ಬಿಜೆಪಿ (BJP) ರಾಜ್ಯಸಭಾ ಚುನಾವಣೆಗೆ (Rajya Sabha Election) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ (Nirmala sitharaman) ಮತ್ತು ನಟ ಜಗ್ಗೇಶ್ (Jaggesh) ಸ್ಪರ್ಧಿಸಲಿದ್ದಾರೆ. ಎರಡು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿ ಘೋಷಣೆ ಮಾಡಿರುವ ಬಿಜೆಪಿ ಮತ್ತೊಮ್ಮೆ ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಿದ್ದು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಜಗ್ಗೇಶ್ ಅವರನ್ನೂ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದೆ. ಏತನ್ಮಧ್ಯೆ, 2ನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿಗೆ ಟಿಕೆಟ್ ಕೈ ತಪ್ಪಿದೆ. ಇನ್ನುಳಿದ ರಾಜ್ಯಗಳಲ್ಲಿ ಮಹಾರಾಷ್ಟ್ರದಿಂದ ಪಿಯೂಷ್ ಗೋಯಲ್, ಡಾ ಅನಿಲ್ ಸುಖದೇವ್ ರಾವ್ ಬೋಂಡೆ ಸ್ಪರ್ಧಿಸಲಿದ್ದಾರೆ. ರಾಜಸ್ಥಾನದಿಂದ ಘನಶ್ಯಾಮ್ ತಿವಾರಿ, ಉತ್ತರಪ್ರದೇಶದಿಂದ ಲಕ್ಷ್ಮೀಕಾಂತ್ ವಾಜಪೇಯಿ ಮತ್ತು ಡಾ. ರಾಧಾ ಮೋಹನ್ ಅಗರವಾಲ್ ಕಣಕ್ಕಿಳಿಯಲಿದ್ದಾರೆ.
Bharatiya Janata Party (BJP) releases its list of candidates for elections to the Rajya Sabha. Nirmala Sitharaman to contest from Karnataka, Piyush Goyal from Maharashtra. pic.twitter.com/3wy950APhT
— ANI (@ANI) May 29, 2022
ಉತ್ತರ ಪ್ರದೇಶದಿಂದ ಸುಂದರ ಸಿಂಗ್ ನಾಗರ್, ಬಾಬುರಾಮ್ ನಿಶಾದ್, ದರ್ಶನಾ ಸಿಂಗ್ ,ಸಂಗೀತಾ ಯಾದವ್ಗೆ ಬಿಜೆಪಿ ಟಿಕೆಟ್ ನೀಡಿದೆ. ಉತ್ತರಾಖಂಡದಿಂದ ಡಾ. ಕಲ್ಪನಾ ಸೈನಿ, ಬಿಹಾರದಿಂದ ಸತೀಶ್ ಚಂದ್ರ ದುಬೆ ಮತ್ತು ಶಂಭು ಶರಣ್ ಪಾಟೀಲ್, ಹರ್ಯಾಣದಿಂದ ಕಷ್ಣ ಲಾಲ್ ಪನ್ವಾರ್ ಅವರಿಗೆ ಅವಕಾಶ ನೀಡಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:19 pm, Sun, 29 May 22