AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಿನ ಉಪಾಹಾರದಲ್ಲಿ ಅನ್ನ ಸೇವಿಸುವ ಅಭ್ಯಾಸ ನಿಮಗಿದೆಯೇ? ಆರೋಗ್ಯಕರವೇ, ಇಲ್ಲವೇ ತಿಳಿಯಿರಿ

ಬಹಳಷ್ಟು ಮಂದಿ ಬೆಳಗ್ಗೆ ಉಪಾಹಾರದಲ್ಲಿ ಅನ್ನದಿಂದ ಮಾಡಿದ ತಿಂಡಿಗಳನ್ನೇ ತಿನ್ನುತ್ತಾರೆ, ಚಿತ್ರಾನ್ನ, ಪುಳಿಯೊಗರೆ, ಬಿಸಿಬೇಳೆ ಬಾತ್, ಇನ್ನಿತರೆ ಬಾತ್​ಗಳನ್ನು ತಿನ್ನುತ್ತಾರೆ.

ಬೆಳಗಿನ ಉಪಾಹಾರದಲ್ಲಿ ಅನ್ನ ಸೇವಿಸುವ ಅಭ್ಯಾಸ ನಿಮಗಿದೆಯೇ? ಆರೋಗ್ಯಕರವೇ, ಇಲ್ಲವೇ ತಿಳಿಯಿರಿ
ಅನ್ನ
ನಯನಾ ರಾಜೀವ್
|

Updated on: Feb 05, 2023 | 2:55 PM

Share

ಬಹಳಷ್ಟು ಮಂದಿ ಬೆಳಗ್ಗೆ ಉಪಾಹಾರದಲ್ಲಿ ಅನ್ನದಿಂದ ಮಾಡಿದ ತಿಂಡಿಗಳನ್ನೇ ತಿನ್ನುತ್ತಾರೆ, ಚಿತ್ರಾನ್ನ, ಪುಳಿಯೊಗರೆ, ಬಿಸಿಬೇಳೆ ಬಾತ್, ಇನ್ನಿತರೆ ಬಾತ್​ಗಳನ್ನು ತಿನ್ನುತ್ತಾರೆ. ವಿಶೇಷವಾಗಿ ಈಶಾನ್ಯ ಭಾರತದ ಕೆಲವು ರಾಜ್ಯಗಳಲ್ಲಿ ಕಂಡುಬರುತ್ತದೆ. ಮತ್ತು ಜಪಾನ್‌ನಂತಹ ಕೆಲವು ದೇಶಗಳಲ್ಲಿ, ಅಕ್ಕಿಯನ್ನು ಯಾವಾಗಲೂ ಬೆಳಗಿನ ಊಟದಲ್ಲಿ ಸೇರಿಸಲಾಗುತ್ತದೆ. ಇದು ಗಂಟೆಗಳ ಕಾಲ ಹೊಟ್ಟೆಯನ್ನು ಪೂರ್ಣವಾಗಿ ಇರಿಸುತ್ತದೆ ಮತ್ತು ದೇಹವನ್ನು ಶಕ್ತಿಯುತವಾಗಿರಿಸುತ್ತದೆ. ಆದರೆ, ಬೆಳಗ್ಗೆ ಅನ್ನ ತಿನ್ನುವುದು ನಿಜಕ್ಕೂ ಒಳ್ಳೆಯ ಅಭ್ಯಾಸವೇ ಎಂಬುದು ಹಲವರ ಮನಸ್ಸಿನಲ್ಲಿರುವ ಪ್ರಶ್ನೆ ಅದರ ಬಗ್ಗೆ ತಿಳಿಯೋಣ.

ಅಕ್ಕಿ ಶಕ್ತಿಯ ಕೇಂದ್ರವಾಗಿದೆ ರೊಟ್ಟಿ ಅಥವಾ ಇನ್ನಿತರೆ ಆಹಾರವನ್ನು ಸೇವಿಸಿದರೆ ಅರಿಯಾಗಿ ತಿಂದಿಲ್ಲ ಎನ್ನುವ ಭಾವನೆ ಇಒರುತ್ತದೆ, ಅನ್ನವನ್ನು ತಿಂದರಷ್ಟೇ ಮನಸ್ಸಿಗೆ ಒಂದು ರೀತಿಯ ತೃಪ್ತಿ. ಆದರೆ, ಪ್ರತಿನಿತ್ಯ ಅನ್ನ ತಿನ್ನಲು ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಇದು ಬಹಳಷ್ಟು ಕಾರ್ಬೋಹೈಡ್ರೇಟ್ ಅನ್ನು ಹೊಂದಿರುತ್ತದೆ, ಬಟಾಣಿ, ಬೀನ್ಸ್, ಕ್ಯಾರೆಟ್, ಪಾಲಕ್ ಮತ್ತು ಕುಂಬಳಕಾಯಿಯಂತಹ ತರಕಾರಿಗಳೊಂದಿಗೆ ತಿನ್ನುವಾಗ ಅನ್ನವು ಪೌಷ್ಟಿಕ ಭಕ್ಷ್ಯವಾಗಿದೆ. ಯಾವುದೇ ಬಣ್ಣದ ಅಕ್ಕಿಯು ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಬಹಳಷ್ಟು ಫೋಲೇಟ್ ಅನ್ನು ಹೊಂದಿರುತ್ತದೆ.

ಅನ್ನವನ್ನು ತಿನ್ನಲು ಉತ್ತಮ ಸಮಯ ಯಾವುದು? ನಿಮ್ಮ ದೇಹವು ಹೆಚ್ಚು ಸಕ್ರಿಯವಾಗಿರುವ ಸಮಯ ಮತ್ತು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ತಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಅಥವಾ ಮಧುಮೇಹ ಹೊಂದಿರುವ ಜನರಿಗೆ, ಬೆಳಗ್ಗೆ ಅನ್ನವನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಸ್ಪೈಕ್ ಅನ್ನು ತಡೆಯಲು ಸಹಾಯ ಮಾಡುತ್ತದೆ.

ಮತ್ತಷ್ಟು ಓದಿ:Sunflower Seeds Benefits: ಸೂರ್ಯಕಾಂತಿ ಬೀಜಗಳಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳಿವು

ಆದಾಗ್ಯೂ, ಇದನ್ನು ಮಿತವಾಗಿ ಮತ್ತು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬೇಕು, ಆಗ ಮಾತ್ರ ಅನ್ನವು ಪೌಷ್ಟಿಕ ಆಹಾರವಾಗಿ ಪರಿಣಾಮಕಾರಿಯಾಗಬಹುದು. ರಾತ್ರಿಯ ಊಟಕ್ಕೆ ಅನ್ನವನ್ನು ತಿನ್ನುವುದನ್ನು ಬಿಟ್ಟುಬಿಡುವುದು ಉತ್ತಮ, ಆದ್ದರಿಂದ ಮಲಗುವ ಮುನ್ನ ಹೊಟ್ಟೆ ಹೊಟ್ಟೆ ಹಗುರವಾಗಿರಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ