ಭೋಪಾಲ್: ನನಗೆ ಕೊರೊನಾ ಸೋಂಕು ತಗುಲಿಲ್ಲ. ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್ ನೀಡಿರುವ ಹೇಳಿಕೆ ಆಕ್ಷೇಪಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್ ಹೀಗೆ ಹೇಳಿಕೆ ನೀಡಿದ್ದರು. ನನಗೆ ಕೊರೊನಾ ತಗುಲಿಲ್ಲ. ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ ಎಂದು ಹೇಳಿದ್ದರು.
ಪ್ರಗ್ಯಾಸಿಂಗ್ ಹೇಳಿಕೆಗೆ ವಿಜ್ಞಾನಿಗಳು, ತಜ್ಞರ ಆಕ್ಷೇಪ ವ್ಯಕ್ತವಾಗಿದೆ. ಇಂತಹವರು ಕೊವಿಡ್ ಈಡಿಯಟ್ಸ್ ಎಂದು ಹಲವರು ಆಕ್ಷೇಪಿಸಿದ್ದಾರೆ. ಕೊರೊನಾದಿಂದ ಸಂಭವಿಸುವ ಶ್ವಾಸಕೋಶದ ಸಮಸ್ಯೆಗಳನ್ನು ಗೋಮೂತ್ರ ಕಡಿಮೆ ಮಾಡುತ್ತದೆ. ನಾನು ದಿನನಿತ್ಯ ಗೋಮೂತ್ರ ಸೇವಿಸುತ್ತೇನೆ. ಅದರಿಂದ ನಾನು ಕೊರೊನಾ ವಿರುದ್ಧ ಯಾವುದೇ ಔಷಧ ತೆಗೆದುಕೊಳ್ಳಬೇಕು ಎಂದಿಲ್ಲ. ನನಗೆ ಕೊರೊನಾ ಇಲ್ಲ ಎಂದು ಪ್ರಗ್ಯಾಸಿಂಗ್ ಹೇಳಿದ್ದಾರೆ.
ಎರಡು ವರ್ಷಗಳ ಮೊದಲು ಗೋಮೂತ್ರ ಹಾಗೂ ಇತರ ಹಸುವಿನ ಉತ್ಪನ್ನಗಳಿಂದ ತನ್ನ ಕ್ಯಾನ್ಸರ್ ಗುಣವಾಗಿತ್ತು ಎಂದು ಪ್ರಗ್ಯಾಸಿಂಗ್ ಹೇಳಿಕೊಂಡಿದ್ದರು.
ಇದಕ್ಕೂ ಮೊದಲು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಿದರೆ ಕೊರೊನಾವೈರಸ್ ನಿಂದ ರಕ್ಷಣೆ ಪಡೆಯಬಹುದು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದರು. ಉತ್ತರ ಪ್ರದೇಶದ ಬೈರಿಯಾ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಗೋಮೂತ್ರವನ್ನು ಹೇಗೆ ಸೇವಿಸಬೇಕು ಎಂಬ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದರು.
ವಿಡಿಯೊದಲ್ಲಿ ಪತಂಜಲಿ ಗೋಮೂತ್ರದ ಬಾಟಲಿ ಹಿಡಿದುಕೊಂಡಿರುವ ಸಿಂಗ್ ಅದರಿಂದ 50 ಮಿಲಿ ಲೀಟರ್ ಗೋಮೂತ್ರವನ್ನು ತಣ್ಣೀರಲ್ಲಿ ಬೆರೆಸಿ ಪ್ರತಿದಿನ ಬೆಳಗ್ಗೆ ಕುಡಿದರೆ ಕೊರೊನಾವೈರಸ್ ವಿರುದ್ಧ ನೈಸರ್ಗಿಕ ಪ್ರತಿರೋಧಶಕ್ತಿ ಸಿಗುತ್ತದೆ ಎಂದಿದ್ದರು.
ಭಾರತದಲ್ಲಿ ಕೊವಿಡ್ ಎರಡನೇ ಅಲೆ ಇರುವಾಗಲೂ ನಾನು ಪ್ರತಿದಿನ ಸರಿ ಸುಮಾರು 18 ಗಂಟೆಗಳ ಕಾಲ ಜನರೊಂದಿಗೆ ಹೊರಗೆ ಇರುತ್ತೇನೆ. ಆದರೂ ನಾನು ಆರೋಗ್ಯವಂತನಾಗಿದ್ದೇನೆ ಎಂದಿದ್ದರು.
ಇದನ್ನೂ ಓದಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ
ಡಿಸೆಂಬರ್ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ; ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸುತ್ತಿರುವ ಕೇಂದ್ರ
Published On - 6:45 pm, Mon, 17 May 21