಡ್​: ತಮಿಳುನಾಡಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (TN Urban Local Body Polls) ಬಿಜೆಪಿಯಿಂದ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬರಿಗೆ ಕೇವಲ ಒಂದೇ ಒಂದು ವೋಟ್​ ಬಂದಿದೆ. ತಮಿಳುನಾಡಿನಾದ್ಯಂತ ಪಟ್ಟಣ ಪಂಚಾಯಿತಿ ಚುನಾವಣೆ ನಡೆದಿತ್ತು. ಅದರಲ್ಲಿ ನರೇಂದ್ರನ್ ಎಂಬುವರು ಈರೋಡ್​ ಜಿಲ್ಲೆಯ ಭವಾನಿಸಾಗರ್​ ಪಟ್ಟಣದ 11ನೇ ವಾರ್ಡ್​​ನಿಂದ ಸ್ಪರ್ಧಿಸಿದ್ದರು. ಆದರೆ ಮತ ಎಣಿಕೆ ಮುಗಿದ ಬಳಿಕ ಅಕ್ಷರಶಃ ಶಾಕ್​ ಆಗಿದ್ದಾರೆ. ಅವರಿಗೆ ಬಿದ್ದಿದ್ದು ಒಂದೇ ಮತವಾಗಿತ್ತು. ಅದೂ ಕೂಡ ಅವರೇ ತಮಗೆ ತಾವು ಹಾಕಿಕೊಂಡ ಮತ !

ಈ ಬಗ್ಗೆ ಮಾತನಾಡಿದ ನರೇಂದ್ರನ್​, ನನಗೆ ನಾನೊಬ್ಬನೇ ಮತ ಹಾಕಿಕೊಂಡಿದ್ದೇನೆ. ಅದು ಬಿಟ್ಟರೆ ನನ್ನ ಕುಟುಂಬದವರು, ಸ್ನೇಹಿತರು, ಪಕ್ಷದವರೂ ಕೂಡ ನನಗೆ ಮತ ಹಾಕಲಿಲ್ಲ. ಸುಳ್ಳು ಭರವಸೆ ಕೊಟ್ಟು ಎಲೆಕ್ಷನ್​ಗೆ ನಿಲ್ಲಿಸಿದರು. ಈಗ ಯಾರೂ ಮತಹಾಕಲಿಲ್ಲ. ಈ ಮೂಲಕ ನನಗೆ ಅವಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಹೇಳಬೇಕೆಂದರೆ ತಮಿಳುನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕೂಡ, ಆಡಳಿತ ಪಕ್ಷ ಡಿಎಂಕೆ ಅಭೂತಪೂರ್ವ ಜಯಗಳಿಸಿದೆ. ಚೆನ್ನೈನಲ್ಲೇ 134 ವಾರ್ಡ್​ಗಳನ್ನು ಗೆದ್ದುಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಹುದ್ದೆಗೆ ಏರಿರುವ ಎಂ.ಕೆ.ಸ್ಟಾಲಿನ್​ ಇದೀಗ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದ್ದರ ಬಗ್ಗೆ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾಗೇ, ಈ ವಿಜಯಕ್ಕಾಗಿ ತಮಿಳುನಾಡು ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳು ಒಳ್ಳೆಯ ಆಡಳಿತ ನೀಡಿದ್ದಕ್ಕೆ ಪ್ರತಿಯಾಗಿ ರಾಜ್ಯದ ಜನರು ನೀಡಿದ ಸರ್ಟಿಫಿಕೇಟ್​ ಇದು.  ನಾವು ಜನರ ಆಶೋತ್ತರಗಳನ್ನು ಈಡೇರಿಸುತ್ತಿದ್ದೇವೆ. ಜನರು ನಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೀನಿನ ಎಣ್ಣೆಯ ಬಳಕೆಯಿಂದಾಗುವ ಲಾಭಗಳೇನು? ಇಲ್ಲಿದೆ ಮಾಹಿತಿ