ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ, ಸ್ಟ್ರೆಚರ್​ನಲ್ಲೇ ಪ್ರಾಣಬಿಟ್ಟ ಬಿಜೆಪಿಯ ಮಾಜಿ ಸಂಸದರ ಪುತ್ರ

|

Updated on: Oct 31, 2023 | 11:51 AM

ಎಲ್ಲರಿಗೂ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವು ಆಸ್ಪತ್ರೆಗಳಲ್ಲಿ ಅಹಿತರಕ ಘಟನೆಗಳು ನಡೆಯುತ್ತಲೇ ಇದೆ.ಬ್ಯಾಂಡ್ ಭೈರೋನ್​ನ ಬಿಜೆಪಿ ಮಾಜಿ ಸಂಸದ ಪ್ರಸಾದ್ ಮಿಶ್ರಾ ಅವರ ಪುತ್ರ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ಸ್ಟ್ರೆಚರ್​ನಲ್ಲಿಯೇ ಮಲಗಿ ಪ್ರಾಣಬಿಟ್ಟಿದ್ದಾರೆ.

ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ, ಸ್ಟ್ರೆಚರ್​ನಲ್ಲೇ ಪ್ರಾಣಬಿಟ್ಟ ಬಿಜೆಪಿಯ ಮಾಜಿ ಸಂಸದರ ಪುತ್ರ
ಆಸ್ಪತ್ರೆ
Image Credit source: Times Now
Follow us on

ಎಲ್ಲರಿಗೂ ವೈದ್ಯಕೀಯ ಮೂಲಸೌಕರ್ಯಗಳು ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹತ್ತು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಕೆಲವು ಆಸ್ಪತ್ರೆಗಳಲ್ಲಿ ಅಹಿತರಕ ಘಟನೆಗಳು ನಡೆಯುತ್ತಲೇ ಇದೆ.  ಬಿಜೆಪಿ ಮಾಜಿ ಸಂಸದ ಭೈರೋ​ ಪ್ರಸಾದ್ ಮಿಶ್ರಾ ಅವರ ಪುತ್ರ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ಸ್ಟ್ರೆಚರ್​ನಲ್ಲಿಯೇ ಮಲಗಿ ಪ್ರಾಣಬಿಟ್ಟಿರುವ ಘಟನೆ ವರದಿಯಾಗಿದೆ.

ಲಕ್ನೋದ ಸಂಜಯ್ ಗಾಂಧಿ ಪೋಸ್ಟ್​ ಗ್ರಾಜುಯೇಟ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಸ್ಪಂದಿಸದ ಕಾರಣ ಮಾಜಿ ಸಂಸದರ ಮಗ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ವಿಐಪಿಗಳಿಗೆ ಇಂತಹ ಗತಿ ಬಂದರೆ ಸಾಮಾನ್ಯ ಜನರ ಪಾಡೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.ಪ್ರಸಾದ್ ಮಿಶ್ರಾ ಅವರು ಶನಿವಾರ ರಾತ್ರಿ 11 ಗಂಟೆಗೆ ತಮ್ಮ ಮಗ ಪ್ರಕಾಶ್ ಮಿಶ್ರಾ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತಂದರು. ಪ್ರಕಾರ್ಶ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ತೀರಾ ಹದಗೆಟ್ಟಿತ್ತು.

ಮತ್ತಷ್ಟು ಓದಿ: ಎಂಆರ್​ಐ ಸ್ಕ್ಯಾನಿಂಗ್​ಗೆ ಹೆಚ್ಚು ಹಣ ನೀಡ್ತಿದ್ದೀರಾ? ಬೆಂಗಳೂರಿನ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸ್ಕ್ಯಾನಿಂಗ್​ಗೆ ಸರ್ಕಾರ ಚಿಂತನೆ

ಆಗ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ, ನಿಮ್ಮ ಮಗನಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ಅವರನ್ನು ಸ್ಟ್ರೆಚರ್​ನಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡುವಂತೆ ಕೇಳಲಾಯಿತು, ಆಗಲೇ ಪ್ರಕಾಶ್​ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರ ಆರೋಗ್ಯವನ್ನು ಸ್ಥಿರಗೊಳಿಸಲು ಯಾವುದೇ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಒಂದು ಗಂಟೆಯ ಬಳಿಕ ಪ್ರಕಾಶ್​ ಸಾವನ್ನಪ್ಪಿದ್ದಾರೆ.

ಬಳಿಕ ಮಾಜಿ ಸಂಸದರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ನಿರ್ದೇಶಕ ಪ್ರೊ ಆರ್​.ಕೆ ದಿಮಾನ್ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮಿಶ್ರಾ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
ಚಿತ್ರಕೂಟದಿಂದ ಬಂದಿರುವ ಭೈರೋ ಪ್ರಸಾದ್ ಮಿಶ್ರಾ 2014ರಲ್ಲಿ ಬಂಡಾದಿಂದ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ