ತಾಯಿಯ ಪ್ರಿಯಕರನಿಂದ ಬಾಲಕನ ಹತ್ಯೆ, ಸೂಟ್​ಕೇಸ್​ನಲ್ಲಿ ಶವ ಪತ್ತೆ

ಹತ್ತು ವರ್ಷದ ಬಾಲಕನನ್ನು ತಾಯಿಯ ಪ್ರಿಯಕರನೇ ಹತ್ಯೆ ಮಾಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮನಾಲಿಯ 32 ವರ್ಷದ ದೀಪಾ ಎಂದು ಗುರುತಿಸಲಾಗಿದ್ದು, ಆಕೆ ಅವಿವಾಹಿತೆಯಾಗಿದ್ದಳು. ಚೆನ್ನೈನ ದಕ್ಷಿಣ ಉಪನಗರದ ತೊರೈಪಾಕ್ಕಂ ಬಳಿ ಈ ಭೀಕರ ಹತ್ಯೆ ನಡೆದಿದೆ. ಪೊಲೀಸರು ಶಿವಗಂಗಾ ಜಿಲ್ಲೆಯ ನಿವಾಸಿ ಮಣಿಕಂದನ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ

ತಾಯಿಯ ಪ್ರಿಯಕರನಿಂದ ಬಾಲಕನ ಹತ್ಯೆ, ಸೂಟ್​ಕೇಸ್​ನಲ್ಲಿ ಶವ ಪತ್ತೆ
ಕ್ರೈಂ
Image Credit source: NDTV

Updated on: May 12, 2025 | 11:38 AM

ಗುವಾಹಟಿ, ಮೇ 12: ತಾಯಿಯ ಪ್ರಿಯಕರನೇ 10 ವರ್ಷದ ಬಾಲಕನನ್ನು ಕೊಲೆ(Murder) ಮಾಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಬಾಲಕನನ್ನು ಪೊದೆಯ ಬಳಿಕ ಕೊಂದು ಸೂಟ್​ಕೇಸ್​ನಲ್ಲಿ ಮುಚ್ಚಿಟ್ಟಿದ್ದ ಎನ್ನಲಾಗಿದೆ. ತನ್ನ ಮಗು ಟ್ಯೂಷನ್‌ನಿಂದ ಮನೆಗೆ ಹಿಂತಿರುಗಿಲ್ಲ ಎಂದು ಮಹಿಳೆ ಶನಿವಾರ ಪೊಲೀಸರಿಗೆ ನಾಪತ್ತೆ ದೂರು ನೀಡಿದ ನಂತರ ತನಿಖೆ ಆರಂಭಿಸಲಾಯಿತು.

ತನಿಖೆಯ ಸಮಯದಲ್ಲಿ, ಪತಿಯಿಂದ ಬೇರ್ಪಟ್ಟ ಮಹಿಳೆ ಜಿತುಮೋನಿ ಹಲೋಯ್ ಎಂಬ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆತನನ್ನು ವಿಚಾರಿಸಿ ಸೂಟ್‌ಕೇಸ್ ಇರುವ ಸ್ಥಳಕ್ಕೆ ಕರೆದೊಯ್ದಾಗ ಆತ ಅಪರಾಧ ಒಪ್ಪಿಕೊಂಡಿದ್ದಾನೆ.

ನಂತರ ನಗರದ ಹೊರವಲಯದಲ್ಲಿರುವ ಪೊದೆಯೊಂದರಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಕೊಲೆಯಲ್ಲಿ ಆಕೆಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆಯಿಂದ ಬೇರ್ಪಟ್ಟಿರುವ ಮಗುವಿನ ತಂದೆ ಕೂಡ ಪೊಲೀಸರಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಇದನ್ನೂ ಓದಿ
ಮೀರತ್​ ಕೊಲೆ ಪ್ರಕರಣ: ಮುಸ್ಕಾನ್​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ
ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದ ಅಮ್ಮ-ಮಗಳು
ಸೂಟ್‌ಕೇಸ್‌ನಲ್ಲಿ ತುಂಡಾಗಿ ಕತ್ತರಿಸಿದ ಮಹಿಳೆಯ ಶವ ಪತ್ತೆ

ಮತ್ತಷ್ಟು ಓದಿ: ಕೋಲ್ಕತ್ತಾ: ನದಿಗೆ ಶವವಿದ್ದ ಸೂಟ್​ಕೇಸ್​ ಎಸೆಯಲು ಹೋಗಿ ಸಿಕ್ಕಿಬಿದ್ದ ಅಮ್ಮ-ಮಗಳು

ಮತ್ತೊಂದು ಪ್ರಕರಣ
ಸೂಟ್​ಕೇಸ್​ನಲ್ಲಿ ಮಹಿಳೆಯ ಶವ ಪತ್ತೆ
ಚೆನ್ನೈನಲ್ಲಿ ರಸ್ತೆ ಬದಿಯಲ್ಲಿ ಎಸೆದಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಬೇರೆಡೆ ಕೊಲೆ ಮಾಡಿ ಸೂಟ್‌ಕೇಸ್ ಅನ್ನು ತೊರೈಪಾಕ್ಕಂನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಚೆನ್ನೈನ ಕುಮಾರನ್ ಕುಡಿಲ್ ನಿವಾಸಿಯೊಬ್ಬರು ಮುಂಜಾನೆ 5.30ರ ಸುಮಾರಿಗೆ ತೊರೈಪಾಕ್ಕಂ ಪ್ರದೇಶದಲ್ಲಿ ಬಿದ್ದಿರುವ ಸೂಟ್‌ಕೇಸ್ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಆಕೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನೂ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೃತ ಮಹಿಳೆಯನ್ನು ಮನಾಲಿಯ 32 ವರ್ಷದ ದೀಪಾ ಎಂದು ಗುರುತಿಸಲಾಗಿದ್ದು, ಆಕೆ ಅವಿವಾಹಿತೆಯಾಗಿದ್ದಳು. ಚೆನ್ನೈನ ದಕ್ಷಿಣ ಉಪನಗರದ ತೊರೈಪಾಕ್ಕಂ ಬಳಿ ಈ ಭೀಕರ ಹತ್ಯೆ ನಡೆದಿದೆ. ಪೊಲೀಸರು ಶಿವಗಂಗಾ ಜಿಲ್ಲೆಯ ನಿವಾಸಿ ಮಣಿಕಂದನ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ