‘ಎಫ್ಎಸ್ಎಲ್ ಪರೀಕ್ಷೆ ಆಗಲಿ’: ಮಡೆನೂರು ಮನುವಿನ ಇನ್ನೊಂದು ಆಡಿಯೋ ಬಹಿರಂಗ
Madenuru Manu: ಅತ್ಯಾಚಾರ ಆರೋಪಿ ಮಡೆನೂರು ಮನು ಜೈಲುವಾಸ ಅನುಭವಿಸಿ ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಮಡೆನೂರು ಮನುವಿನದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅಭಿಮಾನಿಗಳು ತೀವ್ರ ಸಿಟ್ಟಿನಲ್ಲಿದ್ದಾರೆ. ಆದರೆ ಆ ಆಡಿಯೋ ನನ್ನದಲ್ಲ ಎಂದು ಮನು ಹೇಳಿದ್ದಾರೆ. ಇದೀಗ ಅದೇ ಆಡಿಯೋದ ಮುಂದುವರೆದ ಭಾಗ ಬಿಡುಗಡೆ ಆಗಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ ಆರೋಪದಲ್ಲಿ ಜೈಲು ಪಾಲಾಗಿ ಇದೀಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅತ್ಯಾಚಾರ ಆರೋಪದ ಬೆನ್ನಲ್ಲೆ ಮಡೆನೂರು ಮನುವಿನದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಬಗ್ಗೆ ಅವಾಚ್ಯವಾಗಿ ಮಾತನಾಡಿರುವುದು ದಾಖಲಾಗಿದೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಮಡೆನೂರು ಮನು, ಆ ಆಡಿಯೋ ನಂದಲ್ಲ ಎಂದಿದ್ದರು. ಇದೀಗ ಮಡೆನೂರು ಮನುವಿನ ಮೇಲೆ ಆರೋಪ ಮಾಡಿದ ಯುವತಿ, ಮನುವಿನದ್ದು ಎನ್ನಲಾದ ಆಡಿಯೋನ ಪೂರ್ಣಭಾಗವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಬಿಡುಗಡೆ ಆಗಿದ್ದ ಆಡಿಯೋನಲ್ಲಿ ಮನು, ಶಿವರಾಜ್ ಕುಮಾರ್ ಸತ್ತು ಹೋಗ್ತಾರೆ, ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ, ಧ್ರುವ ಇನ್ನೊಂದೆರಡು ವರ್ಷ, ಇವರ ಮಧ್ಯೆ ನಾನು ಎಲ್ಲರಿಗೂ ಫೈಟ್ ಕೊಡುತ್ತಿರುವ ಗಂಡುಗಲಿ ಎಂದಿದ್ದ. ಇದೀಗ ಬಿಡುಗಡೆ ಆಗಿರುವ ಆಡಿಯೋನಲ್ಲಿ ನಾನು ಮಹಿಳೆಯೊಬ್ಬಳಿಗೆ ಮೋಸ ಮಾಡಿದ್ದೀನಿ, ಅದನ್ನು ಮರೆಯಲು ಕುಡಿಯುತ್ತಿದ್ದೀನಿ ಎಂದಿದ್ದಾನೆ. ಅದೇ ಆಡಿಯೋನಲ್ಲಿ ಮಹಿಳೆಯೊಬ್ಬರ ದನಿಯೂ ಇದೆ.
ಇದನ್ನೂ ಓದಿ:ಅತ್ಯಾಚಾರ ಪ್ರಕರಣದ ಆರೋಪಿ ನಟ ಮಡೆನೂರು ಮನುಗೆ ಜಾಮೀನು ಮಂಜೂರು
ಆಡಿಯೋ ಬಿಡುಗಡೆ ಮಾಡಿರುವ ಯುವತಿ, ‘ಬರೀ ಸುಳ್ಳು , ನಂಬಿಕೆ ದ್ರೋಹ, ಅಹಂಕಾರ, ದೌರ್ಜನ್ಯ. ಸತ್ಯನ ನಂಬಿರೋರಿಗೆ ದೇವರೇ ಕಾವಲು ಅಷ್ಟೇ. ತುಂಬಾ ಜನ ಇವನ ಧ್ವನಿ ಅಲ್ಲ ಅಂತ ಅನ್ಕೊಳ್ತಿರುವವರು ಧ್ವನಿ ಪರೀಕ್ಷೆ ಮಾಡಿಸಿ FSL ಗೆ ಕಳುಹಿಸಿ ಯಾವ ದಿನ ಯಾವ ಟೈಮ್ ಎಲ್ಲಿ ಎಂದು ಪರೀಕ್ಷೆಯಾಗಲಿ, ಎಷ್ಟೋ ದಾಖಲೆಗಳನ್ನು ಸೋಶಿಯಲ್ ಮೀಡಿಯಾಗೆ ಬಿಟ್ಟಿಲ್ಲ ಅಂದರೆ ಅದಕ್ಕೆ ಕಾರಣ ಅವನ ಹೊಲಸು ಮಾತುಗಳು ಬಟ್ ಇದು ಅವನ ಮಾತುಗಳಲ್ಲ ಅನ್ನೋ ಸಂದೇಹ ಬಂದಿರುವ ಕಾರಣದಿಂದ ಅದರ ಕಂಟಿನ್ಯೂಏಷನ್ ಬಿಟ್ಟಿದ್ದೀನಿ ಹೆಚ್ಚು ಮಾಹಿತಿ ಇನ್ನೂ ಬೇಕು ಅಂದರೆ ಅದು ಪರೀಕ್ಷೆಯಾಗಲಿ ಗೊತ್ತಾಗುತ್ತೆ ಎಷ್ಟು ನಾಟಕಗಳನ್ನು ಆಡಿ ನನಗೆ ಮೋಸ ಮಾಡಿದ್ದಾನೆ ಎಂದು ಗೊತ್ತಾಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿದ್ದಾಗ ಅವನೊಟ್ಟಿಗೆ ರಿಯಾಲಿಟಿ ಶೋನಲ್ಲಿ ಸಹನಟಿಯಾಗಿದ್ದ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿದರು. ಅತ್ಯಾಚಾರ, ಕೊಲೆ ಬೆದರಿಕೆ, ದೌರ್ಜನ್ಯ ಪ್ರಕರಣಗಳು ಮನುವಿನ ಮೇಲೆ ದಾಖಲಾಗಿ, ಆತನ ಬಂಧನವೂ ಆಯ್ತು. ಕೆಲ ದಿನದ ಹಿಂದಷ್ಟೆ ಮನು, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದು, ಇದೀಗ ಆತನ ಮೇಲೆ ಆರೋಪವನ್ನು ಸಂತ್ರಸ್ತೆ ಮುಂದುವರೆಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




