ಪರ್ವೇಜ್ ಮುಷರಫ್ ನಿಧನಕ್ಕೆ ಶಶಿ ತರೂರ್ ಸಂತಾಪ; ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

|

Updated on: Feb 05, 2023 | 6:44 PM

ಶೆಹಜಾದ್ ಉಲ್ಲೇಖಿಸಿರುವ ರಾಹುಲ್ ಗಾಂಧಿಯವರ ಕುರಿತು ಮುಷರಫ್ ಅವರ ಹೇಳಿಕೆ 2019 ರ ಲೋಕಸಭೆ ಚುನಾವಣೆಗೆ ಮುಂಚಿನದ್ದು. ಸಂದರ್ಶನವೊಂದರಲ್ಲಿ ಮುಷರಫ್ ಅವರು ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವುದಾಗಿ ಹೇಳಿದ್ದಾರೆ

ಪರ್ವೇಜ್ ಮುಷರಫ್ ನಿಧನಕ್ಕೆ ಶಶಿ ತರೂರ್ ಸಂತಾಪ; ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಶಶಿ ತರೂರ್
Follow us on

ಕಾಂಗ್ರೆಸ್ ನಾಯಕ ಶಶಿ ತರೂರ್ (Shashi Tharoor)  ಭಾನುವಾರ ಪರ್ವೇಜ್ ಮುಷರಫ್ (Pervez Musharraf)ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಸಂದೇಶದಲ್ಲಿ ವೈರಿಯಾಗಿದ್ದರೂ ಶಾಂತಿಗಾಗಿ ನಿಜವಾದ ಶಕ್ತಿಯಾಗಿದ್ದ ವ್ಯಕ್ತಿ ಎಂದು ಬಣ್ಣಿಸುತ್ತಿದ್ದಂತೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ (Shehzad Poonawalla), ಒಸಾಮಾ ಬಿನ್ ಲಾಡೆನ್ ಅವರನ್ನು ಹೊಗಳಿದ ವ್ಯಕ್ತಿಯಲ್ಲಿ ಶಾಂತಿಯನ್ನು ಕಂಡುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಾಲಕೋಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್, ತನ್ನದೇ ಆದ ಸೇನಾ ಮುಖ್ಯಸ್ಥರನ್ನು ‘ಸಡಕ್ ಕಾ ಗುಂಡಾ’ ಎಂದು ಕರೆದಿತ್ತು. ಆದರೆ ಮುಷರಫ್ ಅವರನ್ನು ಶ್ಲಾಘಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. “ಒಂದು ಕಾಲದಲ್ಲಿ ಮುಷರಫ್, ರಾಹುಲ್ ಗಾಂಧಿಯನ್ನು ಜಂಟಲ್​​ಮ್ಯಾನ್ ಎಂದು ಹೊಗಳಿದ್ದರು” ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.  ಅಮಿಲಾಯ್ಡೋಸಿಸ್ನಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ 79 ನೇ ವಯಸ್ಸಿನಲ್ಲಿ ದುಬೈ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಪರೂಪದ ಕಾಯಿಲೆಯಿಂದ ನಿಧನ. ಮುಷರಫ್ ಒಮ್ಮೆ ಭಾರತದ ವೈರಿಯಾಗಿದ್ದರು ಆದರೆ ಅವರು 2002 ಮತ್ತು 2007 ರ ನಡುವೆ ಶಾಂತಿಗಾಗಿ ನಿಜವಾದ ಶಕ್ತಿಯಾದರು. “ನಾನು ಆ ದಿನಗಳಲ್ಲಿ ಯುಎನ್‌ನಲ್ಲಿ ಅವರನ್ನು ವಾರ್ಷಿಕ ಸಭೆಯಲ್ಲಿ ಭೇಟಿಯಾಗಿದ್ದೇನೆ ಮತ್ತು ಅವರ ಕಾರ್ಯತಂತ್ರದಲ್ಲಿ ಚುರುಕು, ತೊಡಗಿಸಿಕೊಳ್ಳುವಿಕೆ ಮತ್ತು ಯೋಚನೆಯಲ್ಲಿವ ಸ್ಪಷ್ಟತೆಯನ್ನು ಕಂಡುಕೊಂಡಿದ್ದೇನೆ.. RIP ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.


ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್​​ನ್ನು ಹೊಗಳಿದ ಪರ್ವೇಜ್ ಮುಷರಫ್ ಅವರು ರಾಹುಲ್ ಗಾಂಧಿಯವರನ್ನೂ ಹಾಡಿ ಹೊಗಳಿದ್ದರು. ಅವರನ್ನು ಸಂಭಾವಿತ ಎಂದು ಕರೆದರು ಮತ್ತು ಅವರಿಗೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದರು. ಬಹುಶಃ ಇದೇ ಕಾರಣಕ್ಕಾಗಿಯೇ ಶಶಿ ತರೂರ್ ಕಾರ್ಗಿಲ್‌ನ ವಾಸ್ತುಶಿಲ್ಪಿ ಮತ್ತು ಭಯೋತ್ಪಾದನೆಯ ಬೆಂಬಲಿಗನನ್ನು ಶ್ಲಾಘಿಸುತ್ತಿದ್ದಾರೆ ಎಂದು ಶೆಹಜಾದ್ ಪ್ರತಿಕ್ರಿಯಿಸಿದ್ದಾರೆ.


ಶೆಹಜಾದ್ ಉಲ್ಲೇಖಿಸಿರುವ ರಾಹುಲ್ ಗಾಂಧಿಯವರ ಕುರಿತು ಮುಷರಫ್ ಅವರ ಹೇಳಿಕೆ 2019 ರ ಲೋಕಸಭೆ ಚುನಾವಣೆಗೆ ಮುಂಚಿನದ್ದು. ಸಂದರ್ಶನವೊಂದರಲ್ಲಿ ಮುಷರಫ್ ಅವರು ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುವುದಾಗಿ ಹೇಳಿದ್ದಾರೆ. “ನನ್ನ ಭರವಸೆ, ನಾನೂ, ಪ್ರಾಮಾಣಿಕವಾಗಿ ಮಾತನಾಡುತ್ತೇನೆ, ಭಾರತ ಅಥವಾ ಪಾಕಿಸ್ತಾನದ ಪರವಾಗಿ ಅಲ್ಲ. ನಮಗೆ ಶಾಂತಿ ಬೇಕಾದರೆ ಮೋದಿ ಸಾಬ್ ಅದಕ್ಕಾಗಿರುವ ವ್ಯಕ್ತಿ ಅಲ್ಲ ಎಂದಿದ್ದರು ಮುಷರಫ್.

ಇದನ್ನೂ ಓದಿ: Vande Metro: ವಂದೇ ಭಾರತ್ ಯಶಸ್ಸಿನ ನಂತರ ವಂದೇ ಮೆಟ್ರೋ ರೀಜನಲ್ ಟ್ರಾನ್ಸ್​ ರೈಲು ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಧಾನಿ ಮೋದಿ ಸೂಚನೆ

ರಾಹುಲ್ ಗಾಂಧಿ ಬಗ್ಗೆ ಕೇಳಿದ ಪ್ರಶ್ನೆಗೆ ಮುಷರಫ್ ಅವರು, ತಮ್ಮ ತಾಯಿ, ಅಣ್ಣ ಮತ್ತು ಮಗ ದೆಹಲಿಗೆ ಹೋದಾಗ (ಮುಷರಫ್ ಅಧ್ಯಕ್ಷರಾಗಿದ್ದಾಗ) ರಾಹುಲ್ ಗಾಂಧಿ ನನ್ನ ಮಗನನ್ನು ಚಹಾಕ್ಕೆ ಆಹ್ವಾನಿಸಿದ್ದರು. ಮನಮೋಹನ್ ಸಿಂಗ್ ಅವರು ಮೂವರನ್ನೂ ಊಟಕ್ಕೆ ಆಹ್ವಾನಿಸಿದರು. “ನನ್ನ ಪ್ರಕಾರ ಇವುಗಳು ಪ್ರೋತ್ಸಾಹಿಸಬೇಕಾದ ವಿಷಯಗಳು. ಸಂಘರ್ಷದ ಬದಲು ನಾನು ಭಾರತದೊಂದಿಗೆ ಕ್ರಿಕೆಟ್ ಪಂದ್ಯವನ್ನು ಪ್ರೋತ್ಸಾಹಿಸುತ್ತಿದ್ದೆ ಎಂದು ನಿಮಗೆ ತಿಳಿದಿದೆ ಎಂದು ಮುಷರಫ್ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Sun, 5 February 23