ವಿಡಿಯೋ: ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್​ ಅಧಿಕಾರಿಗೆ ದೂರು ನೀಡಿದ ಬಾಲಕ!

|

Updated on: May 05, 2023 | 11:03 AM

ಅಬೋಧ ಬಾಲಕನ ದೂರಿಗೆ ಸ್ಪಂದಿಸಿದ ಎಎಸ್ಐ ಶಿವಯ್ಯ ಅವರು ರಹೀಮ್ ಪೋಷಕರಿಬ್ಬರನ್ನೂ ಠಾಣೆಗೆ ಕರೆಸಿದ್ದರು. ಗಂಡನಿಗೆ ಛೀಮಾರಿ ಹಾಕಿದ ಪೊಲೀಸರು ಪತಿ-ಪತ್ನಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಿ ಕಳುಹಿಸಿದ್ದಾರೆ.

ವಿಡಿಯೋ: ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ ಎಂದು ಪೊಲೀಸ್​ ಅಧಿಕಾರಿಗೆ ದೂರು ನೀಡಿದ ಬಾಲಕ!
ಅಪ್ಪ ದಿನಾ ಕುಡಿದು ಬಂದು ಅಮ್ಮನನ್ನು ಹೊಡೆಯುತ್ತಾನೆ
Follow us on

ಆಂಧ್ರಪ್ರದೇಶ: ಅಪ್ಪ ದಿನಾ ಕುಡಿದು ಬಂದು ಅಮಲಿನಲ್ಲಿ (alcoholic father) ತಾಯಿಯನ್ನು (mother) ಹೊಡೆಯುವುದನ್ನು ಮಗನಿಗೆ ನೋಡಲಾಗಲಿಲ್ಲ. ಪ್ರತಿದಿನ ತಂದೆಯ (father) ಕಿರುಕುಳ ಸಹಿಸಲಾಗದೆ ಮಗ ಸೀದಾ ಪೊಲೀಸ್​ ಠಾಣೆಗೆ ಹೋಗಿದ್ದಾನೆ. ಅಲ್ಲಿದ್ದ ಪೊಲೀಸ್​ ಅಧಿಕಾರಿ ಎದುರು ತನ್ನ ದುಃಖ ತೋಡಿಕೊಂಡಿದ್ದಾನೆ. ಹೀಗೆ ತನ್ನ ಜೀನವದಲ್ಲಿ ಅದಾಗಲೇ ಮಡುಗಟ್ಟಿರುವ ನೋವಿನ ಬಗ್ಗೆ ಹೇಳಿಕೊಂಡಿರುವುದು ಒಂಬತ್ತು ವರ್ಷದ ಬಾಲಕ (boy). ಇನ್ನ ಆ ಪೊಲೀಸ್​ ಅಧಿಕಾರಿ ತನ್ನ ಕಣ್ಣೆದುರು ಹೀಗೆ ಕಣ್ಣೀರು ಹಾಕುತ್ತಿರುರುವ 9 ವರ್ಷದ ಪೋರ ತನ್ನ ಮಗನದೇ ವಯಸ್ಸಿನವನು ಎಂದು ಅಧಿಕಾರಿ ಭಾವಿಸಿ, ಅವನ ನೋವಿಗೆ ಸ್ಪಂದಿಸುತ್ತಾರೆ. ಈ ಬೇಸರದ ಸಂಗತಿ ನಡೆದಿರುವುದು ಬಾಪಟ್ಲಾ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ.

ಹೌದು, ಜಿಲ್ಲೆಯ ಕರ್ಲಪಾಲೆಂ ಮಂಡಲದ ಇಸ್ಲಾಂಪೇಟೆ ಪೊಲೀಸ್ ಠಾಣೆಯಲ್ಲಿ ಇಂತಹ ವಿಚಿತ್ರ ದೂರು ದಾಖಲಾಗಿದೆ. ಗ್ರಾಮದ ಒಂಬತ್ತು ವರ್ಷದ ಬಾಲಕ ರಹೀಮ್ ಕರ್ಲಪಾಲೆಂ ಪಿಎಸ್‌ಐಗೆ ಹೋಗಿ ದೂರು ನೀಡಿದ್ದಾನೆ. ಎಎಸ್‌ಐ ಶಿವಯ್ಯ ಅವರು ಬಾಲಕನ ಭುಜ ಹಿಡಿದು ಠಾಣೆಗೆ ಯಾಕೆ ಬಂದಿದ್ದೀಯಾ ಎಂದು ಕೇಳಿದರು. ನನ್ನ ತಂದೆ ಕುಡಿದು ಬಂದು ನನ್ನ ತಾಯಿಯನ್ನು ಹೊಡೆಯುತ್ತಿದ್ದಾರೆ. ನನ್ನ ತಾಯಿ ಎಷ್ಟೇ ಬೇಡಿಕೊಂಡರೂ ಅಪ್ಪ ಕೇಳುವುದಿಲ್ಲ. ಅವನು ಪ್ರತಿದಿನವೂ ಹೀಗೆ ಮಾಡುತ್ತಾನೆ. ಅದಕ್ಕೇ ಪೊಲೀಸರಿಗೆ ಹೇಳೋಕೆ ಬಂದೆ.. ಎನ್ನುತ್ತಾ ಅಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗೆ ಆ ಬಾಲಕ ದಿಟ್ಟವಾಗಿ ಕೇಳಿದ್ದಾನೆ.

ಇದನ್ನೂ ಓದಿ:

ತಾಳಿ ಕಟ್ಟುವ ಶುಭ ಘಳಿಗೆ… ವರ ಮಹಾಶಯ ಮದುವೆ ಮಂಟಪದಿಂದ ಲಾಂಗ್ ಜಂಪ್​! ಆಮೇಲೆ ಏನಾಯ್ತು?

ಬಾಲಕನ ಧೈರ್ಯಕ್ಕೆ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅದೇ ವೇಳೆ… ಬಾಲಕನ ಜೀವನ ಹೀಗಾಗಿದೆಯಲ್ಲಾ ಎಂದೂ ಮರುಕ ಪಟ್ಟಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಈ ಪ್ರಸಂಗದ ವಿಡಿಯೋವೊಂದು ಇಂಟರ್​​ ನೆಟ್‌ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ.

ರಹೀಮ್ ಅವರ ತಂದೆ ಸುಭಾನಿ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸುಭಾಂಬಿ ಮನೆಯಲ್ಲೇ ಇರುತ್ತಾರೆ. ಮದ್ಯವ್ಯಸನಿಯಾಗಿರುವ ಮನೆಯ ಯಜಮಾನ ಸುಭಾನಿ ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಸುಭಾಂಬಿಗೆ ಕಿರುಕುಳ ನೀಡುತ್ತಾನೆ. ಇದನ್ನು ಕಂಡ ರಹೀಮ್ ತನ್ನ ತಂದೆಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದಾನೆ.

ಅಬೋಧ ಬಾಲಕನ ದೂರಿಗೆ ಸ್ಪಂದಿಸಿದ ಎಎಸ್ಐ ಶಿವಯ್ಯ ಅವರು ರಹೀಮ್ ಪೋಷಕರಿಬ್ಬರನ್ನೂ ಠಾಣೆಗೆ ಕರೆಸಿದ್ದರು. ಗಂಡನಿಗೆ ಛೀಮಾರಿ ಹಾಕಿದ ಪೊಲೀಸರು ಪತಿ-ಪತ್ನಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಿ ಕಳುಹಿಸಿದ್ದಾರೆ. ಮತ್ತೆ ಇಂತಹ ಘಟನೆ ನಡೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ತರುವಾಯ ಬಾಲಕನ ಸಾಹಸ ಮತ್ತು ಅಮ್ಮನ ಮೇಲಿನ ಆತನ ಪ್ರೀತಿ ಹಾಗೂ ಅಪ್ಪನ ಕ್ರೌರ್ಯದ ಬಗ್ಗೆ ಸ್ಥಳೀಯರು ಚರ್ಚೆಯಲ್ಲಿ ತೊಡಗಿದ್ದಾರೆ.

ವೈರಲ್ ವಿಡಿಯೋಗಾಗಿ ಇಲ್ಲಿ  ಕ್ಲಿಕ್ ಮಾಡಿ