ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೊರೊನಾ ಲಸಿಕೆ ಪಡೆದಿದ್ದಾರೆ. ಅವರಷ್ಟೇ ಅಲ್ಲದೇ ಅವರ ಕುಟುಂಬದಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಕೊರೊನಾ ಲಸಿಕೆ ಪಡೆದಿದ್ದಾರೆ. ಮಗ ಅಭಿಷೇಕ್ ಬಚ್ಚನ್ ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿದ್ದು, ಅವರನ್ನು ಬಿಟ್ಟು ಕುಟುಂಬದ ಎಲ್ಲರೂ ಮೊದಲ ಹಂತದ ಕೊರೊನಾ ಲಸಿಕೆ ಪಡೆದಿದ್ದೇವೆ ಎಂದು ಅಮಿತಾಬ್ ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಶೆಹನ್‌ಶಾ ಅಮಿತಾಬ್ ಬಚ್ಚನ್ ಅವರಿಗೆ 2020ರ ಜುಲೈ 11ರಂದು ಕೊರೊನಾ ಸೋಂಕು ತಗುಲಿತ್ತು. ಈ ಸಂಬಂಧ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದ ಬಿಗ್ ಬಿ ತಮಗೆ ಕೊರೋನಾ ಪಾಸಿಟಿವ್ ಇರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಬಿಗ್ ಬಿ ಚಿಕಿತ್ಸೆ ಪಡೆದಿದ್ದರು. ತಮ್ಮ ಜತೆ ಸಂಪರ್ಕಕ್ಕೆ ಬಂದ ಹಿತೈಷಿಗಳು ಮತ್ತ ಸ್ನೇಹಿತರು ಕೂಡಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.
T 3861 –
Got it done !
My CoviD vaccination this afternoon ..
All well .. ?— Amitabh Bachchan (@SrBachchan) April 1, 2021
ಇಷ್ಟೇ ಅಲ್ಲದೇ ಹಿಂದಿನ ವರ್ಷ ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಮತ್ತು ಪುಟಾಣಿ ಆರಾಧ್ಯಾಳಿಗೂ ಕೂಡಾ ಕೊರೊನಾ ಸೋಂಕು ತಗುಲಿತ್ತು. ನಾನು ಮತ್ತು ನಮ್ಮ ತಂದೆ ಅಮಿತಾಬ್ ಬಚ್ಚನ್ ಅವರ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಿದೆ. ಈ ಬಗ್ಗೆ ಸಂಬಂಧ ಪಟ್ಟ ಬಿಎಂಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಅಭಿಷೇಕ್ ಬಚ್ಚನ್ ಹೊರತುಪಡಿಸಿ ಮಿಕ್ಕವರೆಲ್ಲರೂ ಕೊರೊನಾ ಲಸಿಕೆ ಪಡೆದಂತಾಗಿದೆ.
ಇದನ್ನೂ ಓದಿ: ಸರ್ಕಾರಿ ರಜಾ ದಿನಗಳಲ್ಲೂ ಕೊರೊನಾ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ
ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ರೋಗ ಇಲ್ಲದಿದ್ದರೂ ಲಸಿಕೆ ಪಡೆಯಲು ಅವಕಾಶ
(Bollywood Big B Amitabh Bachchan get Corona vaccine along with family)