ಸಮಾಜ ಒಡೆಯೋ ಬಿಜೆಪಿ ಯತ್ನ ವಿಫಲವಾಗಿದೆ-ಸೋನಿಯಾ ಗಾಂಧಿ

|

Updated on: Dec 24, 2019 | 8:49 AM

ಜಾರ್ಖಂಡ್​ನಲ್ಲಿ ಸಿಕ್ಕ ಬಹುಮತದ ಮೂಲಕ ಧರ್ಮದ ಆಧಾರದಲ್ಲಿ ಸಮಾಜವನ್ನ ಒಡೆಯೋ ಬಿಜೆಪಿ ಪ್ರಯತ್ನವನ್ನ ಜನರು ಸೋಲಿಸಿದ್ದಾರೆ ಅಂತ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಮತ ಇದೆ ಎಂದಿದ್ದಾರೆ. ‘ಆಂಧ್ರದಲ್ಲಿ ಎನ್​ಆರ್​ಸಿ ಜಾರಿಯಾಗಲ್ಲ’ ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್​ಆರ್​ಸಿ ಬಗ್ಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಇದು ಜಾರಿಯಾಗಲ್ಲ ಅಂತ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಪಶ್ಚಿಮ […]

ಸಮಾಜ ಒಡೆಯೋ ಬಿಜೆಪಿ ಯತ್ನ ವಿಫಲವಾಗಿದೆ-ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Follow us on

ಜಾರ್ಖಂಡ್​ನಲ್ಲಿ ಸಿಕ್ಕ ಬಹುಮತದ ಮೂಲಕ ಧರ್ಮದ ಆಧಾರದಲ್ಲಿ ಸಮಾಜವನ್ನ ಒಡೆಯೋ ಬಿಜೆಪಿ ಪ್ರಯತ್ನವನ್ನ ಜನರು ಸೋಲಿಸಿದ್ದಾರೆ ಅಂತ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಮತ ಇದೆ ಎಂದಿದ್ದಾರೆ.

‘ಆಂಧ್ರದಲ್ಲಿ ಎನ್​ಆರ್​ಸಿ ಜಾರಿಯಾಗಲ್ಲ’
ರಾಷ್ಟ್ರೀಯ ಪೌರತ್ವ ನೋಂದಣಿ ಅಥವಾ ಎನ್​ಆರ್​ಸಿ ಬಗ್ಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಇದು ಜಾರಿಯಾಗಲ್ಲ ಅಂತ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎನ್​ಆರ್​ಸಿ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಹೇಳಿಕೆ ನೀಡಿದ್ದಾರೆ.

‘ಸಾರ್ವಜನಿಕ ಆಸ್ತಿ ಹಾಳು ಮಾಡುವ ಹಕ್ಕಿಲ್ಲ’
ಪ್ರತಿಭಟನೆ ವೇಳೆ ಯಾರೂ ಕೂಡ ಹಿಂಸಾಚಾರಕ್ಕೆ ತಿರುಗಬಾರದು ಅಂತ ಬಾಲಿವುಡ್​ ನಟಿ ಕಂಗನಾ ರನಾವತ್ ಹೇಳಿದ್ದಾರೆ. ದೇಶದಲ್ಲಿ 3ರಿಂದ 4 ಪರ್ಸೆಂಟ್​ನಷ್ಟು ಜನ ಮಾತ್ರ ತೆರಿಗೆ ಕಟ್ಟುತ್ತಾರೆ. ಉಳಿದವರು ಅವರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ಸಾರ್ವಜನಿಕ ಆಸ್ತಿಯನ್ನ ಹಾಳು ಮಾಡಲು ಅವರಿಗೆ ಹಕ್ಕಿಲ್ಲ ಎಂದಿದ್ದಾರೆ.