Big News: ಬಿಹಾರದ ಗಂಗಾ ನದಿಯಲ್ಲಿ ಮುಳುಗಿದ 55 ಜನರಿದ್ದ ಬೋಟ್; 15 ಜನ ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Sep 05, 2022 | 10:43 AM

ಮುಳುಗಿದ ಬೋಟ್​ನಲ್ಲಿ ಸುಮಾರು 50ರಿಂದ 55 ಜನರು ಇದ್ದರು. ಗಂಗಾ ನದಿಯಲ್ಲಿ ಮುಳುಗಿ 15 ಜನರು ನಾಪತ್ತೆಯಾಗಿದ್ದಾರೆ. ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

Big News: ಬಿಹಾರದ ಗಂಗಾ ನದಿಯಲ್ಲಿ ಮುಳುಗಿದ 55 ಜನರಿದ್ದ ಬೋಟ್; 15 ಜನ ನಾಪತ್ತೆ
ಗಂಗಾನದಿಯಲ್ಲಿ ಮುಳುಗಿದ ಬೋಟ್
Follow us on

ಪಾಟ್ನಾ: ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಂದು ಬೆಳಗ್ಗೆ ಪಾಟ್ನಾ (Patna) ಸಮೀಪದ ದಾನಾಪುರದ ಶಹಾಪುರ್ ಪೊಲೀಸ್ ಠಾಣೆ ಪ್ರದೇಶದ ಬಳಿ 55 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಗಂಗಾ ನದಿಯಲ್ಲಿ (Ganga River) ಮುಳುಗಿದೆ. ಈ ಘಟನೆಯಲ್ಲಿ 15 ಜನರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಸುರಕ್ಷಿತವಾಗಿ ದಡಕ್ಕೆ ಸಾಗಿಸಲಾಗಿದೆ.

ಮುಳುಗಿದ ಬೋಟ್​ನಲ್ಲಿ ಸುಮಾರು 50ರಿಂದ 55 ಜನರು ಇದ್ದರು. ಗಂಗಾ ನದಿಯಲ್ಲಿ ಮುಳುಗಿ 15 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮಾಹಿತಿ ಪಡೆದ ನಂತರ ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಕೆಲವು ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ರಕ್ಷಣೆಗಾಗಿ ಎರಡು ಬೋಟ್​​ಗಳನ್ನು ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದು ಎಸ್‌ಡಿಎಂ ಡಣಾಪುರ ತಿಳಿಸಿದ್ದಾರೆ.

ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ಬೋಟ್; 10 ಜನರು ಪ್ರಾಣಾಪಾಯದಿಂದ ಪಾರು

ಮಾಹಿತಿಯ ಮೇರೆಗೆ ಶಹಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕಾಣೆಯಾದವರಲ್ಲಿ ರಾಮಧರ್ ರಾಮ್ (65), ಕಾಂಚನ್ ದೇವಿ (35), ಡೋರಾ ರಾಮ್ ಅವರ ಪುತ್ರಿ (40), ಭೋಲಾ ಕುಮಾರಿ (12), ಆರತಿ ಕುಮಾರಿ (14), ಪೂಜನ್ ರೈ ಅವರ ಪತ್ನಿ (45), ಕುಂಕುಮ್ ದೇವಿ, ವಿನೋದ್ ರೈ, ಛೋಟು ರಾಮ್ ಮುಂತಾದವರು ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Mon, 5 September 22