ಬಿ.ವಿ.ಶ್ರೀನಿವಾಸ್, ಬಿಜೆಪಿ ಎಂಪಿ ಗೌತಮ್ ಗಂಭೀರ್ಗೆ ಕ್ಲೀನ್ಚಿಟ್ ಕೊಟ್ಟ ದೆಹಲಿ ಪೊಲೀಸರ ಬಗ್ಗೆ ಹೈಕೋರ್ಟ್ ಅಸಮಾಧಾನ; ಹೆಚ್ಚಿನ ತನಿಖೆಗೆ ಸೂಚನೆ
ದೆಹಲಿ ಪೊಲೀಸರು ನೀಡಿದ ಈ ವರದಿ ತೃಪ್ತಿದಾಯಕವಾಗಿಲ್ಲ ಎಂದು ನ್ಯಾಯಾಧೀಶರಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠ ಹೇಳಿದೆ. ಈ ವಿಚಾರದಲ್ಲಿ ಇನ್ನಷ್ಟು ತನಿಖೆ ಅಗತ್ಯವಿದೆ ಎಂದೂ ತಿಳಿಸಿದೆ.
ದೆಹಲಿ: ಯುತ್ ಕಾಂಗ್ರೆಸ್ ಬಿ.ವಿ.ಶ್ರೀನಿವಾಸ್, ಬಿಜೆಪಿ ಎಂಪಿ ಗೌತಮ್ ಗಂಭೀರ್ ಮತ್ತಿತರಿಗೆ ಕ್ಲೀನ್ಚಿಟ್ ಕೊಟ್ಟ ದೆಹಲಿ ಪೊಲೀಸರ ವರದಿ ತೃಪ್ತಿ ತಂದಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ಶ್ರೀನಿವಾಸ್, ಗೌತಮ್ ಗಂಭೀರ್ ಸೇರಿ ಹಲವು ರಾಜಕಾರಣಿಗಳು ದೆಹಲಿಯಲ್ಲಿ ಮೆಡಿಕಲ್ ಮಾಫಿಯಾ ನಡೆಸುತ್ತಿದ್ದಾರೆ. ಆಕ್ಸಿಜನ್, ಕೊವಿಡ್ 19 ಔಷಧ ಮತ್ತಿತರ ವಸ್ತುಗಳನ್ನು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದು, ಈ ಮೂಲಕ ಹಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಾ.ದೀಪಕ್ ಎಂಬುವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ದೆಹಲಿ ಪೊಲೀಸರ ಬಳಿಯೂ ವರದಿ ಕೇಳಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಪೊಲೀಸ್ ಕ್ರೈಂ ಬ್ರ್ಯಾಂಚ್, ಶ್ರೀನಿವಾಸ್ ಸೇರಿ ಹಲವು ರಾಜಕಾರಣಿಗಳ ವಿಚಾರಣೆ ನಡೆಸಿದ್ದೇವೆ. ಅವರ್ಯಾರೂ ಮೆಡಿಕಲ್ ಮಾಫಿಯಾ ನಡೆಸುತ್ತಿಲ್ಲ. ಬದಲಿಗೆ ಸ್ವಯಂಪ್ರೇರಣೆಯಿಂದ ಕೊವಿಡ್ 19 ರೋಗಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಹಣವನ್ನೂ ಪಡೆಯುತ್ತಿಲ್ಲ ಎಂಬುದು ಗೊತ್ತಾಗಿದೆ. ಇನ್ನು ಅವರು ವೈದ್ಯಕೀಯ ಔಷಧ, ಉಪಕರಣಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯೂ ಇಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತ್ತು.
ಆದರೆ ದೆಹಲಿ ಪೊಲೀಸರು ನೀಡಿದ ಈ ವರದಿ ತೃಪ್ತಿದಾಯಕವಾಗಿಲ್ಲ ಎಂದು ನ್ಯಾಯಾಧೀಶರಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ಪೀಠ ಹೇಳಿದೆ. ಈ ವಿಚಾರದಲ್ಲಿ ಇನ್ನಷ್ಟು ತನಿಖೆ ಅಗತ್ಯವಿದೆ ಎಂದೂ ತಿಳಿಸಿದೆ. ಕಾಳಸಂತೆಯಲ್ಲಿ ವೈದ್ಯಕೀಯ ಉಪಕರಣಗಳು, ಔಷಧಗಳ ಮಾರಾಟ ಅಪರಾಧ. ಯಾರೋ ರಾಜಕೀಯ ವ್ಯಕ್ತಿಗಳು ಇದರಲ್ಲಿ ಇದ್ದ ಮಾತ್ರಕ್ಕೆ ಅದನ್ನು ತನಿಖೆ ನಡೆಸದೆ ಇರಬಾರದು ಎಂದೂ ಹೇಳಿದೆ. ಇನ್ನಷ್ಟು ತನಿಖೆ ಮಾಡಿ, ಮೇ 24ರೊಳಗೆ ಸಂಪೂರ್ಣ ಸ್ಥಿತಿಗತಿಯ ವರದಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸರಿಗೆ ಸೂಚಿಸಿದೆ.
ಇದನ್ನೂ ಓದಿ: ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರವಹಿಸಿ; ಕೇಂದ್ರ ಆರೋಗ್ಯ ಇಲಾಖೆ ಸೂಚನೆ
ಶೋ ಶೂಟಿಂಗ್ ವೇಳೆ ಪ್ರಿಯಾಂಕಾ ಪತಿ ನಿಕ್ ಜೋನಸ್ಗೆ ಗಾಯ, ಆಸ್ಪತ್ರೆಗೆ ದಾಖಲು