Gautam Gambhir ಐಸಿಸ್​​ನಿಂದ ಜೀವ ಬೆದರಿಕೆ ಕರೆ: ಪೊಲೀಸರಿಗೆ ದೂರು ನೀಡಿದ ಬಿಜೆಪಿ ಸಂಸದ ಗೌತಮ್ ಗಂಭೀರ್

Gautam Gambhir Death Threat 'ಐಸಿಸ್ ಕಾಶ್ಮೀರ'ದಿಂದ (ISIS Kashmir) ತನಗೆ ಜೀವ ಬೆದರಿಕೆ ಇದೆ ಎಂದುದೆಹಲಿಯ ಬಿಜೆಪಿ (BJP) ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

Gautam Gambhir ಐಸಿಸ್​​ನಿಂದ ಜೀವ ಬೆದರಿಕೆ ಕರೆ: ಪೊಲೀಸರಿಗೆ ದೂರು ನೀಡಿದ ಬಿಜೆಪಿ ಸಂಸದ ಗೌತಮ್ ಗಂಭೀರ್
ಗೌತಮ್ ಗಂಭೀರ್
Updated By: ರಶ್ಮಿ ಕಲ್ಲಕಟ್ಟ

Updated on: Nov 24, 2021 | 11:07 AM

ದೆಹಲಿ: ದೆಹಲಿಯ ಬಿಜೆಪಿ (BJP) ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ‘ಐಸಿಸ್ ಕಾಶ್ಮೀರ’ದಿಂದ (ISIS Kashmir) ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವುದಾಗಿ ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸಂಬಂಧ ಗಂಭೀರ್ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಡಿಸಿಪಿ ಸೆಂಟ್ರಲ್ ಶ್ವೇತಾ ಚೌಹಾಣ್ ಎಎನ್‌ಐಗೆ ತಿಳಿಸಿದ್ದಾರೆ. ಗೌತಮ್ ಗಂಭೀರ್‌ಗೆ ಇ-ಮೇಲ್ ಮೂಲಕ ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆಗಳು ಬಂದಿವೆ. ತನಿಖೆ  ನಡೆಯುತ್ತಿದೆ. ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಶ್ವೇತಾ ಚೌಹಾಣ್ ಹೇಳಿದ್ದಾರೆ. ಪೂರ್ವ ದೆಹಲಿಯನ್ನು ಪ್ರತಿನಿಧಿಸುವ 40 ವರ್ಷದ ಕ್ರಿಕೆಟಿಗ-ರಾಜಕಾರಣಿ, ಅವರು ಮಂಗಳವಾರ ಇಮೇಲ್ ಲಭಿಸಿರುವುದಾಗಿ ಹೇಳಿದ್ದಾರೆ.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

ಇದನ್ನೂ ಓದಿ: Gautam Gambhir: ಟೀಮ್ ಇಂಡಿಯಾದಲ್ಲಿ ಈತ ಇನ್ನೂ ಸ್ಥಾನ ಪಡೆದಿರುವುದು ಅದೃಷ್ಟವೇ ಸರಿ ಎಂದ ಗೌತಮ್ ಗಂಭೀರ್

Published On - 10:54 am, Wed, 24 November 21