Boat capsized: ಗಂಗಾ ನದಿಯಲ್ಲಿ ದೋಣಿ ಮಗುಚಿ, 5 ಮಕ್ಕಳ ಮೃತದೇಹ ಪತ್ತೆ
ಬುಧವಾರ ಸಂಜೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಗಂಗಾ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದಿದೆ. ರಕ್ಷಣಾ ತಂಡದಿಂದ ಐವರು ಮಕ್ಕಳ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ.
ಉತ್ತರ ಪ್ರದೇಶ: ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿನ ಗಂಗಾ ನದಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಿದ್ದು, ಇದೀಗ ರಕ್ಷಣಾ ತಂಡಗಳು ನದಿಯಿಂದ ಐದು ಮಕ್ಕಳ ಶವಗಳನ್ನು ಹೊರತೆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು, 24 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ರೆಯೋತಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನದಿಯಲ್ಲಿ ದೋಣಿ ಮೂಲಕ ಮಾರ್ಕೆಟ್ನಿಂದ ವಾಪಸ್ಸು ಬರಬೇಕಾದರೆ ಈ ಘಟನೆ ನಡೆದಿದೆ.
ಸ್ಥಳೀಯರ ಸಹಾಯದಿಂದ ಹದಿನೇಳು ಜನರನ್ನು ರಕ್ಷಿಸಲಾಗಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅರುಣ್ ಸಿಂಗ್ ತಿಳಿಸಿದ್ದಾರೆ.
ತರಬೇತಿ ಪಡೆದ ದೋಣಿ ಚಾಲಕರ ಮೂಲಕ ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮುಳುಗುಗಾರರು ನಗೀನಾ ಪಾಸ್ವಾನ್ (70) ಮತ್ತು ವಿಷಂಭರ್ ಗೌರ್ ಅವರ ಮೃತದೇಹಗಳನ್ನು ಬುಧವಾರ ಹೊರತೆಗೆದಿದ್ದಾರೆ.
ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) ಮೃತದೇಹಗಳನ್ನು ಗುರುವಾರ ನದಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ.
Published On - 9:56 am, Fri, 2 September 22