ತ್ರಿಪುರ: ಬಿಜೆಪಿಗೆ ರಾಜೀನಾಮೆ ನೀಡಿದ ಶಾಸಕ ಬುರ್ಬಾ ಮೋಹನ್ ತ್ರಿಪುರಾ

| Updated By: ರಶ್ಮಿ ಕಲ್ಲಕಟ್ಟ

Updated on: Sep 23, 2022 | 5:01 PM

ತ್ರಿಪುರಾದ ಬಿಜೆಪಿ ಶಾಸಕ ಬುರ್ಬಾ ಮೋಹನ್​​ ರಾಜೀನಾಮೆ. ಇವರು ಪ್ರಾದೇಶಿಕ ಪಕ್ಷ ತಿಪ್ರಾ ಮೋಥಾ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತ್ರಿಪುರ: ಬಿಜೆಪಿಗೆ ರಾಜೀನಾಮೆ ನೀಡಿದ ಶಾಸಕ ಬುರ್ಬಾ ಮೋಹನ್ ತ್ರಿಪುರಾ
Follow us on

ಬಿಜೆಪಿ (BJP) ಶಾಸಕ ಬುರ್ಬಾ ಮೋಹನ್ ತ್ರಿಪುರಾ (Burba Mohan Tripura) ಇಂದು (ಶುಕ್ರವಾರ)  ತ್ರಿಪುರ ವಿಧಾನಸಭೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಮೋಹನ್ ಅವರು ನಾಯಕ ಪ್ರಾದೇಶಿಕ ಪಕ್ಷ ತಿಪ್ರಾ ಮೋಥಾ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗೋಮತಿ ಜಿಲ್ಲೆಯ ಕಾರ್ಬುಕ್‌ನ ಶಾಸಕರಾದ  ಬುರ್ಬಾ ಮೋಹನ್ ತಮ್ಮ ರಾಜೀನಾಮೆ ಪತ್ರದಲ್ಲಿ ವಿಧಾನಸಭೆಯ ಸದಸ್ಯತ್ವ ತ್ಯಜಿಸಲು “ವೈಯಕ್ತಿಕ ಕಾರಣಗಳನ್ನು” ಉಲ್ಲೇಖಿಸಿದ್ದಾರೆ. ಕಾರ್ಬುಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ನನ್ನನ್ನು ಭೇಟಿ ಮಾಡಿ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅವರು ತಿಪ್ರಾ ಮೋಥಾ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರೊಂದಿಗೆ ಇದ್ದರು ಎಂದು ತ್ರಿಪುರಾ ವಿಧಾನಸಭಾ ಸ್ಪೀಕರ್ ರತನ್ ಚಕ್ರವರ್ತಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಅವರು ಕಾರ್ಯವಿಧಾನವನ್ನು ಅನುಸರಿಸಿದ್ದರಿಂದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ.

ನಾನು ಈ ಮೂಲಕ 43 (ಎಸ್‌ಟಿ) ಕಾರ್ಬುಕ್‌  ಕ್ಷೇತ್ರದ ಅಸೆಂಬ್ಲಿ ಸ್ಥಾನದ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಮತ್ತು ನನ್ನ ರಾಜೀನಾಮೆಯನ್ನು ದಯವಿಟ್ಟು   ಸ್ವೀಕರಿಸಲು ವಿನಂತಿಸುತ್ತೇನೆ ಎಂದು ಅವರ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಆದಾಗ್ಯೂ  ರಾಜೀನಾಮೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ತ್ರಿಪುರಾ ಅವರ ನಿಕಟ ಮೂಲಗಳು ಅವರು ಶೀಘ್ರದಲ್ಲೇ ತಿಪ್ರಾ ಮೋಥಾಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಮಾಜಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ನೇತೃತ್ವದಲ್ಲಿ ಆಗಿನ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವಿರುದ್ಧ ಬಂಡಾಯ ಎದ್ದಿರುವ ಬಿಜೆಪಿ ಶಾಸಕರಲ್ಲಿ ತ್ರಿಪುರಾ ಕೂಡ ಒಬ್ಬರು. ಬರ್ಮನ್ ಅವರು ತಮ್ಮ ಆಪ್ತ ಮತ್ತು ಮಾಜಿ ಶಾಸಕ ಆಶಿಶ್ ಕುಮಾರ್ ಸಹಾ ಅವರೊಂದಿಗೆ ಬಿಜೆಪಿ ತೊರೆದ ನಂತರ, ಪಕ್ಷದೊಳಗಿನ ಬಿರುಕು ಶಾಂತವಾಯಿತು.

 

Published On - 4:10 pm, Fri, 23 September 22