ಕೆನಡಾದಲ್ಲಿ ಹತ್ಯೆಯಾಗಿರುವ ಭಾರತ ಮೂಲದ ವಿದ್ಯಾರ್ಥಿಯ ಮೃತದೇಹ ನಾಳೆ ಸ್ವದೇಶಕ್ಕೆ ತಲುಪಲಿದೆ. ಕಾರ್ತೀಕ್ ವಾಸುದೇವ್ ಉತ್ತರ ಪ್ರದೇಶದ ಘಾಜಿಯಾಬಾದ್ನವನಾಗಿದ್ದು, ಏಪ್ರಿಲ್ 9ರಂದು ಟೊರಂಟೋದ ಗ್ಲೆನ್ ರಸ್ತೆಯಲ್ಲಿರುವ ಶೆಬೋರ್ನ್ ಸಬ್ವೇ (ಸುರಂಗಮಾರ್ಗ) ಸ್ಟೇಶನ್ನ ಪ್ರವೇಶದ್ವಾರದಲ್ಲಿ ಹತ್ಯೆಗೀಡಾಗಿದ್ದಾರೆ. ಕಾರ್ತೀಕ್ ಮೃತದೇಹ ಏಪ್ರಿಲ್ 16ರಂದು ದೆಹಲಿಗೆ ತಲುಪಲಿದೆ ಎಂದು ತಿಳಿಸಿದ್ದಾಗಿ ಕುಟುಂಬದವರು ಹೇಳಿದ್ದಾರೆ. ಅಂದಹಾಗೇ, ವಿದ್ಯಾರ್ಥಿಗೆ ಗುಂಡು ಹೊಡೆದ ಆರೋಪಿಯನ್ನು ಟೊರಂಟೊ ಪೊಲೀಸರು ಬಂಧಿಸಿದ್ದು, ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಒಂದು ಸಲ ವಿಚಾರಣೆಯೂ ನಡೆದಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 20ಕ್ಕೆ ಮುಂದೂಡಲಾಗಿದೆ ಎಂದು ಕಾರ್ತಿಕ್ ವಾಸುದೇವ್ ತಂದೆ ಹಿತೇಶ್ ವಾಸುದೇವ್ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
ಕಾರ್ತೀಕ್ ವಾಸುದೇವ್ ಜನವರಿಯಲ್ಲಿ ಕೆನಡಾಕ್ಕೆ ಹೋಗಿದ್ದರು. ಸೆನೆಕಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಉದ್ಯಮ ವಿಷಯದಲ್ಲಿ ಎಂಬಿಎ ಓದುತ್ತಿದ್ದರು. ಹಾಗೇ, ಮೆಕ್ಸಿಕನ್ ರೆಸ್ಟೋರೆಂಟ್ನಲ್ಲಿ ಪಾರ್ಟ್ಟೈಂ ಕೆಲಸವನ್ನೂ ಮಾಡುತ್ತಿದ್ದರು. ಏಪ್ರಿಲ್ 9ರಂದು ಕೆಲಸಕ್ಕೆ ತೆರಳುತ್ತಿದ್ದಾಗ ಹತ್ಯೆಗೀಡಾಗಿದ್ದಾರೆ. ಇವರನ್ನು ಕೊಂದ ಆರೋಪಿಯನ್ನು 39ವರ್ಷದ ರಿಚರ್ಡ್ ಜೊನಾಥನ್ ಎಡ್ವಿನ್ ಎಂದು ಗುರುತಿಸಲಾಗಿದೆ. ಈತ ಏಪ್ರಿಲ್ 5ಂದು ಇನ್ನೊಬ್ಬ ವ್ಯಕ್ತಿಯನ್ನು ಕೊಂದಿರುವ ಶಂಕೆಯೂ ವ್ಯಕ್ತವಾಗಿದೆ ಎಂದು ಟೊರಂಟೊ ಪೊಲೀಸರು ತಿಳಿಸಿದ್ದಾರೆ.
Ghaziabad, UP | Toronto Police has said that the accused has been produced before court & has been asked to hire a lawyer because of which next hearing is on April 20… Body (of Kartik Vasudev) will arrive in New Delhi tomorrow (Apr 16): Hitesh Vasudev, deceased’s father https://t.co/NlPy9f5vOt pic.twitter.com/I8aSK5FpRJ
— ANI UP/Uttarakhand (@ANINewsUP) April 15, 2022
ಕಾರ್ತೀಕ್ ವಾಸುದೇವ್ ಸಾವಿಗೆ ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಸಂತಾಪ ಸೂಚಿಸಿತ್ತು. ನಾವು ಕಾರ್ತೀಕ್ ವಾಸುದೇವ್ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾರ್ತೀಕ್ ಶವವನ್ನು ಭಾರತಕ್ಕೆ ಕಳಿಸುವ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಕುಟುಂಬಕ್ಕೆ ಸಮಾಧಾನ ಹೇಳಿದ್ದೇವೆ ಎಂದು ತಿಳಿಸಿತ್ತು. ರಾಯಭಾರಿ ಕಚೇರಿ ಮಾಡಿರುವ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿದ್ದ ಎಸ್.ಜೈಶಂಕರ್, ಕಾರ್ತೀಕ್ ಸಾವಿನ ದುರಂತದಿಂದ ನಿಜಕ್ಕೂ ನೋವಾಗಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದಿದ್ದರು.
ಇದನ್ನೂ ಓದಿ: Rain Updates: ದಕ್ಷಿಣ ಭಾರತ ಸೇರಿ ಈ ರಾಜ್ಯಗಳಲ್ಲಿ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ