AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾದ ಚಿಲ್ಕಾ ಸರೋವರದಲ್ಲಿ 2 ಗಂಟೆಗಳ ಕಾಲ ಹಡಗಿನಲ್ಲಿ ಸಿಲುಕಿದ್ದ ಕೇಂದ್ರ ಸಚಿವ ಪರಷೋತ್ತಮ್

ಕೇಂದ್ರ ಸಚಿವ ಪರಷೋತ್ತಮ್ ರೂಪಾಲಾ(Parshottam Rupala) ಅವರಿದ್ದ ಬೋಟ್ ಭಾನುವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಒಡಿಶಾದ ಚಿಲ್ಕಾ ಸರೋವರದಲ್ಲಿ ಸಿಲುಕಿಕೊಂಡಿತ್ತು. ಮೀನುಗಾರರು ಹಾಕಿದ ಬಲೆಯಲ್ಲಿ ಬೋಟ್​​ಸಿಕ್ಕಿಹಾಕಿಕೊಂಡಿರಬಹುದು ಎಂಬ ಅನುಮಾನಗಳು ಇದ್ದವು.

ಒಡಿಶಾದ ಚಿಲ್ಕಾ ಸರೋವರದಲ್ಲಿ 2 ಗಂಟೆಗಳ ಕಾಲ ಹಡಗಿನಲ್ಲಿ ಸಿಲುಕಿದ್ದ ಕೇಂದ್ರ ಸಚಿವ ಪರಷೋತ್ತಮ್
ರೂಪಾಲ
ನಯನಾ ರಾಜೀವ್
|

Updated on: Jan 08, 2024 | 8:39 AM

Share

ಕೇಂದ್ರ ಸಚಿವ ಪರಷೋತ್ತಮ್ ರೂಪಾಲಾ(Parshottam Rupala) ಅವರಿದ್ದ ಬೋಟ್ ಭಾನುವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಒಡಿಶಾದ ಚಿಲ್ಕಾ ಸರೋವರದಲ್ಲಿ ಸಿಲುಕಿಕೊಂಡಿತ್ತು. ಮೀನುಗಾರರು ಹಾಕಿದ ಬಲೆಯಲ್ಲಿ ಬೋಟ್​​ಸಿಕ್ಕಿಹಾಕಿಕೊಂಡಿರಬಹುದು ಎಂಬ ಅನುಮಾನಗಳು ಇದ್ದವು.

ಆಡಳಿತವು ಮತ್ತೊಂದು ಹಡಗನ್ನು ಸ್ಥಳಕ್ಕೆ ಕಳುಹಿಸಿತು, ಅದರ ಮೂಲಕ ಸಚಿವರನ್ನು ರಕ್ಷಿಸಿ ಅವರು ತೆರಳಬೇಕಿದ್ದ ಸ್ಥಾನಕ್ಕೆ ಕರೆದೊಯ್ಯಲಾಯಿತು. ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಮತ್ತು ಇತರ ಕೆಲವು ಸ್ಥಳೀಯ ಪಕ್ಷದ ನಾಯಕರು ಅವರೊಂದಿಗೆ ಇದ್ದರು. ಸಚಿವರು ಖುರ್ದಾ ಜಿಲ್ಲೆಯ ಬಾರ್ಕುಲ್‌ನಿಂದ ಪ್ರಯಾಣ ಆರಂಭಿಸಿ ಬ್ಲೂ ಲಗೂನ್ ಮೂಲಕ ಪುರಿ ಜಿಲ್ಲೆಯ ಸತ್ಪಾದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಹಡಗು ಸುಮಾರು ಎರಡು ಗಂಟೆಗಳ ಕಾಲ ನಲ್ಬನಾ ಪಕ್ಷಿಧಾಮದ ಬಳಿಯ ಸರೋವರದ ಮಧ್ಯದಲ್ಲಿ ಸಿಲುಕಿಕೊಂಡಿತ್ತು. ಕತ್ತಲಾಗಿತ್ತು, ಹಡಗು ಚಲಾಯಿಸುವ ವ್ಯಕ್ತಿ ದಾರಿ ತಪ್ಪಿ ಬೇರೆ ಮಾರ್ಗದಲ್ಲಿ ಬಂದಿದ್ದರು. ಆಡಳಿತವು ತಕ್ಷಣವೇ ಸತ್ಪಾರಾದಿಂದ ಮತ್ತೊಂದು ಹಡಗನ್ನು ಕಳುಹಿಸಿತು ಮತ್ತು ಸಚಿವರು ಮತ್ತು ಅವರ ಸಹೋದ್ಯೋಗಿಗಳು ಅದನ್ನು ಹತ್ತಿದರು.

ಪುರಿ ಜಿಲ್ಲೆಯ ಕೃಷ್ಣಪ್ರಸಾದ್ ಪ್ರದೇಶದ ಬಳಿ ಕಾರ್ಯಕ್ರಮವೊಂದರಲ್ಲಿ ರೂಪಾಲಾ ಭಾಗವಹಿಸಬೇಕಿತ್ತು. ಆದರೆ ಈ ಘಟನೆಯಿಂದಾಗಿ ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಲಾಯಿತು. ರಾತ್ರಿ 10.30ರ ಸುಮಾರಿಗೆ ರೂಪಾಲಾ ಪುರಿಗೆ ತಲುಪಿದ್ದಾರೆ.

ಮತ್ತಷ್ಟು ಓದಿ: Europa 2: ನವಮಂಗಳೂರು ಬಂದರಿಗೆ ಆಗಮಿಸಿದ ಕ್ರೂಸ್ ಹಡಗು

11ನೇ ಹಂತದ ಸಾಗರ್ ಪರಿಕ್ರಮ ಕಾರ್ಯಕ್ರಮದಡಿ ಮೀನುಗಾರರೊಂದಿಗೆ ಸಂವಾದ ನಡೆಸಲು ಕೇಂದ್ರ ಸಚಿವರು ಒಡಿಶಾಗೆ ಭೇಟಿ ನೀಡಿದ್ದಾರೆ.

ಇದಕ್ಕೂ ಮುನ್ನ ಗಂಜಾಂ ಜಿಲ್ಲೆಯ ಗೋಪಾಲಪುರ ಬಂದರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೋಮವಾರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರೊಂದಿಗೆ ರೂಪಾಲಾ ಅವರು ಪಾರಾದೀಪ್ ಮೀನುಗಾರಿಕಾ ಬಂದರಿನ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ