Breaking News: ಸಂಜಯ್ ರಾವತ್ ಆಗಸ್ಟ್ 4ರವರೆಗೆ ಇಡಿ ವಶಕ್ಕೆ; ಮನೆಯೂಟ, ವಕೀಲರ ಭೇಟಿಗೆ ಅನುಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 04, 2022 | 2:02 PM

ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಇಂದು ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ.

Breaking News: ಸಂಜಯ್ ರಾವತ್ ಆಗಸ್ಟ್ 4ರವರೆಗೆ ಇಡಿ ವಶಕ್ಕೆ; ಮನೆಯೂಟ, ವಕೀಲರ ಭೇಟಿಗೆ ಅನುಮತಿ
ಸಂಜಯ್ ರಾವತ್
Follow us on

ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರನ್ನು ಇಂದು (ಸೋಮವಾರ) ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯದ (ED) ಕಸ್ಟಡಿಗೆ ಒಪ್ಪಿಸಲಾಗಿದೆ. ತನಿಖಾ ಸಂಸ್ಥೆ ಎಂಟು ದಿನಗಳ ಕಸ್ಟಡಿಗೆ ಕೇಳಿತ್ತು ಆದರೆ ವಿಶೇಷ ನ್ಯಾಯಾಲಯ ಒಪ್ಪಲಿಲ್ಲ ಮತ್ತು 4 ದಿನಗಳ ಕಾಲ ಕಸ್ಟಡಿಗೆ ನೀಡಿತು. ಕಸ್ಟಡಿ ವಿಚಾರಣೆ ಅಗತ್ಯ ಎಂದು ನನಗನಿಸಿದೆ.ಪ್ರವೀಣ್ ರಾವತ್ ವಿರುದ್ಧ ಈ ಹಿಂದೆಯೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂಬುದನ್ನು ನಿರ್ಲಕ್ಷಿಸುವಂತಿಲ್ಲ. ಎಲ್ಲವನ್ನೂ  ಈಗಾಗಲೇ ದಾಖಲಿಸಲಾಗಿದ್ದು, ವಿಚಾರಣೆಯಿಂದ ತನಿಖೆವರೆಗೆ ಲಭ್ಯವಾಗಿದೆ. ಸಂಜಯ್ ರಾವತ್ ಅವರ ಪತ್ನಿಯ ಬ್ಯಾಂಕ್  ಖಾತೆಯಲ್ಲಿರುವ ಹಣದ ಬಗ್ಗೆಯೂ ತನಿಖೆ ನಡೆಸಲಾಗುವುದು. ಹಾಗಾಗಿ  ನನ್ನ ಅಭಿಪ್ರಾಯ ಏನೆಂದರೆ ಎಂಟು ದಿನಗಳ ಇಡಿ  ಕಸ್ಟಡಿ ಸಾಧ್ಯವಿಲ್ಲ.  ಅಪರಾಧದ ಬಗ್ಗೆ ವಿಚಾರಣೆ ನಡೆಸಲು ಆಗಸ್ಟ್ 4 ವರೆಗೆ ಆರೋಪಿಯನ್ನು ಕಸ್ಟಡಿಯಲ್ಲಿರಿಸಬಹುದು ಎಂದು  ವಿಶೇಷ ನ್ಯಾಯಮೂರ್ತಿ ಎಂಜಿ ದೇಶಪಾಂಡೆ  ಹೇಳಿದ್ದಾರೆ.

ಮನೆಯೂಟ, ವಕೀಲರನ್ನು ಭೇಟಿ ಮಾಡಲು ಅನುಮತಿ

ಇಡಿ ಕಸ್ಟಡಿಯಲ್ಲಿರುವಾಗ ರಾವತ್ ಅವರಿಗೆ ಮನೆಯೂಟ ಮತ್ತು ವಕೀಲರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

ಸಂಜಯ್ ರಾವತ್ ಕುಟುಂಬ ಭೇಟಿ ಮಾಡಿದ ಉದ್ಧವ್

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಂಜಯ್ ರಾವತ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಸಬರ್ ಬನ್ ಮುಂಬೈನ ಭಂದೂಪ್ ನಲ್ಲಿರುವ ರಾವತ್ ಮನೆಗೆ ಸಂಸದ ಅರವಿಂದ್ ಸಾವಂತ್, ಶಾಸಕ ರವೀಂದ್ರ ವೈಕಾರ್ ಮತ್ತು ಶಿವಸೇನಾ ನೇತಾರ ಮಿಲಿಂದ್ ನರ್ವೇಕರ್ ಜತೆಗೆ ಠಾಕ್ರೆ ಭೇಟಿ ನೀಡಿದ್ದಾರೆ.

ಏನಿದು ಪ್ರಕರಣ?

ಮುಂಬೈನ ಪತ್ರಾ ಚಾವ್ಲ್ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಬಂಧಿಸಲಾಗಿದೆ. 1,034 ಕೋಟಿ ರೂ. ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಈ ಹಿಂದೆ 2 ಬಾರಿ ವಿಚಾರಣೆ ನಡೆಸಲಾಗಿತ್ತು.
ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 9 ಗಂಟೆಗಳ ಕಾಲ ವಿಚಾರಣೆಯ ನಂತರ 60 ವರ್ಷದ ಸಂಜಯ್ ರಾವತ್ ಅವರನ್ನು ಬಂಧಿಸಲಾಯಿತು. ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Published On - 4:48 pm, Mon, 1 August 22