ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಸರ್ಕಾರ ಕ್ರಮ; ಕಾನೂನು ಬಗ್ಗೆ ತಿಳಿದಿಲ್ಲ, ಹದಿಹರೆಯದಲ್ಲೇ ಅಮ್ಮನಾದ ಬಾಲಕಿಯರ ಕಣ್ಣೀರು

ಬಾಲ್ಯವಿವಾಹದ ವಿರುದ್ಧದ ಅಭಿಯಾನದಲ್ಲಿ, ಅಂತಹ ವಿವಾಹಗಳನ್ನು ನಡೆಸಿದ ಹಿಂದೂ ಮತ್ತು ಮುಸ್ಲಿಂ ಪುರೋಹಿತರು ಸೇರಿದಂತೆ 2,258 ಜನರನ್ನು ಪೊಲೀಸರು ಶನಿವಾರದವರೆಗೆ ಬಂಧಿಸಿದ್ದಾರೆ. ಒಟ್ಟು 8,000 ಆರೋಪಿಗಳ ಪಟ್ಟಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಸರ್ಕಾರ ಕ್ರಮ; ಕಾನೂನು ಬಗ್ಗೆ ತಿಳಿದಿಲ್ಲ, ಹದಿಹರೆಯದಲ್ಲೇ ಅಮ್ಮನಾದ ಬಾಲಕಿಯರ ಕಣ್ಣೀರು
ಬಾಲ್ಯ ವಿವಾಹ ವಿರುದ್ಧದ ಅಭಿಯಾನ
Follow us
ರಶ್ಮಿ ಕಲ್ಲಕಟ್ಟ
|

Updated on: Feb 05, 2023 | 3:03 PM

ಮೊರಿಗಾಂವ್ (ಅಸ್ಸಾಂ): ನಿಮಿಯ ಕಣ್ಣುಗಳು ಹೊಸ ತಾಯ್ತನದ ಸಂತೋಷದಿಂದ ಮಿಂಚುವುದಿಲ್ಲ, ಬದಲಿಗೆ, ಅಸ್ಸಾಂನ (Assam) ಮೋರಿಗಾಂವ್ (Morigaon) ಜಿಲ್ಲೆಯ ತನ್ನ ಹಳ್ಳಿಯಲ್ಲಿ ಕಾಡುತ್ತಿರುವ ಭಯ, ಅಭದ್ರತೆ ಮತ್ತು ಆತಂಕದ ಭಾವವನ್ನು ಪ್ರತಿಬಿಂಬಿಸುತ್ತವೆ. ರೆಜಿನಾ ಖಾತುನ್ ದೂರದಲ್ಲಿ ನಿರ್ವಾತವಾಗಿ ದಿಟ್ಟಿಸುತ್ತಾಳೆ. ದಿಢೀರನೆ ಸಂಭವಿಸಿದ್ದೇನು ಎಂಬುದನ್ನು ಅವಳು ನೋಡುತ್ತಿದ್ದಾಳೆ.  ಕಳೆದ ಎರಡು ದಿನಗಳಿಂದ ಅಸ್ಸಾಂ ಪೊಲೀಸರು ಬಾಲ್ಯವಿವಾಹದ (Child Marriage) ವಿರುದ್ಧ ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಪತಿಗಳನ್ನು ಬಂಧಿಸಿದ ಸಾವಿರಾರು ಮಕ್ಕಳ ವಧುಗಳಲ್ಲಿ ನಿಮಿಯೂ ಒಬ್ಬಳಾಗಿದ್ದರೆ, ಮಗನ ಪ್ರೇಮ, ವಿವಾಹದ ಮಂಟಪವೇರಿದ್ದರೂ ಈಗ ಜೈಲು ಸೇರಿದ ಆ ಮಗನ ತಾಯಿಯೇ ರೆಜಿನಾ. ಬಾಲ್ಯವಿವಾಹದ ವಿರುದ್ಧದ ಅಭಿಯಾನದಲ್ಲಿ, ಅಂತಹ ವಿವಾಹಗಳನ್ನು ನಡೆಸಿದ ಹಿಂದೂ ಮತ್ತು ಮುಸ್ಲಿಂ ಪುರೋಹಿತರು ಸೇರಿದಂತೆ 2,258 ಜನರನ್ನು ಪೊಲೀಸರು ಶನಿವಾರದವರೆಗೆ ಬಂಧಿಸಿದ್ದಾರೆ. ಒಟ್ಟು 8,000 ಆರೋಪಿಗಳ ಪಟ್ಟಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧಿಗಳನ್ನು ಬಂಧಿಸಲು ಜನವರಿ 23 ರಂದು ರಾಜ್ಯ ಕ್ಯಾಬಿನೆಟ್ ನಿರ್ಧರಿಸಿದ ನಂತರ ಹದಿನೈದು ದಿನಗಳೊಳಗೆ ಪೊಲೀಸರು 4,074 ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿದ್ದಾರೆ, ಜೊತೆಗೆ ಬಾಲ್ಯ ವಿವಾಹ ವಿರುದ್ಧ ವ್ಯಾಪಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. “ಗುರುವಾರ ನಸುಕಿನ 2 ಗಂಟೆ ಸುಮಾರಿಗೆ ಬಾಗಿಲು ತಟ್ಟಿದ್ದು ಕೇಳಿಸಿತು. ನಾವು ಬಾಗಿಲು ತೆರೆದಾಗ ಹೊರಗೆ ಪೊಲೀಸರನ್ನು ಕಂಡೆವು. ಅವರು ನನ್ನ ಪತಿಯನ್ನು ಕರೆದೊಯ್ದರು” ಎಂದು ನಿಮಿ ಹೇಳಿದ್ದಾರೆ .ಆಕೆಯ ಒಂದೂವರೆ ವರ್ಷದ ಮಗು ಅಳುತ್ತಲೇ ಇತ್ತು ಎಂದು ಪಿಟಿಐ ವರದಿ ಮಾಡಿದೆ.

17 ವರ್ಷದ ಈಕೆ ಓಡಿಹೋಗಿ ಇಪ್ಪತ್ತರ ಹರೆಯದ ಗೋಪಾಲ್ ಬಿಸ್ವಾಸ್ ಅವರೊಂದಿಗೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು.ಆಕೆಯ ಪತಿ ಗ್ರಾಮದ ಚೌಕದಲ್ಲಿ ಪಕೋಡಾ ಮತ್ತು ಖಾರದ ತಿಂಡಿ ಮಾರಾಟ ಮಾಡುವ ಮೂಲಕ ಕುಟುಂಬ ಸಾಗಿಸುತ್ತಿದ್ದರು.”ನಾವು ನಮ್ಮ ಸ್ವಂತ ಕುಟುಂಬಗಳನ್ನು ಪೋಷಿಸಲು ಸಾಕಾಗುವಷ್ಟು ಸಂಪಾದಿಸುತ್ತೇವೆ. ನಿಮಿ ಮತ್ತು ಅವಳ ಮಗನನ್ನು ಯಾರು ನೋಡಿಕೊಳ್ಳುತ್ತಾರೆ? ಅವಳು ಸೊರಗಿದ್ದಾಳೆ,ಸರಿಯಾಗಿ ತಿನ್ನುವುದೂ ಇಲ್ಲ. ಮಗುವೂ ಈಗ ಅನಾರೋಗ್ಯಕ್ಕೆ ಒಳಗಾಗುತ್ತಿದೆ” ಎಂದು ಅದೇ ಪ್ರದೇಶದ ನಿವಾಸಿ ಗೋಪಾಲ್ ಅವರ ಅಣ್ಣ ಯುದಿಶ್ಟರ್ ಹೇಳಿದ್ದಾರೆ.

ಇದನ್ನೂ ಓದಿ:Vande Metro: ವಂದೇ ಭಾರತ್ ಯಶಸ್ಸಿನ ನಂತರ ವಂದೇ ಮೆಟ್ರೋ ರೀಜನಲ್ ಟ್ರಾನ್ಸ್​ ರೈಲು ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಧಾನಿ ಮೋದಿ ಸೂಚನೆ

ರೆಜಿನಾ ಅವರ ಮಗ ರಾಜಿಬುಲ್ ಹುಸೇನ್ ಅವರನ್ನು ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಅವರ ಮನೆಯಿಂದ ಕರೆದೊಯ್ಯಲಾಯಿತು. ಅವರು ಕೇರಳದಿಂದ ತನ್ನ ತಂದೆಯೊಂದಿಗೆ ಮನೆಗೆ ತಲುಪಿದ ಕೆಲವೇ ನಿಮಿಷಗಳ ನಂತರ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿತ್ತು ರಜಿಬುಲ್ ಅವರ ಪತ್ನಿಯಂತಹ ಅನೇಕರು ಮದುವೆಯ ಸಮಯದಲ್ಲಿ ಅಪ್ರಾಪ್ತ ವಯಸ್ಕರಲ್ಲ ಆದರೆ ಆಧಾರ್ ಕಾರ್ಡ್‌ಗಳಿಗೆ ನೋಂದಾಯಿಸುವಾಗ ಅವರ ಜನ್ಮ ದಿನಾಂಕವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ಕುಟುಂಬದ ನೆರೆಯವರು ಹೇಳಿದ್ದಾರೆ.

“ವಯಸ್ಸಿನ ದತ್ತಾಂಶವನ್ನು ಪೊಲೀಸರು ಹೆಚ್ಚಾಗಿ ಸ್ಥಳೀಯ ಆರೋಗ್ಯ ಕಾರ್ಯಕರ್ತರಿಂದ ತೆಗೆದುಕೊಂಡಿದ್ದಾರೆ, ಅವರು ಆಧಾರ್ ಆಧಾರಿತ ಮಾಹಿತಿಯನ್ನು ಹೊಂದಿದ್ದಾರೆ. ಈಗ ನಾವು ಈ ಮಹಿಳೆಯರಿಗೆ ಅವರ ಮೂಲ ಜನ್ಮ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದೇವೆ ಇದರಿಂದ ಅವರ ಪತಿ ಜಾಮೀನು ಪಡೆಯಬಹುದು” ಎಂದು ಅವರು ಹೇಳಿದರು.

ಕೆಲವರು ತಮ್ಮ ಕುಟುಂಬದಿಂದ ಸಹಾಯ ಮತ್ತು ಬೆಂಬಲವನ್ನು ಪಡೆಯುತ್ತಿದ್ದರೆ, ರಿಯಾದೇವಿಯಂತಹ ಅನೇಕರು ತಮ್ಮ ಗಂಡನ ಬಂಧನದ ನಂತರ ಅಧಿಕಾರಿಗಳ ಕೈಕಾಲು ಹಿಡಿಯುತ್ತಿದ್ದಾರೆ.

“ನಾವು ಓಡಿಹೋಗಿ ಮದುವೆಯಾಗಿದ್ದರಿಂದ ನಮಗೆ ಬೇರೆ ಕುಟುಂಬವಿಲ್ಲ. ಇಲ್ಲಿಂದ ನನ್ನ ಒಂದು ವರ್ಷದ ಮಗಳನ್ನು ಹಿಡಿದುಕೊಂಡು ಈಗ ನಾನು ಎಲ್ಲಿಗೆ ಹೋಗಲಿ?” ಸರ್ಕಾರ ನಡೆಸುತ್ತಿರುವ ಆಶ್ರಯ ಮನೆಯಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿರುವ 16 ವರ್ಷದ ರಿಯಾ ಕಣ್ಣೀರು ಹಾಕಿದ್ದಾರೆ.

ರೂಪಾ ದಾಸ್ ಎಂಬಾಕೆಗೆ 16 ವರ್ಷ, ಈಕೆ ಒಂಬತ್ತು ತಿಂಗಳ ಗರ್ಭಿಣಿ. “ನನ್ನ ಪತಿಯನ್ನು ಬಿಡುಗಡೆ ಮಾಡಿ. ನಾವು ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದೇವೆ. ಅವರು ಹತ್ತಿರದಲ್ಲಿಲ್ಲದಿದ್ದರೆ ನಾನು ಏನು ಮಾಡಲಿ ಎಂದು ಗೋಗರೆಯುತ್ತಿದ್ದಾಳೆ.

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಿಂಗ ತಜ್ಞೆಯಾಗಿರುವ ಪರಿಮಿತಾ ದೇಕಾ ಅವರು ರಿಯಾ ಮತ್ತು ರೂಪಾ ಮುಂತಾದವರ ಜೊತೆ ಕೆಲಸ ಮಾಡುತ್ತಿದ್ದಾರೆ. “ಬಾಲ್ಯವಿವಾಹದ ವಿರುದ್ಧದ ಅಭಿಯಾನ ತುಂಬಾ ಸ್ವಾಗತಾರ್ಹವಾಗಿದೆ. ಆದರೆ ಈಗ ಈ ಮಹಿಳೆಯರ ಬಗ್ಗೆ ನಮಗೆ ಜವಾಬ್ದಾರಿ ಇದೆ” ಎಂದಿದ್ದಾರೆ.

“ಹೆಚ್ಚಿನವರು ಮಕ್ಕಳು. ನಾವು ಅವರನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು ಮತ್ತು ಅವರ ಭವಿಷ್ಯವನ್ನು ಭದ್ರಪಡಿಸಬೇಕು,” ಎಂದು ದೇಕಾ ಹೇಳಿದ್ದಾರೆ. ರಾಜ್ಯದಲ್ಲಿ ಬಾಲ್ಯವಿವಾಹ ವ್ಯಾಪಕವಾಗಿದ್ದರೂ, ಅದನ್ನು ನಿಷೇಧಿಸುವ ಕಾನೂನುಗಳ ಬಗ್ಗೆ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ. “ಕೆಲವು ರೀತಿಯ ಕಾನೂನು ಇದೆ ಎಂದು ನಮಗೆ ತಿಳಿದಿತ್ತು ಆದರೆ ಅದನ್ನು ಎಂದಿಗೂ ಕಾರ್ಯಗತಗೊಳಿಸಲಾಗಿಲ್ಲ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮವಿದೆ ಮತ್ತು ನಾವು ಜಾಗರೂಕರಾಗಿರುತ್ತೇವೆ ಎಂದು ಸರ್ಕಾರವು ನಮಗೆ ಎಚ್ಚರಿಕೆ ನೀಡಬೇಕಿತ್ತು” ಎಂದು ಯುದಿಶ್ಟರ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಮತ್ತೊಬ್ಬ ಸ್ಥಳೀಯ ಉದ್ಯಮಿ ಉಮರ್ ಅಲಿ ಮಾತನಾಡಿ, ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವು, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಸಾಕಾಗುವುದಿಲ್ಲ ಎಂದಿದ್ದಾರೆ. 2026ರ ಮುಂದಿನ ವಿಧಾನಸಭೆ ಚುನಾವಣೆವರೆಗೂ ಬಾಲ್ಯವಿವಾಹದ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಅಸ್ಸಾಂನಲ್ಲಿ ತಾಯಂದಿರು ಮತ್ತು ಶಿಶು ಮರಣ ಪ್ರಮಾಣ ಹೆಚ್ಚಿದ್ದು, ಬಾಲ್ಯವಿವಾಹವು ಪ್ರಾಥಮಿಕ ಕಾರಣವಾಗಿದೆ. ರಾಜ್ಯದಲ್ಲಿ ನೋಂದಣಿಯಾದ ಸರಾಸರಿ ಶೇಕಡ 31ರಷ್ಟು ವಿವಾಹಗಳು ಬಾಲ್ಯ ವಿವಾಹಗಳಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ