Mohammadean Law: ಅಮ್ಮ ಇಸ್ಲಾಂಗೆ ಮತಾಂತರ; ಹಿಂದೂ ಧರ್ಮೀಯ ಮಕ್ಕಳಿಗಿಲ್ಲ ಆಸ್ತಿ: ಗುಜರಾತ್ ಕೋರ್ಟ್​ನಲ್ಲೊಂದು ಪ್ರಕರಣ

Only Muslim Can Be Class I Heir To Muslims Property: ಇಸ್ಲಾಂಗೆ ಮತಾಂತರಗೊಂಡು ಸಾವನ್ನಪ್ಪಿದ ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಹೋದ ಹಿಂದೂ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ಕೋರ್ಟ್​ವೊಂದು ತಿರಸ್ಕರಿಸಿದೆ.

Mohammadean Law: ಅಮ್ಮ ಇಸ್ಲಾಂಗೆ ಮತಾಂತರ; ಹಿಂದೂ ಧರ್ಮೀಯ ಮಕ್ಕಳಿಗಿಲ್ಲ ಆಸ್ತಿ: ಗುಜರಾತ್ ಕೋರ್ಟ್​ನಲ್ಲೊಂದು ಪ್ರಕರಣ
ಇಸ್ಲಾಮಿಕ್ ಕಾನೂನು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2023 | 4:18 PM

ಅಹ್ಮದಾಬಾದ್: ಮುಸ್ಲಿಂ ಮಹಿಳೆಯ ಆಸ್ತಿಯ ಹಕ್ಕು (Heirs To Muslim Property) ಕೇಳಲು ಹೋದ ಆಕೆಯ ಮೂವರು ಹಿಂದೂ ಧರ್ಮಸ್ಥ ಹೆಣ್ಮಕ್ಕಳ ಅರ್ಜಿಯನ್ನು ಗುಜರಾತ್​ನ ನ್ಯಾಯಾಲಯವೊಂದು ವಜಾಗೊಳಿಸಿದೆ. ಮಹಮದೀಯ ಕಾನೂನು (Mohammadean Law) ಪ್ರಕಾರ ಮುಸ್ಲಿಮರ ಆಸ್ತಿಯ ಹಕ್ಕು ಹಿಂದೂಗಳಿಗೆ ಇರುವುದಿಲ್ಲ ಎಂದು ಅಹ್ಮದಾಬಾದ್​ನ ಸ್ಥಳೀಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಿಧನ ಹೊಂದಿದ ಆ ಮುಸ್ಲಿಂ ಮಹಿಳೆಯ ಆಸ್ತಿಗೆ ಆಕೆಯ ಮಗ ನಿಜವಾದ ವಾರಸುದಾರ ಎಂದು ಕೋರ್ಟ್ ತೀರ್ಮಾನಿಸಿದೆ.

ಏನಿದು ಘಟನೆ?: ಈ ಮುಸ್ಲಿಂ ಮಹಿಳೆಯ ಮೂಲ ಹೆಸರು ರಂಜನ್ ತ್ರಿಪಾಠಿ. ಈಕೆಯ ಗಂಡ ಬಿಎಸ್​ಎನ್​ಎಲ್ ಉದ್ಯೋಗಿಯಾಗಿದ್ದು, 1979ರಲ್ಲಿ ಸಾವನ್ನಪ್ಪಿರುತ್ತಾರೆ. ಆಗ ಈಗ ದಂಪತಿಗೆ ಇಬ್ಬರು ಹೆಣ್ಮಕ್ಕಳಿರುತ್ತಾರೆ. ಜೊತೆಗೆ ರಂಜನ್ ತ್ರಿಪಾಠಿ ಗರ್ಭಿಣಿಯಾಗಿದ್ದು ನಂತರ ಮೂರನೇ ಹೆಣ್ಮಗುವಿಗೆ ಜನ್ಮ ನೀಡುತ್ತಾರೆ. ನಂತರ ಗಂಡ ಕೆಲಸ ಮಾಡುತ್ತಿದ್ದ ಬಿಎಸ್​ಎನ್​ಎಲ್​ನಲ್ಲಿ ಈಕೆಗೆ ಉದ್ಯೋಗ ಸಿಗುತ್ತದೆ.

ಇದಾದ ಬಳಿಕ ರಂಜನಾ ತನ್ನ ಕುಟುಂಬವನ್ನು ಬಿಟ್ಟು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು 1995ರಲ್ಲಿ ಮದುವೆಯಾಗುತ್ತಾರೆ. ರಂಜನಾ ತ್ರಿಪಾಠಿ ಹೆಸರು ರೆಹನಾ ಮಾಲಿಕ್ ಎಂದು ಬದಲಾಗುತ್ತದೆ. ಹೊಸ ದಾಂಪತ್ಯದಲ್ಲಿ ರೆಹನಾ ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಅತ್ತ ಈಕೆಯ ಮೂವರು ಹೆಣ್ಮಕ್ಕಳನ್ನು ಅಪ್ಪನ ಕುಟುಂಬದವರು ಪೋಷಿಸುತ್ತಾರೆ. ರೆಹಾನ ಮಲಿಕ್ ಕೆಲ ವರ್ಷಗಳ ಬಳಿಕ ನಿಧನ ಹೊಂದುತ್ತಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಸರ್ಕಾರ ಕ್ರಮ; ಕಾನೂನು ಬಗ್ಗೆ ತಿಳಿದಿಲ್ಲ, ಹದಿಹರೆಯದಲ್ಲೇ ಅಮ್ಮನಾದ ಬಾಲಕಿಯರ ಕಣ್ಣೀರು

ಈಗ ರೆಹನಾ ಮಲಿಕ್​ರ ಮೂವರು ಹೆಣ್ಮಕ್ಕಳು ಅಮ್ಮನ ಆಸ್ತಿಯಲ್ಲಿ ಪಾಲು ಕೇಳಲು ಕೋರ್ಟ್ ಮೆಟ್ಟಿಲೇರುತ್ತಾರೆ. ತನ್ನ ಅಪ್ಪ ಸಾವನ್ನಪ್ಪಿದ್ದರಿಂದ ಅಮ್ಮನಿಗೆ ಕೆಲಸ ಸಿಕ್ಕಿದೆ. ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ತಮಗಿದೆ ಎಂದು ಈ ಹೆಣ್ಮಕ್ಕಳು ವಾದಿಸುತ್ತಾರೆ.

ಆದರೆ, ನ್ಯಾಯಾಲಯವು ಮೊಹಮ್ಮಡನ್ ಕಾನೂನನ್ನು ಉಲ್ಲೇಖಿಸಿ ಹೆಣ್ಮಕ್ಕಳ ಮನವಿಯನ್ನು ತಿರಸ್ಕರಿಸುತ್ತದೆ. ನಿಧನ ಹೊಂದಿದವರು ಮುಸ್ಲಿಮರಾಗಿದ್ದರೆ ಅವರ ಕ್ಲಾಸ್ ಒನ್ ವಾರಸುದಾರರು ಹಿಂದೂಗಳಾಗಲು ಸಾಧ್ಯವಿಲ್ಲ. ಮುಸ್ಲಿಮರು ಮಾತ್ರ ಆಸ್ತಿಯಲ್ಲಿ ಹಕ್ಕು ಕೇಳಲು ಸಾಧ್ಯ ಎಂದು ಮಹಮ್ಮದೀಯ ಕಾನೂನು ಹೇಳುತ್ತದೆ. ತಾಯಿಯು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ಆದ ಬಳಿಕ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆದ್ದರಿಂದ ಆ ಗಂಡು ಮಗುವೇ ಕ್ಲಾಸ್ ಒನ್ ವಾರಸುದಾರ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ