ರಾಹುಲ್ ಗಾಂಧಿಯ ‘ಮೊಹಬ್ಬತ್​ ಕಿ ದುಕಾನ್’ ಕುರಿತ ಹೇಳಿಕೆಗೆ ಹಾಡಿನ ಮೂಲಕ ಬಿಜೆಪಿಯ ಉತ್ತರ

|

Updated on: Aug 11, 2023 | 11:56 AM

ಕಾಂಗ್ರೆಸ್​ನ ‘ಮೊಹಬ್ಬತ್​ ಕಿ ದುಕಾನ್’ ಹೇಳಿಕೆಗೆ ಹಾಡಿನ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡಿದೆ.ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಪ್ರೀತಿ ಇರುವುದು ಹೃದಯದಲ್ಲಿ ಅಂಗಡಿಯಲ್ಲಲ್ಲ, ಪ್ರೀತಿಯನ್ನು ಗಳಿಸಬೇಕು ಮಾರಾಟಕ್ಕೆ ಸಿಗುವುದಲ್ಲ, ಪ್ರೀತಿ ಎಂಬುದು ಹೃದಯದಲ್ಲಿರುತ್ತೆ ಅಂಗಡಿಯಲ್ಲಲ್ಲ ಎಂದು ಹಿಂದಿಯಲ್ಲಿ ಬರೆಯಲಾಗಿದೆ.

ರಾಹುಲ್ ಗಾಂಧಿಯ ‘ಮೊಹಬ್ಬತ್​ ಕಿ ದುಕಾನ್’ ಕುರಿತ ಹೇಳಿಕೆಗೆ ಹಾಡಿನ ಮೂಲಕ ಬಿಜೆಪಿಯ ಉತ್ತರ
ಮೋದಿ
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ‘ಮೊಹಬ್ಬತ್​ ಕಿ ದುಕಾನ್’ ಹೇಳಿಕೆಗೆ ಹಾಡಿನ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡಿದೆ.ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಪ್ರೀತಿ ಇರುವುದು ಹೃದಯದಲ್ಲಿ ಅಂಗಡಿಯಲ್ಲಲ್ಲ, ಪ್ರೀತಿಯನ್ನು ಗಳಿಸಬೇಕು ಮಾರಾಟಕ್ಕೆ ಸಿಗುವುದಲ್ಲ, ಪ್ರೀತಿ ಎಂಬುದು ಹೃದಯದಲ್ಲಿರುತ್ತೆ ಅಂಗಡಿಯಲ್ಲಲ್ಲ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದರು. ಈ ವೇಳೆ ಅವರು ತಮ್ಮ ಸರ್ಕಾರದ ಕಳೆದ 9 ವರ್ಷಗಳ ಎಲ್ಲಾ ಸಾಧನೆಗಳನ್ನು ವಿವರಿಸಿದರು. ಇದರೊಂದಿಗೆ ಪ್ರಧಾನಿಯವರು ಕಾಂಗ್ರೆಸ್‌ಗೆ ತಮ್ಮ ಸರ್ಕಾರದ ಹಗರಣಗಳು ಮತ್ತು ಎಲ್ಲಾ ಲೋಪಗಳನ್ನು ನೆನಪಿಸಿದರು. ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದರು.

ಕೆಲವು ದಿನಗಳಿಂದ ಮಳೆಗಾಲದ ಸಂಸತ್ ಅಧಿವೇಶನ ನಡೆಯುತ್ತಿದೆ, ಮಣಿಪುರ ವಿಚಾರವಾಗಿ ಸದನದಲ್ಲಿ ಗದ್ದಲ ಎದ್ದಿದೆ, ಪ್ರಧಾನಿಯವರು ಈ ಬಗ್ಗೆ ಉತ್ತರಿಸಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅಂತಿಮವಾಗಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ವಿರೋಧ ಪಕ್ಷಗಳಿಗೆ ಉತ್ತರಿಸಿದರು.

ಮತ್ತಷ್ಟು ಓದಿ: ಭಾರತದ ಆರ್ಥಿಕತೆ ಮುಳುಗಿಸುವ ಗ್ಯಾರಂಟಿ ನೀಡುತ್ತಿದ್ದಾರೆ; ಕಾಂಗ್ರೆಸ್ ಖಾತರಿಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ

ರಾಹುಲ್ ಗಾಂಧಿಯವರ ಮೊಹಬ್ಬದ್​ ಕಿ ದುಕಾನ್ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ, ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯಿಂದ ಈ ಚರ್ಚೆ ಆರಂಭವಾಗಿದೆ.

ಅವಿಶ್ವಾಸ ನಿರ್ಣಯವನ್ನು ತಮ್ಮ ಪಕ್ಷಕ್ಕೆ ಮಂಗಳಕರ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ಹಿಂದೆಯೂ ನಮ್ಮ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದಿಂದ ನಮಗೆ ಒಳ್ಳೆಯದೇ ಆಗಿತ್ತು ಎಂದು ಹೇಳಿದರು. ಆದರೆ ಈಗ ಈ ಬಾರಿಯ ಅವಿಶ್ವಾಸ ನಿರ್ಣಯವು ಎನ್‌ಡಿಎ ಮತ್ತು ಬಿಜೆಪಿ 2024 ರ ಚುನಾವಣೆಗಳಲ್ಲಿ ದಾಖಲೆಯ ಗೆಲುವಿಗೆ ಸಹಾಯ ಮಾಡುತ್ತದೆ ಎಂದು ತೋರುತ್ತದೆ. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಣಿಪುರದ ಬಗ್ಗೆಯೂ ಮಾತನಾಡಿದ್ದಾರೆ ಮತ್ತು ಅಲ್ಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಅಕ್ಷಮ್ಯ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಶ್ರಮಿಸುತ್ತಿವೆ. ಇಡೀ ದೇಶ, ಇಡೀ ಸದನವು ಅಲ್ಲಿನ ಎಲ್ಲಾ ತಾಯಂದಿರು ಮತ್ತು ಹೆಣ್ಣುಮಕ್ಕಳೊಂದಿಗೆ ನಿಂತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಒಟ್ಟಾಗಿ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

ಅವಿಶ್ವಾಸ ಗೊತ್ತುವಳಿ ಕುರಿತು ಪ್ರಧಾನಿ ಮೋದಿ ಭಾಷಣ ಮಾಡಿದ ಒಂದು ದಿನದ ನಂತರ ಇದೀಗ ಬಿಜೆಪಿಯಿಂದ ಒಂದು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿನ ವಿಡಿಯೋವನ್ನು ಭಾರತೀಯ ಜನತಾ ಪಾರ್ಟಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಹಿಂದಿನ ದಿನ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದಿಂದ ವಿಡಿಯೋ ಪ್ರಾರಂಭವಾಗುತ್ತದೆ.

ಬಿಜೆಪಿ ಬಿಡುಗಡೆ ಮಾಡಿರುವ ಹಾಡಿನ ಆರಂಭದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ತೋರಿಸಲಾಗಿದೆ. ತುರ್ತು ಪರಿಸ್ಥಿತಿ ಮಾತ್ರವಲ್ಲದೆ ವಂಶರಾಜಕಾರಣ ಮತ್ತು ಹಗರಣಗಳು, ಸರ್ಜಿಕಲ್ ಸ್ಟ್ರೈಕ್, ಭಾರತ್ ಜೋಡೋ ಯಾತ್ರೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:48 am, Fri, 11 August 23