Uttarakhand glacier burst ತುಂಡಾದ ರೀತಿಯಲ್ಲಿ.. ರಿಷಿಗಂಗಾ ಪವರ್ ಪ್ರಾಜೆಕ್ಟ್​ ಇಂಜಿನಿಯರ್​ನ​ ಮೃತದೇಹ ಪತ್ತೆ

|

Updated on: Feb 12, 2021 | 8:29 PM

ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಿಷಿಗಂಗಾ ಪವರ್ ಪ್ರಾಜೆಕ್ಟ್​ನ ಇಂಜಿನಿಯರ್ ಬಶರತ್​ ಅಹ್ಮದ್​ ಜರ್ಗರ್​ ಅವರ ಮೃತದೇಹ ಪತ್ತೆಯಾಗಿದೆ. ರೇಣಿಗ್ರಾಮದಲ್ಲಿ ಶೋಧಕಾರ್ಯದ ವೇಳೆ ತುಂಡಾದ ರೀತಿಯಲ್ಲಿ 53 ವರ್ಷದ ಬಶರತ್ ಅಹ್ಮದ್ ಶವ ಪತ್ತೆಯಾಗಿದೆ.

Uttarakhand glacier burst ತುಂಡಾದ ರೀತಿಯಲ್ಲಿ.. ರಿಷಿಗಂಗಾ ಪವರ್ ಪ್ರಾಜೆಕ್ಟ್​ ಇಂಜಿನಿಯರ್​ನ​ ಮೃತದೇಹ ಪತ್ತೆ
ಬಶರತ್​ ಅಹ್ಮದ್​ ಜರ್ಗರ್ (ಒಳಚಿತ್ರ); ಚಮೋಲಿಯಲ್ಲಿ ಮುಂದುವರಿದ ಶೋಧ ಕಾರ್ಯ
Follow us on

ದೆಹರಾದೂನ್​: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಿಷಿಗಂಗಾ ಪವರ್ ಪ್ರಾಜೆಕ್ಟ್​ನ ಇಂಜಿನಿಯರ್ ಬಶರತ್​ ಅಹ್ಮದ್​ ಜರ್ಗರ್​ ಅವರ ಮೃತದೇಹ ಪತ್ತೆಯಾಗಿದೆ. ರೇಣಿಗ್ರಾಮದಲ್ಲಿ ಶೋಧಕಾರ್ಯದ ವೇಳೆ ತುಂಡಾದ ರೀತಿಯಲ್ಲಿ 53 ವರ್ಷದ ಬಶರತ್ ಅಹ್ಮದ್ ಶವ ಪತ್ತೆಯಾಗಿದೆ. Uttarakhand Glacier burst

JCBಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬಶರತ್​ ಅವರ ಮೃತದೇಹ ಪತ್ತೆಯಾಗಿದೆ. ಹಿಮಕುಸಿತದಲ್ಲಿ ಕೊಚ್ಚಿ ಹೋದ 5 ದಿನಗಳ ಬಳಿಕ ಪವರ್​ ಪ್ರಾಜೆಕ್ಟ್​ನ ಇಂಜಿನಿಯರ್​ ಆಗಿದ್ದ ಬಶರತ್​ ಅವರ ಮೃತದೇಹ ಪತ್ತೆಯಾಗಿದೆ.

ಬಶರತ್​ ಅಹ್ಮದ್​ ಮೂಲತಃ ಕಾಶ್ಮೀರದವರು. ಕಳೆದು 2 ವರ್ಷಗಳಿಂದ ಯೋಜನೆಯ ನಿರ್ವಹಣೆ ಮಾಡುತ್ತಿದ್ದ ಕುಂದನ್​ ಕಂಪನಿಯಲ್ಲಿ ಜನರಲ್​ ಮ್ಯಾನೇಜರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ, ಮೃತನ​ ಕುಟುಂಬಸ್ಥರು ಬಶರತ್ ಅವರ ಅಂತ್ಯಕ್ರಿಯೆಯನ್ನು ಕಾಶ್ಮೀರದಲ್ಲಿ ನೆರವೇರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:Uttarakhand Glacier Burst: ಉತ್ತರಾಖಂಡದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಈವರೆಗೆ ಹೊರತೆಗೆದದ್ದು 36 ಮೃತದೇಹಗಳು

Published On - 7:26 pm, Fri, 12 February 21