ಅರಬ್ಬೀ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ಬೋಟ್; 10 ಜನರು ಪ್ರಾಣಾಪಾಯದಿಂದ ಪಾರು

ಮೀನುಗಾರಿಕಾ ಬೋಟ್​ವೊಂದು ಅರಬ್ಬೀ ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಬೋಟ್​​ನಲ್ಲಿದ್ದ 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

TV9kannada Web Team

| Edited By: Vivek Biradar

Aug 07, 2022 | 3:49 PM

ದಕ್ಷಿಣ ಕನ್ನಡ: ಮೀನುಗಾರಿಕಾ ಬೋಟ್​ವೊಂದು ಅರಬ್ಬೀ ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಬೋಟ್​​ನಲ್ಲಿದ್ದ 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಮುಳಗುತ್ತಿದ್ದಂತೆ ಜನರು ಈಜಿ ಮತ್ತೊಂದು ಬೋಟ್​ ಹತ್ತಿ ಪಾರಾಗಿದ್ದಾರೆ. ಜೈ ಶ್ರೀರಾಮ್ ಹೆಸರಿನ ಬೋಟ್ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆ ಮುಳುಗಡೆಯಾಗಿದೆ. ಮಂಗಳೂರಿನಿಂದ 30 ನಾಟಿಕಲ್ ಮೈಲಿನಲ್ಲಿ ಘಟನೆ ನಡೆದಿದೆ.

Follow us on

Click on your DTH Provider to Add TV9 Kannada