ಅಹಮದಾಬಾದ್: ಅಹಮದಾಬಾದ್‌ನಲ್ಲಿ (Ahmedabad) ನಿರ್ಮಾಣ ಹಂತದ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಏಳು ಕಾರ್ಮಿಕರು ಸಾವಿಗೀಡಾಗಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ಸುಮಾರು 10 ಗಂಟೆಯ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದ ಆಸ್ಪೈರ್ 2 ನ ಏಳನೇ ಮಹಡಿಯಲ್ಲಿ ಮೇಕ್-ಶಿಫ್ಟ್ ಲಿಫ್ಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಘಟನೆಯ ಸಮಯದಲ್ಲಿ, ತಾತ್ಕಾಲಿಕ ಲಿಫ್ಟ್ ವ್ಯವಸ್ಥೆಯಲ್ಲಿ ಎಂಟು ಕಾರ್ಮಿಕರಿದ್ದರು. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಂವಹನ ಅಥವಾ ಕರೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಅಗ್ನಿಶಾಮಕ ಮತ್ತು ಪೊಲೀಸ್ ತಂಡ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿತು.
ಇಂಥಾ ಘಟನೆ ನಡೆದಿದೆ ಎಂದು ಮಾಧ್ಯಮ ವರದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಂದ ಬಂದ ದೂರವಾಣಿ ಕರೆಗಳಿಂದ ನಮಗೆ ತಿಳಿಯಿತು. ಅಲ್ಲಿ ಏನಾಗಿದೆ ಎಂದು ಪರಿಶೀಲಿಸಲು ಸ್ಥಳಕ್ಕೆ ಬಂದೆವು. ಡೆವಲಪರ್‌ಗಳು ಅಥವಾ ಇತರ ಯಾವುದೇ ಏಜೆನ್ಸಿಯಿಂದ ಯಾವುದೇ ಅಧಿಕೃತ ಸಂವಹನ ಅಥವಾ ಮಾಹಿತಿಯನ್ನು ನಮಗೆ ಸಿಕ್ಕಿಲ್ಲ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
Lack of safety measures resulted in this mishap: localities react in #Ahmedabad lift crash row #Gujarat #TV9News pic.twitter.com/y6SbuT96KE
— Tv9 Gujarati (@tv9gujarati) September 14, 2022
ಇದು ಖಾಸಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡವಾಗಿದೆ, ಆದ್ದರಿಂದ ಘಟನೆಯ ವಿಚಾರಣೆಯ ಸಮಯದಲ್ಲಿ ನಿರ್ಮಾಣ ಯೋಜನೆಗಳು ಮತ್ತು ಇತರ ಅನುಮೋದನೆಗಳನ್ನು ಪರಿಶೀಲಿಸಲಾಗುವುದು ಎಂದು ಎಎಂಸಿ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಶ್ ಬರೋಟ್ ಹೇಳಿದ್ದಾರೆ.
Published On - 1:06 pm, Wed, 14 September 22