‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟ್ರೇಲರ್ಗೆ ಸಿಕ್ತು ಕಿಚ್ಚನ ಚಪ್ಪಾಳೆ
ನಟ ಕಿಚ್ಚ ಸುದೀಪ್ ಅವರು ಹೊಸ ಪ್ರಯತ್ನಗಳಿಗೆ ಬೆನ್ನು ತಟ್ಟುತ್ತಾರೆ. ಈಗ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟ್ರೇಲರ್ ನೋಡಿ ಭೇಷ್ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ಅವರು ನಟಿಸಿದ್ದಾರೆ.

ಡಿಫರೆಂಟ್ ಆಗಿರುವ ಸಿನಿಮಾ ನೋಡಬೇಕು ಎಂದು ಬಯಸುತ್ತಿರುವ ಪ್ರೇಕ್ಷಕರಿಗೆಲ್ಲ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾದ ಟ್ರೇಲರ್ ಒಂದು ಭರವಸೆ ನೀಡಿದೆ. ಈ ಸಿನಿಮಾದ ಕಥೆ ಡಿಫರೆಂಟ್ ಆಗಿದೆ ಎಂಬುದು ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ. ಕಿಚ್ಚ ಸುದೀಪ್ (Kichcha Sudeep) ಅವರ ಅಭಿಪ್ರಾಯ ಕೂಡ ಇದೇ ಆಗಿದೆ. ಟ್ರೇಲರ್ ಬಿಡುಗಡೆ ಮಾಡಿರುವ ಸುದೀಪ್ ಅವರು ಈ ಚಿತ್ರತಂಡದ ಪ್ರಯತ್ನವನ್ನು ಮೆಚ್ಚುಕೊಂಡಿದ್ದಾರೆ. ‘ಸಿನಿಮಾ ಡಿಫರೆಂಟ್ ಆಗಿದ್ದಾಗ ನೋಡಲೇಬೇಕು’ ಎಂದು ಪೋಸ್ಟ್ ಮಾಡಿರುವ ಸುದೀಪ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ (Diganth Manchale), ನಿಧಿ ಸುಬ್ಬಯ್ಯ, ಧನು ಹರ್ಷ ಮಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಸಮರ್ಥ್ ಕಡ್ಕೊಳ್ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ವಿಶೇಷ ಕಾನ್ಸೆಪ್ಟ್ ಇದೆ ಎಂಬ ಕಾರಣಕ್ಕೆ ಈ ಸಿನಿಮಾ ಗಮನ ಸೆಳೆದಿದೆ. ಸಿನಿಮಾದ ಕಥೆ ಏನೆಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ.
ಒಂದಷ್ಟು ಕಾರಣಗಳಿಂದಾಗಿ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿತ್ತು. ಆದರೆ ಈಗ ಈ ಚಿತ್ರ ಸಿನಿಪ್ರಿಯರ ಎದುರು ಬರಲು ಸಜ್ಜಾಗಿದೆ.
ಜೂನ್ 13ರಂದು ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ನಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಸುದೀಪ್ ಕೂಡ ಬೆನ್ನು ತಟ್ಟಿರುವುದರಿಂದ ಚಿತ್ರತಂಡದ ಬಲ ಹೆಚ್ಚಾಗಿದೆ.
When a film dares to be different, it deserves to be seen.Cheers to team #EAK and @diganthmanchale 🤗 Hitting theatres on June 13.https://t.co/VnjdlukhTy@KadkolSamarth @gurudath_ganiga @KeelambiRajesh#EdagaiyeApaghatakkeKarana
— Kichcha Sudeepa (@KicchaSudeep) June 6, 2025
‘ಎಡಗೈಯೇ ಅಪಘಾತಕ್ಕೆ ಕಾರಣ’ ಎಂಬ ಶೀರ್ಷಿಕೆಯೇ ಹೇಳುವ ಹಾಗೆ ಎಡಗೈ ಹೆಚ್ಚಾಗಿ ಬಳಸುವ ವ್ಯಕ್ತಿಗಳ ಕಷ್ಟದ ಬಗ್ಗೆ ಈ ಇರುವ ಸಿನಿಮಾ ಇದು. ನಿರ್ದೇಶಕ ಸಮರ್ಥ್ ಅವರು ಡಾರ್ಕ್ ಕಾಮಿಡಿ ಮೂಲಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ದಿಗಂತ್ ಜೊತೆ ನಿಧಿ ಸುಬ್ಬಯ್ಯ ಹಾಗೂ ಧನು ಹರ್ಷ ನಟಿಸಿದ್ದಾರೆ. ‘ಪಂಚರಂಗಿ’ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್-ದಿಗಂತ್ ಈಗ ಅಣ್ಣ-ತಮ್ಮ; ‘ದೈಜಿ’ ಚಿತ್ರದಲ್ಲಿ ಒಟ್ಟಾಗಿ ನಟನೆ
ಈ ಚಿತ್ರಕ್ಕಾಗಿ ‘ಬ್ಲಿಂಕ್’ ಮತ್ತು ‘ಶಾಖಹಾರಿ’ ಸಿನಿಮಾಗಳ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಇಬ್ಬರು ಒಟ್ಟಿಗೆ ಸೇರಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ‘ಶಾಖಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ, ‘ಬ್ಲಿಂಕ್’ ನಿರ್ಮಾಪಕ ರವಿಚಂದ್ರ ಅವರು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರವನ್ನು ನೋಡಿ ಇಷ್ಟ ಪಟ್ಟು ರಿಲೀಸ್ ಮಾಡಲು ಕೈ ಜೋಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Sun, 8 June 25