ಸಮಸ್ಯೆಯಿದ್ದ ಕಣ್ಣೇ ಬೇರೆ, ವೈದ್ಯರು ಆಪರೇಷನ್ ಮಾಡಿರುವ ಕಣ್ಣೇ ಬೇರೆ
ಸಾಮಾನ್ಯ ಮನುಷ್ಯನಿಗೆ ಕಾಣದ ಸಮಸ್ಯೆಗಳು ವೈದ್ಯರಿಗೆ ಕಾಣುತ್ತದೆ, ಆದರೆ ಬಾಲಕ ಸಮಸ್ಯೆ ಹೊಂದಿರುವ ಕಣ್ಣು ಬಿಟ್ಟು ಬೇರೆ ಕಣ್ಣಿಗೆ ವೈದ್ಯರು ಆಪರೇಷನ್ ಮಾಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಬಾಲಕನ ಕಣ್ಣಿಗೆ ಆಪರೇಷನ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದರು. ಬಾಲಕನ ಎಡಗಣ್ಣಿನಲ್ಲಿ ಸಮಸ್ಯೆ ಇದ್ದು, ಇದರಿಂದ ಆಗಾಗ ನೀರು ಬರುತ್ತಿತ್ತು.

ಈ ಕಣ್ಣಿಗೆ ಆಪರೇಷನ್ ಕೂಡ ಆಗಬೇಕಿತ್ತು. ಆದರೆ ಆಪರೇಷನ್ ಮಾಡಿದಾಗ ಕುಟುಂಬದ ಸದಸ್ಯರು ದಿಗ್ಭ್ರಮೆಗೊಂಡರು, ಏಕೆಂದರೆ ಆಪರೇಷನ್ ಎಡಗಣ್ಣಿಗೆ ಮಾಡಿರಲಿಲ್ಲ ಆದರೆ ಬಲಗಣ್ಣು ಸಂಪೂರ್ಣವಾಗಿ ಚೆನ್ನಾಗಿತ್ತು ಆದರೆ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು.
ಪೋಷಕರು ವೈದ್ಯರಿಗೆ ದೂರು ನೀಡಿದಾಗ, ವೈದ್ಯರು ಮತ್ತು ಸಿಬ್ಬಂದಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಘಟನೆ ನವೆಂಬರ್ 12ರಂದು ನಡೆದಿದೆ, ನಿತಿನ್ ಭಾಟಿ ಅವರ 7 ವರ್ಷದ ಮಗ ಯುಧಿಷ್ಠಿರನ ಎಡಗಣ್ಣಿನಿಂದ ಆಗಾ ನೀರು ಬರುತ್ತಿತ್ತು ಎಂದು ವೈದ್ಯರನ್ನು ಕೇಳಿದ್ದರು.
ಮತ್ತಷ್ಟು ಓದಿ: Mobile Eye Health Van: ಬೆಂಗಳೂರಿನಲ್ಲಿ ಸಂಚರಿಸಲಿದೆ ಸಂಚಾರಿ ನೇತ್ರ ಚಿಕಿತ್ಸಾ ವಾಹನ
ಶಸ್ತ್ರ ಚಿಕಿತ್ಸೆಗೆಂದು 45 ಸಾವಿರ ರೂ. ಕಟ್ಟಿಸಿಕೊಂಡಿದ್ದರು. ಆಪರೇಷನ್ ಮಾಡಲಾಯಿತು, ಆದರೆ ಇನ್ನೊಂದು ಕಣ್ಣಿಗೆ. ಬಾಲಕ ಮನೆಗೆ ತಲುಪಿದಾಗ ಎಡಗಣ್ಣಿನ ಬದಲು ಬಲಗಣ್ಣಿಗೆ ಬ್ಯಾಂಡೇಜ್ ಕಟ್ಟಿರುವುದು ತಾಯಿಗೆ ಕಾಣಿಸಿತು. ಇದಾದ ನಂತರ ಪೋಷಕರು ವೈದ್ಯರಿಗೆ ದೂರು ನೀಡಿದ್ದರು, ಆದರೆ ವೈದ್ಯರು ಮತ್ತು ಅವರ ಸಿಬ್ಬಂದಿ ಕೆಟ್ಟದಾಗಿ ವರ್ತಿಸಿದ್ದರು.
ಬಾಲಕನ ತಂದೆ ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದರು, ನಿತಿನ್ ಭಾಟಿ ಅವರು ತಮ್ಮ ದೂರಿನಲ್ಲಿ ವೈದ್ಯರ ಪರವಾನಿಗೆ ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ. ತನಿಖೆ ಆರಂಭವಾಗಿದ್ದು, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ