ಅಂಡಮಾನ್: 142 ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿಯನ್ನು ತಡೆದ ಭದ್ರತಾ ಏಜೆನ್ಸಿ
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 142 ಶಂಕಿತ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿಯನ್ನು ಕರಾವಳಿ ಭದ್ರತಾ ಏಜೆನ್ಸಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶಹೀದ್ ದ್ವೀಪದ ಬಳಿ ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಣಿ 14-15 ದಿನಗಳ ಹಿಂದೆ ಬಾಂಗ್ಲಾದೇಶದಿಂದ ಹೊರಟು ಇಂಡೋನೇಷ್ಯಾಕ್ಕೆ ತೆರಳುತ್ತಿತ್ತು ಎಂದು ಅವರು ಹೇಳಿದರು.

ಪೋರ್ಟ್ ಬ್ಲೇರ್ ಪೊಲೀಸ್ ನಿಯಂತ್ರಣ ಕೊಠಡಿಗೆ ಸ್ಥಳೀಯ ಗುಪ್ತಚರದಿಂದ ಶಹೀದ್ ದ್ವೀಪ ಬಳಿ ಅನುಮಾನಾಸ್ಪದ ದೋಣಿ ಚಲನೆಯ ಬಗ್ಗೆ ಕರೆ ಬಂದಿತ್ತು.
ಅನೇಕ ಕರಾವಳಿ ಭದ್ರತಾ ಏಜೆನ್ಸಿಗಳು (ನೌಕಾಪಡೆ, ಕೋಸ್ಟ್ ಗಾರ್ಡ್ ಮತ್ತು ಮೆರೈನ್ ಪೋಲೀಸ್ ಸೇರಿದಂತೆ) ಸ್ಥಳಕ್ಕೆ ಆಗಮಿಸಿತ್ತು. ದೋಣಿಯಲ್ಲಿ 47 ಮಹಿಳೆಯರು ಮತ್ತು 59 ಅಪ್ರಾಪ್ತರು ಇದ್ದರು.
ದೋಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಮುಂದಿನ ಪ್ರಯಾಣ ಸಾಧ್ಯವಾಗದ ಕಾರಣ ಸಾಗರ ಪೊಲೀಸರು ಅವರನ್ನು ಶಹೀದ್ ದ್ವೀಪಕ್ಕೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು
ಅವರೆಲ್ಲರನ್ನೂ ಪೋರ್ಟ್ ಬ್ಲೇರ್‌ಗೆ ಕರೆದೊಯ್ದು ಕೇಂದ್ರ ಸರ್ಕಾರದಿಂದ ಹೆಚ್ಚಿನ ಸೂಚನೆಗಾಗಿ ಸ್ಥಳೀಯ ಆಡಳಿತವು ತಾತ್ಕಾಲಿಕ ಆಶ್ರಯದಲ್ಲಿ ಇರಿಸಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಫೆಬ್ರವರಿ 13 ರಂದು 69 ರೋಹಿಂಗ್ಯಾಗಳೊಂದಿಗೆ ಮೋಟಾರ್ ಬೋಟ್ ನಿಕೋಬಾರ್ ಜಿಲ್ಲೆಯನ್ನು ತಲುಪಿತ್ತು. ಇದು ಇಂಡೋನೇಷ್ಯಾಕ್ಕೆ ಪ್ರಯಾಣಿಸುತ್ತಿತ್ತು, ಆದರೆ ಕೆಟ್ಟ ಹವಾಮಾನ ಅಡ್ಡಿಪಡಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ