Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು

ಮದುವೆಗಳಲ್ಲಿ ಹಾರ ಬದಲಿಸುವ ಸಂದರ್ಭದಲ್ಲಿ ಈ ಆಟ ಸಹಜ. ಎರಡೂ ಕಡೆಯವರು ವಧು-ವರನನ್ನು ಎತ್ತಿ ಹಿಡಿದು, ಹಾರ ಹಾಕಲಾಗದಂತೆ ಸ್ವಲ್ಪ ಹೊತ್ತು ಸತಾಯಿಸುತ್ತಾರೆ.

Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು
ಪರಸ್ಪರರಿಗೆ ಹಾರ ಹಾಕಲು ಸಿದ್ಧತೆ
Updated By: Lakshmi Hegde

Updated on: Jun 27, 2021 | 3:41 PM

ಇತ್ತೀಚೆಗಂತೂ ಮದುವೆಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಚಿತ್ರ, ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಮಟನ್​ ಇಲ್ಲವೆಂದು ಮದುವೆ ಮುರಿದುಕೊಂಡ ವರ, ತನ್ನ ಪತಿಯಾಗುವವನಿಗೆ ಕನ್ನಡಕವಿಲ್ಲದೆ ಓದಲು ಸಾಧ್ಯವಿಲ್ಲವೆಂದು ತಿಳಿದು ಮಂಟಪದಿಂದ ಎದ್ದು ಹೋದ ವಧು..ಹೀಗೆ ಇತ್ತೀಚೆಗೆ ಇಂಥ ಹಲವಾರು ವಿಚಾರಗಳನ್ನು ಓದಿದ್ದೇವೆ. ಹಾಗೇ ಈಗೊಂದು ವಿಡಿಯೋ ವೈರಲ್​ ಆಗಿದೆ. ಆದರೆ ಇದು ಮೂರುವರ್ಷದ ಹಿಂದಿನದು. ಇದೀಗ ಮತ್ತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಅದೊಂದು ಮದುವೆ. ಅಲ್ಲಿ ಪರಸ್ಪರರಿಗೆ ಮಾಲೆ ಹಾಕುವ ಕಾರ್ಯಕ್ರಮ ನಡೆಯುತ್ತಿದ್ದು, ವಧು-ವರ ಎದುರುಬದುರಾಗಿ ನಿಂತಿದ್ದಾರೆ. ಅಷ್ಟರಲ್ಲಿ ವರನ ಕಡೆಯವರೊಬ್ಬರು ಬಂದು ಆತನನ್ನು ಎತ್ತಿ ಹಿಡಿಯುತ್ತಾರೆ. ವಧುವಿನ ಕಡೆಯಿಂದ ಯಾರೂ ಆಕೆಯನ್ನು ಅಷ್ಟು ಬೇಗ ಎತ್ತುವುದಿಲ್ಲ. ಆದರೆ ಅಲ್ಲೇ ಮೂಲೆಯಲ್ಲಿ ಒಬ್ಬರು ಫೋಟೋ ತೆಗೆಯುತ್ತ ಇದ್ದವರು ಕೂಡಲೇ ಬಂದು ವಧುವನ್ನು ಎತ್ತಿ ಹಿಡಿಯುತ್ತಾರೆ. ಆಗ ವಧುವಿಗೆ ವರನ ತಲೆ ಎಟಕುವ ಕಾರಣ ಆಕೆ ಹಾರ ಹಾಕುತ್ತಾಳೆ. ವರನೂ ಹಾರ ಹಾಕುತ್ತಾನೆ.

ಪರಸ್ಪರರಿಗೆ ಹಾರ ಹಾಕಿದ್ದು ಸುಸೂತ್ರವಾಗಿ ನಡೆಯಿತು. ಆದರೆ ವಧುವನ್ನು ಎತ್ತಿದ್ದ ವ್ಯಕ್ತಿಯ ಗ್ರಹಚಾರ ಮಾತ್ರ ಸರಿ ಇರಲಿಲ್ಲ. ಹಾರ ಹಾಕಿ, ಆತನ ತೋಳಿನಿಂದ ಕೆಳಗೆ ಇಳಿದ ವಧು, ತಿರುಗಿ ಆ ವ್ಯಕ್ತಿಯ ಕಪಾಲಕ್ಕೆ ಹೊಡೆದು, ಏನೋ ಎಚ್ಚರಿಕೆ ಕೊಡುತ್ತಾಳೆ. ಅವಮಾನದಿಂದ, ಕೋಪದಿಂದ ಅಲ್ಲಿಂದ ತೆರಳಿದ ಆ ವ್ಯಕ್ತಿ ಹೋಗುವಾಗ ಸುಮ್ಮನೆ ಹೋಗದೆ..ಅಲ್ಲೇ ಮೂಲೆಯಲ್ಲಿ ನಿಂತಿದ್ದ ಮಹಿಳೆಯ ಕಪಾಳಕ್ಕೆ ಹೊಡೆದು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಮದುವೆಗಳಲ್ಲಿ ಹಾರ ಬದಲಿಸುವ ಸಂದರ್ಭದಲ್ಲಿ ಈ ಆಟ ಸಹಜ. ಎರಡೂ ಕಡೆಯವರು ವಧು-ವರನನ್ನು ಎತ್ತಿ ಹಿಡಿದು, ಹಾರ ಹಾಕಲಾಗದಂತೆ ಸ್ವಲ್ಪ ಹೊತ್ತು ಸತಾಯಿಸುತ್ತಾರೆ. ಆದರೆ ವಧುವನ್ನು ಎತ್ತಿದ ಈತ ಯಾರು? ವಧುವಿಗ್ಯಾಕೆ ಅಷ್ಟು ಸಿಟ್ಟು ಬಂತು? ಎತ್ತಿ ಹಿಡಿಯುವಾಗ ಪ್ರತಿಭಟಿಸದ ಆಕೆ ನಂತರ ಯಾಕೆ ಹಾಗೆ ಹೊಡೆದಳು?..ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ. ಆದರೆ ವಿಡಿಯೋ ಮಾತ್ರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿರುತ್ತದೆ.

ಇದನ್ನೂ ಓದಿ: Viral Video: ಗಾಜಿನ ಬಾಟಲಿಯ ಮೇಲೆ ನಿಂತು ಯೋಗ ಮಾಡುತ್ತಿದ್ದಾಳೆ ಯುವತಿ! ಇದ್ದಕ್ಕಿದ್ದಂತೆ ಏನಾಯ್ತು ಅಂತ ವಿಡಿಯೋ ನೋಡಿ

Bride Slaps Man for Lifting Her During Varmala Ceremony viral video