AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆಯ ಇವೈ ಕಂಪನಿ ಉದ್ಯೋಗಿ ಸಾವು; ತನಿಖೆಗೆ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಒತ್ತಾಯ

ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಬಗ್ಗೆ ಸಂತ್ರಸ್ತೆಯ ತಾಯಿ ಮಾಡಿದ ಈ ಆರೋಪಗಳನ್ನು ತನಿಖೆ ಮಾಡುವಂತೆ ನಾನು ಭಾರತ ಸರ್ಕಾರ ಅವರನ್ನು ವಿನಂತಿಸುತ್ತೇನೆ, ಇದು ಯುವ, ಭವಿಷ್ಯದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ಜೀವನವನ್ನು ಬಲಿತೆಗೆದುಕೊಂಡಿತು" ಎಂದು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಪುಣೆಯ ಇವೈ ಕಂಪನಿ ಉದ್ಯೋಗಿ ಸಾವು;  ತನಿಖೆಗೆ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಒತ್ತಾಯ
ರಾಜೀವ್ ಚಂದ್ರಶೇಖರ್
Follow us
ರಶ್ಮಿ ಕಲ್ಲಕಟ್ಟ
|

Updated on: Sep 19, 2024 | 2:01 PM

ಪುಣೆ ಸೆಪ್ಟೆಂಬರ್ 19: ಪುಣೆಯ ಅರ್ನ್ಸ್ಟ್ ಅಂಡ್ ಯಂಗ್ (EY)ನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಚಾರ್ಟರ್ಡ್ ಅಕೌಂಟೆಂಟ್‌ನ ಸಾವಿನ ಕುರಿತು ಪ್ರತಿಕ್ರಿಯಿಸಿದ ಶಿವಸೇನಾ (UBT) ಸಂಸದೆ ಪ್ರಿಯಾಂಕಾ ಚತುರ್ವೇದಿ, ಕಂಪನಿಗಳು ಅಮೆರಿಕ ಅಥವಾ ಯುರೋಪ್‌ನಲ್ಲಿ ದೀರ್ಘಾವಧಿಯ ಕೆಲಸದ ಸಮಯವನ್ನು ವಿಧಿಸುವುದಕ್ಕಾಗಿ ಕಾನೂನು ಪರಿಶೀಲನೆಯಿಂದ ತಪ್ಪಿಸಿಕೊಳ್ಳಬಹುದೇ ಎಂದು ಕೇಳಿದ್ದಾರೆ. “ಅಮೆರಿಕ ಮತ್ತು ಯುರೋಪ್‌ನಂತಹ ದೇಶಗಳಲ್ಲಿ ಇವೈ ನ್ಯೂಸ್ ಗೆ ಕೆಲಸದ ಸಮಯ, ಟಾಕ್ಸಿಕ್ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಇದು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಪ್ರಿಯಾಂಕಾ ಚತುರ್ವೇದಿ ಸಾಮಾಜಿಕ ವೇದಿಕೆ ಎಕ್ಸ್‌ನಲ್ಲಿ ಬರೆದಿದ್ದಾರೆ. ಕೆಲಸ-ಜೀವನದ ಸಮತೋಲನವನ್ನು ಒದಗಿಸದ ಭಾರತೀಯ ಕಂಪನಿಗಳ ಮಾನವ ಸಂಪನ್ಮೂಲ (HR) ನೀತಿಗಳು ಇಂತಹ ಕೆಲಸದ ಸ್ಥಳದಲ್ಲಿ ಆತ್ಮಹತ್ಯೆಗೆ ಕಾರಣವೆಂದು ಅವರು ಹೇಳಿದರು.

“ಭಾರತದಲ್ಲಿ, ನಾವು 72-ಗಂಟೆಗಳ ಕೆಲಸದ ವಾರವನ್ನು ವೈಭವೀಕರಿಸುತ್ತೇವೆ, ಕೆಲಸ- ಜೀವನ ಸಮತೋಲನವನ್ನು ಹೊಂದಿಲ್ಲ ಎಂಬ ಕಲ್ಪನೆಯನ್ನು ನಾವು ವೈಭವೀಕರಿಸುತ್ತೇವೆ, ರಜೆ, ವಿರಾಮ ತೆಗೆದುಕೊಳ್ಳದೇ ಇರುವುದನ್ನು ವೈಭವೀಕರಿಸುತ್ತೇವೆ. ಅದಕ್ಕಾಗಿಯೇ ಹೆಚ್ಚಿನ ಕಂಪನಿಯ ಮಾನವ ಸಂಪನ್ಮೂಲ ತಂಡಗಳು ಉದ್ಯೋಗಿ ಜೀವನ ಮತ್ತು ಅದರ ಸ್ವಂತ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತವೆ ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.

ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ನಾಯಕರು

ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಘಟನೆಯು “ಹಲವು ಹಂತಗಳಲ್ಲಿ ಗೊಂದಲವನ್ನುಂಟುಮಾಡುತ್ತದೆ” ಎಂದು ಹೇಳಿದರು.  “ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಬಗ್ಗೆ ಸಂತ್ರಸ್ತೆಯ ತಾಯಿ ಮಾಡಿದ ಈ ಆರೋಪಗಳನ್ನು ತನಿಖೆ ಮಾಡುವಂತೆ ನಾನು ಭಾರತ ಸರ್ಕಾರ ಅವರನ್ನು ವಿನಂತಿಸುತ್ತೇನೆ, ಇದು ಯುವ, ಭವಿಷ್ಯದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ಜೀವನವನ್ನು ಬಲಿತೆಗೆದುಕೊಂಡಿತು” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು EY ನಲ್ಲಿ ಕೆಲಸದ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಕಾರ್ಮಿಕ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಂತ್ರಸ್ತೆ ಮತ್ತು ಇತರ ಪ್ರತಿಯೊಬ್ಬ ಉದ್ಯೋಗಿ ಜೊತೆಗೆ “ಕಠಿಣ ಮತ್ತು ವಿಷಕಾರಿ ವಾತಾವರಣ” ದಿಂದ ಬಳಲುತ್ತಿರುವವರು ನ್ಯಾಯಕ್ಕೆ ಅರ್ಹರು ಎಂದು ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅತಿಯಾದ ಕೆಲಸದೊತ್ತಡವೇ ಮಗಳ ಸಾವಿಗೆ ಕಾರಣ ಎಂದ ಅಮ್ಮ

ಸಂತ್ರಸ್ತೆ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ 2023 ರಲ್ಲಿ ತನ್ನ CA ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು ಮತ್ತು ಪುಣೆಯ EY ಗ್ಲೋಬಲ್‌ನ ಸದಸ್ಯ ಸಂಸ್ಥೆಯಾದ ಎಸ್ ಆರ್ ಬತ್ಲಿಬಾಯ್ ನಲ್ಲಿ ಆಡಿಟ್ ತಂಡದ ಭಾಗವಾಗಿ ಇವೈನಲ್ಲಿ ನಾಲ್ಕು ತಿಂಗಳ ಕಾಲ ಕೆಲಸ ಮಾಡಿದರು.”ಅತಿಯಾದ ಕೆಲಸದ ಒತ್ತಡದಿಂದ ಮಗಳು ಸಾವಿಗೀಡಾಗಿದ್ದಾಳೆ ಎಂದು ಅನ್ನಾ ಅವರ ತಾಯಿ ಅನಿತಾ ಅಗಸ್ಟೀನ್ ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕಳಪೆ ಉತ್ಪನ್ನಕ್ಕೆ ಹೊಳಪು ಕೊಡುವ ಕೆಲಸ ಮಾಡ್ತಿದ್ದೀರಾ ಎಂದು ಖರ್ಗೆಯನ್ನು ಪ್ರಶ್ನಿಸಿದ ನಡ್ಡಾ

ತನ್ನ ಪತ್ರದಲ್ಲಿ, ಅನ್ನಾ ಅವರ ತಾಯಿ ಇದು ತನ್ನ ಮಗಳ ಮೊದಲ ಕೆಲಸ ಎಂದು ಹೇಳಿಕೊಂಡಿದ್ದಾರೆ. ಆರೆ ಕಂಪನಿಗೆ ಸೇರಲು ಉತ್ಸುಕರಾಗಿದ್ದರು. ಆದರೆ ಕೇವಲ ನಾಲ್ಕು ತಿಂಗಳೊಳಗೆ ಅವಳು “ಅತಿಯಾದ ಕೆಲಸದ ಹೊರೆ”ಗೆ ಬಲಿಯಾದಳು. ಆಕೆ ತಡರಾತ್ರಿ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದಳು, ಹೆಚ್ಚಿನ ದಿನಗಳಲ್ಲಿ ಸಂಪೂರ್ಣವಾಗಿ ದಣಿದು ಪಿಜಿಯಿಂದ ಮನೆಗೆ ಬರುತ್ತಿದ್ದಳು. ಆಕೆ ಹೊಸಬಳಾದ ಕಾರಣ ಆಕೆಗೆ ಹೆಚ್ಚಿನ ಕೆಲಸದ ಹೊರೆ ಇತ್ತು. ಕಂಪನಿಯಿಂದ ಯಾರೂ ಅವಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್