Amyloidosis: ಪಾಕ್​ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಾವಿಗೆ ಕಾರಣವಾದ ಅಮಿಲೋಯ್ಡೋಸಿಸ್ ಕಾಯಿಲೆ ಬಗ್ಗೆ ತಿಳಿಯಿರಿ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅಮಿಲೋಯ್ಡೋಸಿಸ್​ ಕಾಯಿಲೆಯಿಂದನಿಧನರಾದರು. ಕಳೆದ ಒಂದು ವರ್ಷದಿಂದ ಮುಷರಫ್ ಈ ಕಾಯಿಲೆಯಿಂದ ಬಳಲುತ್ತಿದ್ದರು.

Amyloidosis: ಪಾಕ್​ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಾವಿಗೆ ಕಾರಣವಾದ ಅಮಿಲೋಯ್ಡೋಸಿಸ್ ಕಾಯಿಲೆ ಬಗ್ಗೆ ತಿಳಿಯಿರಿ
ಪರ್ವೇಜ್ ಮುಷರಫ್
Follow us
ನಯನಾ ರಾಜೀವ್
|

Updated on: Feb 05, 2023 | 5:05 PM

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅಮಿಲೋಯ್ಡೋಸಿಸ್​ ಕಾಯಿಲೆಯಿಂದನಿಧನರಾದರು. ಕಳೆದ ಒಂದು ವರ್ಷದಿಂದ ಮುಷರಫ್ ಈ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಜೂನ್ 2022 ರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗೆ ಹೆಚ್ಚಿನ ಸ್ಪಂದನೆ ಸಿಗುತ್ತಿರಲಿಲ್ಲ. ಈ ಭಯಾನಕ ಕಾಯಿಲೆಯಿಂದಾಗಿ, ಅವರು ಅಂತಿಮವಾಗಿ 05 ಫೆಬ್ರವರಿ 2023 ರಂದು ನಿಧನರಾದರು.

ಅಮಿಲಾಯ್ಡೋಸಿಸ್ ಎಂದರೇನು? ಅಮಿಲೋಯ್ಡೋಸಿಸ್​ ರೋಗ ಎಂದರೇನು? ಅಮಿಲೋಯ್ಡೋಸಿಸ್​ ಅನ್ನು ಒಂದು ಕ್ಯಾನ್ಸರ್ ಪ್ರಕಾರವಾಗಿ ನೋಡಲು ಸಾಧ್ಯವಿಲ್ಲ, ಇದು ಅಪರೂಪದ ಕಾಯಿಲೆಯ ಒಂದು ಸ್ಥಿತಿಯಾಗಿದೆ. ಇದು ಮಲ್ಟಿಪಲ್ ಮೈಲೋಮಾದಂತಹ ಕೆಲವು ರಕ್ತದ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದೆ.

ಅಮಿಲಾಯ್ಡ್ ಎಂಬ ಪ್ರೊಟೀನ್ ಅಂಗಗಳಲ್ಲಿ ನಿರ್ಮಾಣವಾದಾಗ ರೋಗ ಸ್ಥಿತಿ ಉಂಟಾಗುತ್ತದೆ. ದೇಹದಲ್ಲಿನ ಸಾಮಾನ್ಯ ಪ್ರೋಟೀನ್ ರೂಪಾಂತರಗೊಂಡಾಗ ಮತ್ತು ಒಟ್ಟಿಗೆ ಸೇರಿಕೊಂಡಾಗ ಅವು ರೂಪುಗೊಳ್ಳುತ್ತವೆ. ಹೃದಯ, ಕಿಡ್ನಿ, ನರಮಂಡಲ, ಲಿವರ್ ಯಾವ ಭಾಗದಲ್ಲಾದರೂ ರಚನೆಗೊಳ್ಳಬಹುದು.

ಮತ್ತಷ್ಟು ಓದಿ: Thyroid Symptoms: ನಿಮ್ಮ ಪಾದಗಳಲ್ಲಿ ಇಂತಹ ಲಕ್ಷಣಗಳಲ್ಲಿ ಕಂಡುಬಂದರೆ ನಿರ್ಲಕ್ಷ್ಯಿಸದಿರಿ

ಅಮಿಲೋಯ್ಡೋಸಿಸ್ ಕಾರಣಗಳು ಅಮಿಲೋಯ್ಡೋಸಿಸ್ ವಿವಿಧ ಪ್ರೋಟೀನ್‌ಗಳಿಂದ ಉಂಟಾಗಬಹುದು, ಆದರೆ ಕೆಲವು ಮಾತ್ರ ಗಂಭೀರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ. ನೀವು ಹೊಂದಿರುವ ಅಮಿಲೋಯ್ಡೋಸಿಸ್ ಪ್ರಕಾರವನ್ನು ಪ್ರೋಟೀನ್‌ನ ಪ್ರಕಾರದಿಂದ ನಿರ್ಧರಿಸಲಾಗುತ್ತದೆ ಮತ್ತು ಅದು ಎಲ್ಲಿ ಸಂಗ್ರಹವಾಗಿದೆ ಎಂಬುದರ ಮೇಲೆ ಗಂಭೀರತೆಯನ್ನು ತಿಳಿಯಲಾಗುತ್ತದೆ.

ಅಮಿಲೋಯ್ಡೋಸಿಸ್ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಅಮಿಲಾಯ್ಡ್​ ಒಂದು ಅಸಹಜ ಪ್ರೋಟೀನ್ ಆಗಿದೆ. ಇದು ಸಾಮಾನ್ಯವಾಗಿ ಮೂಳೆ, ಮಜ್ಜೆಗಳಲ್ಲಿ ಶೇಖರಣೆ ಕಷ್ಟವಾಗುತ್ತದೆ ಮತ್ತು ಅಂಗಗಳ ಆಕಾರವನ್ನು ಬದಲಾಯಿಸುತ್ತದೆ.

ಕೆಲವೊಮ್ಮೆ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡ ಅಥವಾ ಹೃದಯದ ಗಾತ್ರವು ಚಿಕ್ಕದಾಗಿರುತ್ತದೆ ಅಥವಾ ದೊಡ್ಡದಾಗುತ್ತದೆ.ಈ ಕಾಯಿಲೆಯಿಂದಾಗಿ, ಹೃದಯ, ಯಕೃತ್ತು, ಮೂತ್ರಪಿಂಡ ಮತ್ತು ದೇಹದ ಇತರ ಭಾಗಗಳಲ್ಲಿ ಅಮಿಲಾಯ್ಡ್ ಪ್ರೋಟೀನ್ ರೂಪುಗೊಳ್ಳುತ್ತದೆ. ಅಮಿಲೋಯ್ಡೋಸಿಸ್ನಲ್ಲಿ ಹಲವಾರು ವಿಧಗಳಿವೆ. ಕೆಲವು ಆನುವಂಶಿಕವಾಗಿವೆ. ದೀರ್ಘಕಾಲ ಡಯಾಲಿಸಿಸ್ ಮಾಡುವುದರಿಂದಲೂ ಈ ಕಾಯಿಲೆ ಬರಬಹುದು. ಈ ರೋಗವು ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

ಅಮಿಲೋಯ್ಡ್ ಪ್ರೋಟೀನ್ ಎಂದರೇನು?  ಅಮಿlಓಯ್ಡ್ ಸಾಮಾನ್ಯವಾಗಿ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಇದು ವಿವಿಧ ರೀತಿಯ ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ. ಅಮಿಲಾಯ್ಡ್ ಒಂದು ಅಸಹಜ ಪ್ರೋಟೀನ್. ಇದು ಸಾಮಾನ್ಯವಾಗಿ ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ. ಇದು ಯಾವುದೇ ಅಂಗಾಂಶ ಅಥವಾ ಅಂಗದಲ್ಲಿ ಶೇಖರಣೆ ಮಾಡಬಹುದು.

ಅಮಿಯಾಯ್ಡೋಸಿಸ್ ಲಕ್ಷಣಗಳು ಈ ರೋಗದ ಲಕ್ಷಣಗಳೆಂದರೆ ಊತ, ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ಮರಗಟ್ಟುವಿಕೆ, ಕೈಕಾಲುಗಳಲ್ಲಿ ನೋವು.

ಮೊಣಕಾಲುಗಳು ಮತ್ತು ಪಾದಗಳ ಊತ ದಣಿದ ಮತ್ತು ದುರ್ಬಲ ಭಾವನೆ ಉಸಿರಾಟದ ತೊಂದರೆ ಚರ್ಮದ ಬದಲಾವಣೆಗಳು ಚರ್ಮದ ದಪ್ಪವಾಗುವುದು ಅಥವಾ ಸಣ್ಣ ಮೂಗೇಟುಗಳು ಕಣ್ಣುಗಳ ಸುತ್ತ ಕಲೆಗಳು ಹೆಚ್ಚಿದ ಹೃದಯ ಬಡಿತ ಉಸಿರಾಟದ ತೊಂದರೆಯಿಂದಾಗಿ ನೇರವಾಗಿ ಮಲಗಲು ಅಸಮರ್ಥತೆ

ಅಮಿಲೋಯ್ಡೋಸಿಸ್ ಚಿಕಿತ್ಸೆ ಈ ಕಾಯಿಲೆಗೆ ಯಾವುದೇ ಮನೆಮದ್ದುಗಳು ಲಭ್ಯವಿಲ್ಲ. ಈ ರೋಗದ ನಂತರ ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದರ ಹೊರತಾಗಿ, ಕೀಮೋಥೆರಪಿ ಅಥವಾ ಕಾಂಡಕೋಶ ಕಸಿ ಮಾತ್ರ ಆಯ್ಕೆಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ