ಬಿಜೆಪಿ ದಶಕಗಳ ಕಾಲ ಪ್ರಭಾವಶಾಲಿಯಾಗಿಯೇ ಇರಲಿದೆ: ಭವಿಷ್ಯ ನುಡಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

| Updated By: ರಶ್ಮಿ ಕಲ್ಲಕಟ್ಟ

Updated on: Oct 28, 2021 | 11:30 AM

Prashant Kishor ಬಿಜೆಪಿಯು ಭಾರತದ ರಾಜಕೀಯದ ಕೇಂದ್ರಬಿಂದುವಾಗಿದೆ, ಅವರು ಗೆದ್ದರೂ, ಸೋತರೂ ಈ ಮೊದಲು 40 ವರ್ಷ ಕಾಂಗ್ರೆಸ್ ಇದ್ದಂತೆ ಇರುತ್ತಾರೆ. ಬಿಜೆಪಿ ಇಲ್ಲಿಯೇ ಇರುತ್ತದೆ. ಒಮ್ಮೆ ನೀವು ದೇಶದಲ್ಲಿ ಮಟ್ಟದಲ್ಲಿ ಶೇ 30 ಮತಗಳನ್ನು ಪಡೆದುಕೊಂಡರೆ, ಅಷ್ಟು ಬೇಗನೆ ನೀವು ಹೋಗಲಾರಿರಿ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

ಬಿಜೆಪಿ ದಶಕಗಳ ಕಾಲ ಪ್ರಭಾವಶಾಲಿಯಾಗಿಯೇ ಇರಲಿದೆ: ಭವಿಷ್ಯ ನುಡಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್
Follow us on

ದೆಹಲಿ: ಭಾರತೀಯ ಜನತಾ ಪಕ್ಷವು (BJP) ಮುಂದಿನ ದಶಕಗಳವರೆಗೆ ಭಾರತೀಯ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಮುಂದುವರಿಯುತ್ತದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಗೋವಾ ಭೇಟಿಯ ಸಂದರ್ಭದಲ್ಲಿ ಹೇಳಿದ್ದಾರೆ. ಚುನಾವಣಾ ಸಲಹಾ ಸಂಸ್ಥೆಯಾದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (IPAC) ಮುಖ್ಯಸ್ಥರು ಆಗಿರುವ ಪ್ರಶಾಂತ್ ಕಿಶೋರ್ , ಬಿಜೆಪಿಯು “ಹಲವು ದಶಕಗಳ ಕಾಲ” ಹೋರಾಡಬೇಕಾಗುತ್ತದೆ ಎಂದಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಗೆ ಈ ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಜೆಪಿಗೆ ರಾಜ್ಯ ಚುನಾವಣೆಯಲ್ಲಿ ಸೋಲುಣಿಸುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಿದ ನಂತರ ಕಿಶೋರ್ ಅವರ ಮಾತಿಗೆ ತೂಕ ಹೆಚ್ಚಾಗಿದೆ. ಪ್ರಶಾಂತ್ ಕಿಶೋರ್ ಈಗ ಗೋವಾದಲ್ಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಟಿಎಂಸಿಗೆ ನೆಲೆ ಕಂಡುಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

ಮುಂಬರುವ ದಶಕಗಳಲ್ಲಿ ಬಿಜೆಪಿಯ ಪ್ರಬಲ ಅಸ್ತಿತ್ವವನ್ನು ಹೊಂದಲಿದೆ ಎಂದು ಹೇಳಿದ ಕಿಶೋರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡಿದ್ದಾರೆ. ಮೋದಿಯ ಅಧಿಕಾರವು ಕ್ಷೀಣಿಸುವವರೆಗೆ ಮಾತ್ರ ಇದು ಎಂದು ರಾಹುಲ್ ಭ್ರಮೆಯಲ್ಲಿದ್ದಾರೆ ಎಂದು ಕಿಶೋರ್ ಹೇಳಿದ್ದಾರೆ.

“ಬಿಜೆಪಿಯು ಭಾರತದ ರಾಜಕೀಯದ ಕೇಂದ್ರಬಿಂದುವಾಗಿದೆ, ಅವರು ಗೆದ್ದರೂ, ಸೋತರೂ ಈ ಮೊದಲು 40 ವರ್ಷ ಕಾಂಗ್ರೆಸ್ ಇದ್ದಂತೆ ಇರುತ್ತಾರೆ. ಬಿಜೆಪಿ ಇಲ್ಲಿಯೇ ಇರುತ್ತದೆ. ಒಮ್ಮೆ ನೀವು ದೇಶದಲ್ಲಿ ಮಟ್ಟದಲ್ಲಿ ಶೇ 30 ಮತಗಳನ್ನು ಪಡೆದುಕೊಂಡರೆ, ಅಷ್ಟು ಬೇಗನೆ ನೀವು ಹೋಗಲಾರಿರಿ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
“ಆದ್ದರಿಂದ ಜನರು ಕೋಪಗೊಳ್ಳುವ ಈ ಬಲೆಯಲ್ಲಿ ಎಂದಿಗೂ ಸಿಲುಕಬೇಡಿ ಮತ್ತು ಅವರು ಮೋದಿಯನ್ನು ನಿರಾಕರಿಸುತ್ತಾರೆ. ಬಹುಶಃ ಅವರು ಮೋದಿಯನ್ನು ನಿರಾಕರಿಸಿದರೂ ಬಿಜೆಪಿ ಎಲ್ಲಿಯೂ ಹೋಗುತ್ತಿಲ್ಲ. ಮುಂದಿನ ಹಲವು ದಶಕಗಳವರೆಗೆ ನೀವು ಇದರ ವಿರುದ್ಧ ಹೋರಾಡಬೇಕಾಗಿದೆ ಎಂದು ಅವರು ಗೋವಾದ ಮ್ಯೂಸಿಯಂನಲ್ಲಿ ನಡೆದ ಸಂವಾದದಲ್ಲಿ ಹೇಳಿದರು.

ರಾಹುಲ್ ಗಾಂಧಿಗೆ ಸಮಸ್ಯೆ ಇರುವುದು ಅಲ್ಲೇ. ಬಹುಶಃ, ಜನರು ನರೇಂದ್ರ ಮೋದಿಯನ್ನು ಕಿತ್ತೆಸೆಯುವುದು ಸಮಯಕ್ಕೆ ಸಂಬಂಧಪಟ್ಟದ್ದು ಎಂದು ಅವರು ಭಾವಿಸುತ್ತಾರೆ. ಅದು ಆಗುತ್ತಿಲ್ಲ ಎಂದು ಕಿಶೋರ್ ಹೇಳಿದರು.
“ನೀವು ಮೋದಿಯ ಶಕ್ತಿಯನ್ನು ಪರೀಕ್ಷಿಸಲು, ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳದ ಹೊರತು, ಅವರನ್ನು ಸೋಲಿಸಲು ಸಾಧ್ಯವಾಗುವುದಿಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದರು. “ನಾನು ನೋಡುವ ಸಮಸ್ಯೆಯೆಂದರೆ, ಹೆಚ್ಚಿನ ಜನರು ಅವರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳಲು, ಅವರನ್ನು ಜನಪ್ರಿಯಗೊಳಿಸುವುದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ಕಳೆಯುತ್ತಿಲ್ಲ. ನಿಮಗೆ ತಿಳಿದಿದ್ದರೆ ಮಾತ್ರ ನೀವು ಅವರ ವಿರುದ್ಧ ಹೋರಾಡಬಹುದು.

ನರೇಂದ್ರ ಮೋದಿ ಮತ್ತು ಬಿಜೆಪಿಯ ಭವಿಷ್ಯವನ್ನು ಕಾಂಗ್ರೆಸ್ ಪಕ್ಷವು ಹೇಗೆ ನೋಡುತ್ತದೆ ಎಂದು ಹೇಳಿದ ಕಿಶೋರ್ “ನೀವು ಯಾವುದೇ ಕಾಂಗ್ರೆಸ್ ನಾಯಕ ಅಥವಾ ಯಾವುದೇ ಪ್ರಾದೇಶಿಕ ನಾಯಕರ ಬಳಿ ಹೋಗಿ ಮಾತನಾಡಿ, ಅವರು ಹೇಳುತ್ತಾರೆ, ‘ಇದು ಕೇವಲ ಸಮಯದ ವಿಷಯವಾಗಿದೆ, ಜನರು ಬೇಸರಗೊಂಡಿದ್ದಾರೆ. , ಅಧಿಕಾರ-ವಿರೋಧಿ ಅಲೆ ಇರುತ್ತದೆ ಮತ್ತು ಜನರು ಅವನನ್ನು ಕಿತ್ತೆಸೆಯುತ್ತಾರೆ. ನನಗೆ ಅನುಮಾನವಿದೆ. ಇದು ನಡೆಯುವುದಿಲ್ಲ.

ಮೋದಿ ಸರ್ಕಾರವು “ಮೋದಿ ವಿರುದ್ಧ ಯಾವುದೇ ಸ್ಪಷ್ಟವಾದ ಅಸಮಾಧಾನವಿಲ್ಲದೆ” ಇಂಧನ ಬೆಲೆಗಳಲ್ಲಿ ಭಾರಿ ಹೆಚ್ಚಳವನ್ನು ಹೇಗೆ ಘೋಷಿಸಿತು ಎಂಬುದೇ ಇದಕ್ಕೆ ಉದಾಹರಣೆ.

“ನೀವು ಮತದಾರರ ಮಟ್ಟವನ್ನು ನೋಡಿದರೆ, ಇದು ಮೂರನೇ ಒಂದು ಮತ್ತು ಎರಡು ಭಾಗದ ನಡುವಿನ ಹೋರಾಟವಾಗಿದೆ. ಮೂರನೇ ಒಂದರಷ್ಟು ಜನರು ಮಾತ್ರ ಬಿಜೆಪಿಗೆ ಮತ ಹಾಕುತ್ತಿದ್ದಾರೆ ಅಥವಾ ಬಿಜೆಪಿಯನ್ನು ಬೆಂಬಲಿಸಲು ಬಯಸುತ್ತಿದ್ದಾರೆ. ಸಮಸ್ಯೆಯೆಂದರೆ ಮೂರನೇ ಎರಡರಷ್ಟು ಭಾಗವು 10, 12 ಅಥವಾ 15 ರಾಜಕೀಯ ಪಕ್ಷಗಳಾಗಿ ವಿಭಜಿಸಲ್ಪಟ್ಟಿದೆ ಮತ್ತು ಇದು ಕಾಂಗ್ರೆಸ್ ಪಕ್ಷದ ಅವನತಿಯಿಂದಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ಗೆ ಬೆಂಬಲ ಕಡಿಮೆಯಾದ ಕಾರಣ, ಶೇ 65ರಷ್ಟು ಮತದಾರರು ವಿಭಜಿಸಲ್ಪಟ್ಟಿದ್ದಾರೆ. ಇದು ಬಹಳಷ್ಟು ವ್ಯಕ್ತಿಗಳು ಮತ್ತು ಸಣ್ಣ ಪಕ್ಷಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು.

IPAC ಗೋವಾದಲ್ಲಿ ಟಿಎಂಸಿ ಪರವಾಗಿ ಪಕ್ಷವನ್ನು ಬಂಗಾಳದ ಆಚೆಗೆ ವಿಸ್ತರಿಸಲು ಸಹಾಯ ಮಾಡಲು ಸಮೀಕ್ಷೆಗಳನ್ನು ಪ್ರಾರಂಭಿಸಿದೆ. ಗೋವಾದಲ್ಲಿ, ಟಿಎಂಸಿ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಮಾಜಿ ಕಾಂಗ್ರೆಸ್ಸಿಗ ಲುಜಿನ್ಹೋ ಫಲೈರೊ ಅವರಿಗೆ ಜವಾಬ್ದಾರಿ ನೀಡಿದೆ.

ಇದನ್ನೂ ಓದಿ: ‘ಹಾಗಂತ ಅವರು ದೇವರಾಗುವುದಿಲ್ಲ..’; ನರೇಂದ್ರ ಮೋದಿ ದೇವರ ಅವತಾರ ಎಂದಿದ್ದ ಯುಪಿ ಸಚಿವರ ಮಾತಿಗೆ ಬಿಜೆಪಿ ವಕ್ತಾರೆಯ ಪ್ರತಿಕ್ರಿಯೆ

ಇದನ್ನೂ ಓದಿ:  Pegasus Spyware: ದೇಶಕ್ಕಿಂತ ಪ್ರಧಾನಿ ಮೋದಿ ದೊಡ್ಡವರೇನಲ್ಲ; ಪೆಗಾಸಸ್ ಕುರಿತ ಸುಪ್ರೀಂ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ