Viral Video: ಜನರೆದುರೇ ಪಂಜಾಬ್​ನ ಆಮ್ ಆದ್ಮಿ ಶಾಸಕಿಗೆ ಗಂಡನಿಂದ ಕಪಾಳಮೋಕ್ಷ; ವಿಡಿಯೋ ವೈರಲ್

ಈ ವೀಡಿಯೊದಲ್ಲಿ ಬಲ್ಜಿಂದರ್ ಕೌರ್ ತನ್ನ ಪತಿ ಸುಖರಾಜ್ ಸಿಂಗ್ ಜೊತೆ ಜಗಳವಾಡುತ್ತಿರುವುದನ್ನು ನೋಡಬಹುದು. ಆಗ ಸುಖರಾಜ್ ಸಿಂಗ್ ಎದ್ದು ಕೋಪದಿಂದ ಬಲ್ಜಿಂದರ್ ಕೌರ್‌ ಕಪಾಲಕ್ಕೆ ಹೊಡೆದಿದ್ದಾರೆ.

Viral Video: ಜನರೆದುರೇ ಪಂಜಾಬ್​ನ ಆಮ್ ಆದ್ಮಿ ಶಾಸಕಿಗೆ ಗಂಡನಿಂದ ಕಪಾಳಮೋಕ್ಷ; ವಿಡಿಯೋ ವೈರಲ್
ಜನರೆದುರೇ ಪಂಜಾಬ್​ನ ಆಮ್ ಆದ್ಮಿ ಶಾಸಕಿಯ ಕಪಾಲಕ್ಕೆ ಬಾರಿಸಿದ ಗಂಡ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 02, 2022 | 10:26 AM

ನವದೆಹಲಿ: ಗಂಡ-ಹೆಂಡತಿ ಜಗಳ ಬೀದಿಗಿಳಿದು ಜಗಳವಾಡುವುದು ಸಾಮಾನ್ಯ. ಆದರೆ, ಶಾಸಕಿಗೇ ಜನರೆದುರು ಗಂಡ ಕಪಾಲಕ್ಕೆ ಹೊಡೆದಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಗಂಡ- ಹೆಂಡತಿ ನಡುವೆ ಜಗಳ ಉಂಟಾದ ಪರಿಣಾಮ ಆಮ್ ಆದ್ಮಿ ಪಕ್ಷದ (AAP) ಶಾಸಕಿ ಬಲ್ಜಿಂದರ್ ಕೌರ್ (Baljinder Kaur) ಅವರಿಗೆ ಆಡಳಿತ ಪಕ್ಷದ ನಾಯಕರೂ ಆಗಿರುವ ಅವರ ಪತಿ ಕಪಾಳಮೋಕ್ಷ ಮಾಡಿದ್ದಾರೆ.

ತಲ್ವಾಂಡಿ ಸಾಬೊದಿಂದ 2 ಬಾರಿ ಶಾಸಕಿಯಾಗಿರುವ ಬಲ್ಜಿಂದರ್ ಕೌರ್ ಜೊತೆ ಜಗಳವಾಡಿದ ಆಕೆಯ ಗಂಡ ಜನರೆದುರೇ ಶಾಸಕಿಗೆ ಹೊಡೆದಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಬಲ್ಜಿಂದರ್ ಕೌರ್ ತನ್ನ ಪತಿ ಸುಖರಾಜ್ ಸಿಂಗ್ ಜೊತೆ ಜಗಳವಾಡುತ್ತಿರುವುದನ್ನು ನೋಡಬಹುದು. ಆಗ ಸುಖರಾಜ್ ಸಿಂಗ್ ಎದ್ದು ಕೋಪದಿಂದ ಬಲ್ಜಿಂದರ್ ಕೌರ್‌ ಕಪಾಲಕ್ಕೆ ಹೊಡೆದಿದ್ದಾರೆ. ಆಗ ದಂಪತಿಗಳ ಬಳಿ ನಿಂತಿದ್ದ ಕೆಲವರು ಮಧ್ಯ ಪ್ರವೇಶಿಸಿ ಸುಖರಾಜ್ ಸಿಂಗ್​​ರನ್ನು ತಳ್ಳಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ: ಬಂಧನದ ಎಕ್ಸ್​ಕ್ಲ್ಯೂಸೀವ್ ವಿಡಿಯೋ ಇಲ್ಲಿದೆ

ಜುಲೈ 10ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕಿ ಬಲ್ಜಿಂದರ್ ಕೌರ್ ತನ್ನ ಪತಿಯ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಅವರು ಈ ವೀಡಿಯೊವನ್ನು ನೋಡಿದ್ದಾರೆ. ಈ ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.

ಎಎಪಿಯ ಮಜಾ ಪ್ರದೇಶದ ಯುವ ವಿಭಾಗದ ಸಂಚಾಲಕರಾಗಿರುವ ಬಲ್ಜಿಂದರ್ ಕೌರ್ ಮತ್ತು ಸುಖರಾಜ್ ಸಿಂಗ್ ಫೆಬ್ರವರಿ 2019ರಲ್ಲಿ ವಿವಾಹವಾಗಿದ್ದರು. ಬಲ್ಜಿಂದರ್ ಕೌರ್ ಅವರು 2009ರಲ್ಲಿ ಪಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದಿಂದ M Phil ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಸೇರುವ ಮೊದಲು, ಬಲ್ಜಿಂದರ್ ಕೌರ್ ಫತೇಘರ್ ಸಾಹಿಬ್‌ನಲ್ಲಿರುವ ಮಾತಾ ಗುಜ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Fri, 2 September 22