Updated on:Feb 22, 2022 | 3:06 PM
ಕ್ಯಾನ್ಸರ್ನಂತಹ ಸಂಕೀರ್ಣ ರೋಗಗಳ ತಡೆಗಟ್ಟುವಿಕೆಗೆ ಕೆಂಪು ಟೊಮೆಟೊಗಳು ಅವಶ್ಯಕ. ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಹೃದ್ರೋಗವನ್ನು ತಡೆಗಟ್ಟಲು ಟೊಮೆಟೊ ಒಳ್ಳೆಯದು.
ವಾಲ್ನಟ್. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ವಾಲ್‌ನಟ್ಸ್ ಇತರ ಬೀಜಗಳಿಗಿಂತ ಹೆಚ್ಚು ಪರಿಣಾಮಕಾರಿ. ಇದರ ವಿವಿಧ ಘಟಕಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಬ್ರೊಕೋಲಿ ಪ್ರಾಸ್ಟೇಟ್, ಶ್ವಾಸಕೋಶ, ಕೊಲೊನ್, ಸ್ತನ, ಯಕೃತ್ತು, ಕುತ್ತಿಗೆ ಸೇರಿದಂತೆ ವಿವಿಧ ಅಂಗಗಳ ಕ್ಯಾನ್ಸರ್ ಅನ್ನು ತಡೆಯುತ್ತದೆ.
ದೇಶ-ವಿದೇಶಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುವ ಹಲವಾರು ಸೂಪರ್‌ಫುಡ್‌ಗಳಿವೆ. ಅವುಗಳಲ್ಲಿ ಈ ಮೇಲಿನವು ಕೂಡ ಸೇರಿಕೊಂಡಿದೆ.
Published On - 2:43 pm, Tue, 22 February 22