ಪ್ರಧಾನಿಯಾಗುವ ಬಯಕೆಯಿಂದ ನಿತೀಶ್ ಕುಮಾರ್ ಬಿಜೆಪಿ ಬೆನ್ನಿಗೆ ಚೂರಿ ಹಾಕಿದರು: ಬಿಹಾರದಲ್ಲಿ ಅಮಿತ್ ಶಾ

ಪ್ರಧಾನಿಯಾಗಬೇಕೆಂಬ ಆಸೆಯಿಂದ ನಿತೀಶ್ ಕುಮಾರ್ ಬೆನ್ನಿಗೆ ಚೂರಿ ಹಾಕಿದ್ದು, ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ. ನಾವು ಪೂರ್ಣ ಬಹುಮತದೊಂದಿಗೆ 2025 ರ ಚುನಾವಣೆಯಲ್ಲಿ ಇಲ್ಲಿ ಅಧಿಕಾರಕ್ಕೆ ಬರಲಿದ್ದೇವೆ" ಎಂದ ಶಾ.

ಪ್ರಧಾನಿಯಾಗುವ ಬಯಕೆಯಿಂದ ನಿತೀಶ್ ಕುಮಾರ್ ಬಿಜೆಪಿ ಬೆನ್ನಿಗೆ ಚೂರಿ ಹಾಕಿದರು: ಬಿಹಾರದಲ್ಲಿ ಅಮಿತ್ ಶಾ
ಅಮಿತ್ ಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 23, 2022 | 3:59 PM

ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಪ್ರಧಾನಿಯಾಗುವ ಬಯಕೆಯಿಂದ  ಆರ್‌ಜೆಡಿ, ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದ ಅಮಿತ್ ಶಾ, ನಿತೀಶ್ ಕುಮಾರ್‌ಗೆ ಯಾವುದೇ ಸಿದ್ಧಾಂತವಿಲ್ಲ ಎಂದಿದ್ದಾರೆ. 2014 ರಲ್ಲಿ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೇವಲ 2 ಲೋಕಸಭಾ ಸ್ಥಾನಗಳನ್ನು ಹೊಂದಿದ್ದರು, ‘ನಾ ಘರ್ ಕೆ ರಹೇ ಥೆ, ನಾ ಘಾಟ್ ಕೆ’. 2024 ರ ಲೋಕಸಭೆ ಚುನಾವಣೆ ಬರಲಿ, ಬಿಹಾರದ ಸಾರ್ವಜನಿಕರು ಲಾಲು-ನಿತೀಶ್ ಜೋಡಿಯನ್ನು ಅಳಿಸಿ ಹಾಕುತ್ತಾರೆ ಎಂದಿದ್ದಾರೆ ಶಾ. ಶುಕ್ರವಾರ ಪೂರ್ಣೆಯಾದಲ್ಲಿ ‘ಜನ ಭಾವನಾ ಮಹಾಸಭಾ’ದಲ್ಲಿ ಮಾತನಾಡುತ್ತಿದ್ದರವರು. ನಾವು ಸ್ವಾರ್ಥ ಮತ್ತು ಅಧಿಕಾರದ ಬದಲಿಗೆ ಸೇವೆ ಮತ್ತು ಅಭಿವೃದ್ಧಿಯ ರಾಜಕೀಯವನ್ನು ನಂಬುತ್ತೇವೆ. ಪ್ರಧಾನಿಯಾಗಬೇಕೆಂಬ ಆಸೆಯಿಂದ ನಿತೀಶ್ ಕುಮಾರ್ ಬೆನ್ನಿಗೆ ಚೂರಿ ಹಾಕಿದ್ದು, ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ. ನಾವು  ಪೂರ್ಣ ಬಹುಮತದೊಂದಿಗೆ 2025 ರ ಚುನಾವಣೆಯಲ್ಲಿ ಇಲ್ಲಿ ಅಧಿಕಾರಕ್ಕೆ ಬರಲಿದ್ದೇವೆ” ಎಂದು ಶಾ ಹೇಳಿದ್ದಾರೆ.

ಬಿಹಾರದ ಸಾರ್ವಜನಿಕರು ಸಿಎಂ ನಿತೀಶ್ ಕುಮಾರ್‌ಗೆ ಅನುಮಾನದ ಲಾಭವನ್ನು ಬಹಳ ಸಮಯದಿಂದ ನೀಡಿದರು. ಈಗ ಅವರಿಗೆ ತಿಳಿದಿದೆ, ಲಾಲು ಅವರ ಪಕ್ಷ ಅಥವಾ ನಿಮ್ಮ ಪಕ್ಷವು ಈ ಬಾರಿ ಬರುವುದಿಲ್ಲ. ಈ ಬಾರಿ ಬಿಹಾರದಲ್ಲಿ ಪ್ರಧಾನಿ ಮೋದಿಯವರ ಕಮಲ ಮಾತ್ರ ಅರಳಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಬಿಹಾರದ ಸೀಮಾಂಚಲ್ ಪ್ರದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಅಮಿತ್ ಶಾ ಪಕ್ಷ ಮತ್ತು ಆಡಳಿತ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಅಮಿತ್ ಶಾ  ಭಾಷಣದ ಮುಖ್ಯಾಂಶಗಳು

  1. ರಾಜಕೀಯ ಮೈತ್ರಿ ಬದಲಿಸಿ ನಿತೀಶ್ ಬಾಬು ಪ್ರಧಾನಿಯಾಗಬಹುದೇ? ಅವರು  ರಾಜಕೀಯಕ್ಕೆ ಬಂದಾಗಿನಿಂದಲೂ ಹಲವರಿಗೆ ದ್ರೋಹ ಬಗೆದಿದ್ದಾರೆ. ಲಾಲೂ ಜೀ, ನಿತೀಶ್ ಬಾಬು ನಾಳೆ ನಿಮ್ಮನ್ನು ಬಿಟ್ಟು ಕಾಂಗ್ರೆಸ್ ಮಡಿಲಲ್ಲಿ ಕುಳಿತುಕೊಳ್ಳಬಹುದು ಎಚ್ಚರ.
  2. ಲಾಲು-ನಿತೀಶ್ ಜೋಡಿ ಈಗ ಬಯಲಾಗಿದೆ, ಈಗ ಬಿಹಾರ ಅಭಿವೃದ್ಧಿಗೆ ಬಿಜೆಪಿ ಬೇಕು. ಮೋದಿಜಿ ಬಿಹಾರದಿಂದ ಮಾವೋವಾದವನ್ನು ನಿರ್ನಾಮ ಮಾಡಿದರು.
  3. ಬಿಹಾರದ ಜನರಿಗೆ ನೀವೇನೆಂದು ತಿಳಿದಿದೆ . ಮತದಾರರು ಆರ್‌ಜೆಡಿ  ಮತ್ತು  ಜೆಡಿಯು ಎರಡನ್ನೂ ತಿರಸ್ಕರಿಸುತ್ತಾರೆ.  ಅವರು ಬಿಜೆಪಿಗೆ ಮತ ಹಾಕುತ್ತಾರೆ.
  4. ನಿಮಗೆ ಕಡಿಮೆ ಸೀಟು ಬಂದ ಮೇಲೂ ನಿಮ್ಮನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು, ಆದರೆ ನೀವು ನಮಗೆ ದ್ರೋಹ ಬಗೆದಿದ್ದೀರಿ. 2024ರ ಲೋಕಸಭೆ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ ಪಾಠ ಕಲಿಸುತ್ತಾರೆ.
  5. ಪ್ರಧಾನಿಯಾಗಲು ನಿತೀಶ್  ಬಿಜೆಪಿಗೆ ದ್ರೋಹ ಮಾಡಿದ್ದಾರೆ
  6. ಇಂದು ನಾನು ಗಡಿ ಜಿಲ್ಲೆಗೆ ಬಂದಾಗ, ಲಾಲು ಯಾದವ್ (ಆರ್‌ಜೆಡಿ ಮುಖ್ಯಸ್ಥ) ಮತ್ತು (ಸಿಎಂ) ನಿತೀಶ್ ಕುಮಾರ್ ಜೋಡಿಗೆ ಹೊಟ್ಟೆ ಉರಿ ಆಗ್ತಿದೆ. ಅವರು ಅಶಾಂತಿಯನ್ನು ಹುಟ್ಟುಹಾಕಲು ಬಯಸುತ್ತಾರೆ. ನಿತೀಶ್ ಜೀ ಲಾಲು ಜಿ ಅವರ ಮಡಿಲಲ್ಲಿ ಕುಳಿತಿರುವಾಗ, ಗಡಿ ಜಿಲ್ಲೆಗಳು ಭಾರತದ ಒಂದು ಭಾಗವೆಂದು ಹೇಳಲು ನಾನು ಇಲ್ಲಿದ್ದೇನೆ. ಭಯಪಡಬೇಡಿ
  7. ಬಿಹಾರ ರಾಜ್ಯ ಇತಿಹಾಸದಲ್ಲಿ ಬದಲಾವಣೆಯ ಕೇಂದ್ರವಾಗಿದೆ. ಇಂದು ನಿತೀಶ್ ಬಿಜೆಪಿಗೆ ದ್ರೋಹ ಬಗೆದು ಲಾಲು ಪ್ರಸಾದ್ ಜೊತೆಗೂಡಿ ಸರ್ಕಾರ ರಚಿಸಿದ್ದಾರೆ.
  8. ಲಾಲು ಪ್ರಸಾದ್ ಜೊತೆ ನಿತೀಶ್ ಕುಮಾರ್ ಸರ್ಕಾರ ರಚಿಸಿದ ನಂತರ ಬಿಹಾರದ ಗಡಿ ಜಿಲ್ಲೆಗಳಲ್ಲಿ ಭಯದ ವಾತಾವರಣವಿದೆ

Published On - 3:51 pm, Fri, 23 September 22