ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ(teachers’ recruitment scam) ಆರೋಪಿ ಆಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ (Arpita Mukherjee) ಸೇರಿದ ₹ 40.33 ಕೋಟಿ ಮೌಲ್ಯದ 40 ಸ್ಥಿರಾಸ್ತಿಗಳು ಮತ್ತು ₹ 7.89 ಕೋಟಿ ಮೊತ್ತವನ್ನು ಹೊಂದಿರುವ 35 ಬ್ಯಾಂಕ್ ಖಾತೆಗಳು ಸೇರಿದಂತೆ ₹ 48.22 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (Enforcement Directorate) ಮುಟ್ಟುಗೋಲು ಹಾಕಿದೆ.
ಮುಟ್ಟುಗೋಲು ಮಾಡಿ ಆಸ್ತಿಗಳಲ್ಲಿ ಫ್ಲಾಟ್‌ಗಳು, ಫಾರ್ಮ್‌ಹೌಸ್, ಕೋಲ್ಕತ್ತಾ ನಗರದಲ್ಲಿ ಪ್ರಧಾನ ಭೂಮಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಸೇರಿವೆ ಎಂದು ಇಡಿ ಸೋಮವಾರ ತಿಳಿಸಿದೆ.ಕೇಂದ್ರೀಯ ಏಜೆನ್ಸಿಯ ಪ್ರಕಾರ ಮುಟ್ಟುಗೋಲು ಹಾಕಲಾದ ಹಲವಾರು ಆಸ್ತಿಗಳನ್ನು ಡಮ್ಮಿ ಕಂಪನಿಗಳು ಮತ್ತು ಸಂಸ್ಥೆಗಳು ಮತ್ತು ಚಟರ್ಜಿಯ ಪ್ರಾಕ್ಸಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಹೆಸರಿನಲ್ಲಿ ಇರಿಸಲಾಗಿದೆ. ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ವಿವಿಧ ನೆಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಇಡಿ ಈ ಹಿಂದೆ ಚಟರ್ಜಿ ಮತ್ತು ಅವರ ಆಪ್ತೆ ಮುಖರ್ಜಿ ಅವರನ್ನು ಬಂಧಿಸಿತ್ತು.
ಈ ಹಿಂದೆ ಜುಲೈ 22 ಮತ್ತು ಜುಲೈ 27 ರಂದು ನಡೆಸಿದ ಶೋಧದ ವೇಳೆ ಎರಡು ನಿವೇಶನಗಳಿಂದ ಒಟ್ಟು ₹ 49.80 ಕೋಟಿ ನಗದು ಮತ್ತು ₹ 5.08 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಆಭರಣಗಳು ಸೇರಿದಂತೆ ₹ 103.10 ಕೋಟಿ ಮೌಲ್ಯದ ಆಸ್ತಿ ಇಡಿ ವಶಪಡಿಸಿಕೊಂಡಿತ್ತು.
ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಹಣದ ಜಾಡು ಹಿಡಿದಿರುವ ಏಜೆನ್ಸಿಯ ತನಿಖೆಗೆ ಸಂಬಂಧಿಸಿದಂತೆ ಚಟರ್ಜಿ ಮತ್ತು ಮುಖರ್ಜಿ ಅವರನ್ನು ಜುಲೈ 23 ರಂದು ಇಡಿ ಬಂಧಿಸಿತ್ತು. ತನಿಖೆಯ ಪ್ರಕಾರ ಈ ನೇಮಕಾತಿಗಳನ್ನು ರಾಜಕೀಯ ಪರಿಗಣನೆಯಿಂದ ಮಾಡಲಾಗಿದೆ. ಅವರ ಬಂಧನದ ನಂತರ, ಬಂಗಾಳದ ಮಾಜಿ ಶಿಕ್ಷಣ ಸಚಿವರು ಇಡಿ ವಶದಲ್ಲಿದ್ದು ಆಮೇಲೆ ನ್ಯಾಯಾಂಗ ಬಂಧನದಲ್ಲಿದ್ದರು. ಅಲ್ಲಿ ಸಂಸ್ಥೆಯು ಹಲವಾರು ದಿನಗಳವರೆಗೆ ಅವರನ್ನು ಪ್ರಶ್ನಿಸಿತು. ಅವರ ಬಂಧನದ ನಂತರ, ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿತ್ತು. ಶುಕ್ರವಾರ ಕೋಲ್ಕತ್ತಾ ನ್ಯಾಯಾಲಯವು ಚಟರ್ಜಿಯ ಜಾಮೀನನ್ನು ತಿರಸ್ಕರಿಸಿದ್ದು. ಅವರನ್ನು ಸೆಪ್ಟೆಂಬರ್ 21 ರವರೆಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಕಸ್ಟಡಿಗೆ ಒಪ್ಪಿಸಿದೆ.
Published On - 2:41 pm, Mon, 19 September 22