ಮೀನಿನ ಎಣ್ಣೆಯ ಬಳಕೆಯಿಂದಾಗುವ ಲಾಭಗಳೇನು? ಇಲ್ಲಿದೆ ಮಾಹಿತಿ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ಹಲವು ಕಾಯಿಲೆಗಳನ್ನು ತಡೆಯಬಹದು. ಕಣ್ಣು, ತಲೆ, ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯವನ್ನು ಮೀನಿನ ಎಣ್ಣೆ ತಡೆಯುತ್ತದೆ.

ಮೀನಿನ ಎಣ್ಣೆಯ ಬಳಕೆಯಿಂದಾಗುವ ಲಾಭಗಳೇನು? ಇಲ್ಲಿದೆ ಮಾಹಿತಿ
ಮೀನಿನ ಎಣ್ಣೆ (ಸಾಂಕೇತಿಕ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on: Feb 22, 2022 | 4:32 PM

ದೇಹದ ಆರೋಗ್ಯ ವೃದ್ಧಿಗೆ ಮೀನಿನ ಸೇವನೆ ಉತ್ತಮ. ದೇಹದಲ್ಲಿನ ಮೂಳೆಗಳನ್ನು ಬಲಪಡಿಸಲು, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮೀನು ಸಹಕಾರಿ. ಅದೇ ರೀತಿ ಮೀನಿನ ಎಣ್ಣೆ ಕೂಡ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಮೀನಿನ ಮೇಲ್ಪದರದಲ್ಲಿನ  ಅಂಶವನ್ನು ಬಳಸಿ ಈ ಮೀನಿನ ಎಣ್ಣೆಯನ್ನು ತಯಾರಿಸಲಾಗುತ್ತದೆ.  ಮೀನಿನ ಎಣ್ಣೆಯಲ್ಲಿರುವ ಒಮೆಗಾ 3 ಅಂಶಗಳು, ಪ್ಯಾಟಿ ಆಸಿಡ್​ಗಳು ಸಮೃದ್ಧವಾಗಿರುತ್ತವೆ. ಇವು ದೇಹದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ನೆರವಾಗುತ್ತದೆ.  ಸಲ್ಮೋನ್​, ವೈಟ್​ ಫಿಶ್​ ಸೇರಿದಂತೆ  ವಿವಿಧ ರೀತಿಯ ಮೀನಿಗಳಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಇದರ ಜತೆಗೆ ಮೀನಿನ ಎಣ್ಣೆಯಿಂದ ಇನ್ನೂ ಹಲವು ಉಪಯೋಗಗಳಿವೆ. ಇಲ್ಲಿದೆ ನೋಡಿ ಅದರ ಸಂಪೂರ್ಣ ಮಾಹಿತಿ.

ಹೃದಯಕ್ಕೆ ಒಳ್ಳೆಯದು: ಆರೋಗ್ಯವಂತ ಹೃದಯ, ಉತ್ತಮ ಜೀವನಕ್ಕೆ ನಾಂದಿ. ಹೀಗಾಗಿ ಆರೋಗ್ಯವಂತ ಹೃದಯವನ್ನು ಕಾಪಾಡಿಕೊಳ್ಳಲು ಮೀನಿನ ಎಣ್ಣೆ ಹೆ್ಚ್ಚು ಸಹಕಾರಿಯಾಗಿದೆ. ದೇಹದಲ್ಲಿನ ಕೊಬ್ಬಿನ ಅಂಶವನ್ನು ಮೀನಿನ ಎಣ್ಣೆ ನಿಯಂತ್ರಿಸುತ್ತದೆ. ಜತೆಗೆ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಾಯಾಘಾತದ ಅಪಾಯವನ್ನು ತಡೆಯುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ: ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ಹಲವು ಕಾಯಿಲೆಗಳನ್ನು ತಡೆಯಬಹದು. ಕಣ್ಣು, ತಲೆ, ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯವನ್ನು ಮೀನಿನ ಎಣ್ಣೆ ತಡೆಯುತ್ತದೆ. ಮೀನಿನ ಎಣ್ಣೆಯಲ್ಲಿರುವ ಒಮೆಗಾ 3 ಅಂಶಗಳು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೂಳೆಗಳ ಆರೋಗ್ಯಕ್ಕೆ ಉತ್ತಮ: ದೇಹದ ಚಲವಲನ ಸರಿಯಾಗಿ ಆಗಬೇಕಾದರೆ ಮೂಳೆಗಳ ಸಹಾಯ ಅತ್ಯಗತ್ಯ. ಆದ್ದರಿಂದ ಮೂಳಗೆಳ  ಆರೋಗ್ಯ ಕಾಪಾಡಿಕೊಳ್ಳಲು ಮೀನಿನ ಎಣ್ಣೆ ಸಹಾಯಕವಾಗಿದೆ.

ಮೆದುಳಿನ ಆರೋಗ್ಯ: ಮೀನಿನ ಎಣ್ಣೆಯ ಸೇವನೆಯಿಂದ ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ.  ಒಮೆಗಾ 3 ಅಂಶಗಳು ಮೆದುಳಿನ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಹೀಗಾಗಿ ಪ್ರತಿದಿನ ಮೀನಿನ ಎಣ್ಣೆಯ ಬಳಕೆ ಮಾಡುವುದು ಉತ್ತಮ

ಚರ್ಮದ ಆರೋಗ್ಯವನ್ನು ಉತ್ತಮಪಡಿಸುತ್ತದೆ: ಮೀನಿನ ಎಣ್ಣೆಯ ಬಳಕೆಯಿಂದ ಚರ್ಮದ ಆರೋಗ್ಯ ಕೂಡ ಉತ್ತಮವಾಗುತ್ತದೆ. ಮೀನಿನ ಎಣ್ಣೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.  ವಯಸ್ಸಾದಂತೆ ಕಾಣುವ ಚರ್ಮವನ್ನು ಹೋಗಲಾಡಿಸಿ, ಹೊಳಪಿನ ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ:

Cancer Diet Food: ಈ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತವೆ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ