ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟ ವಧು, ಅದೇ ಮುಹೂರ್ತದಲ್ಲಿ ಅವಳ ತಂಗಿಗೆ ತಾಳಿ ಕಟ್ಟಿದ ವರ!

|

Updated on: May 30, 2021 | 2:17 PM

ತಕ್ಷಣವೇ ಸ್ಥಳಕ್ಕೆ ವೈದ್ಯರನ್ನು ಕರೆಸಲಾಗುತ್ತದೆ. ವಧುವನ್ನು(ಸುರಭಿ) ಪರಿಶೀಲಿಸಿದ ವೈದ್ಯರು ಹೃದಯಾಘಾತದಿಂದ ಸಾವಿಗೀಡಾಗಿರುವ ವಿಷಯ ತಿಳಿಸುತ್ತಾರೆ. ಆದರೆ, ಎರಡೂ ಕುಟುಂಬದವರು ರಾಜಿ ಮಾಡಿಕೊಂಡು ಮಧುವಿನ ಸಹೋದರಿಯನ್ನು(ನಿಶಾ) ವರನಿಗೆ ಕೊಟ್ಟು ಮದುವೆ ಮಾಡುವುದಾಗಿ ನಿರ್ಧರಿಸುತ್ತಾರೆ.

ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟ ವಧು, ಅದೇ ಮುಹೂರ್ತದಲ್ಲಿ ಅವಳ ತಂಗಿಗೆ ತಾಳಿ ಕಟ್ಟಿದ ವರ!
ಪ್ರಾತಿನಿಧಿಕ
Follow us on

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿಯೂ ಮದುವೆ ಸಮಾರಂಭಗಳು ವಿಪರೀತವಾಗಿವೆ. ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಮದುವೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮದುವೆ ಸಮಾರಂಭ ನಡೆಯುತ್ತಿರುವಾಗ ಮನಕಲಕುವ ಘಟನೆಯೊಂದು ನಡೆದಿದ್ದು, ಮಂಟಪದಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆಯೇ ವಧು ಕುಸಿದು ಬಿದ್ದು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 

ತಕ್ಷಣವೇ ಸ್ಥಳಕ್ಕೆ ವೈದ್ಯರನ್ನು ಕರೆಸಲಾಗುತ್ತದೆ. ವಧುವನ್ನು(ಸುರಭಿ) ಪರಿಶೀಲಿಸಿದ ವೈದ್ಯರು ಹೃದಯಾಘಾತದಿಂದ ಸಾವಿಗೀಡಾಗಿರುವ ವಿಷಯ ತಿಳಿಸುತ್ತಾರೆ. ಆದರೆ, ಎರಡೂ ಕುಟುಂಬದವರು ರಾಜಿ ಮಾಡಿಕೊಂಡು ಮಧುವಿನ ಸಹೋದರಿಯನ್ನು(ನಿಶಾ) ವರನಿಗೆ ಕೊಟ್ಟು ಮದುವೆ ಮಾಡುವುದಾಗಿ ನಿರ್ಧರಿಸುತ್ತಾರೆ.

‘ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಎರಡು ಕುಟುಂಬಗಳ ನಡುವೆ ತಂಗಿ ನಿಶಾಳನ್ನು ಕೊಟ್ಟು ಮದುವೆ ಮಾಡುವ ಪ್ರಸ್ತಾಪವಾಯಿತು. ಎರಡೂ ಕುಟುಂಬದವರು ಒಪ್ಪಂದ ಮಾಡಿಕೊಂಡೆವು’ ಎಂದು ಸುರಭಿಯ ಸಹೋದರ ಸೌರಭ್​ ಹೇಳಿದ್ದಾರೆ.

ಹೀಗಾಗಿ ಸುರಭಿಯ ಮೃತದೇಹವನ್ನು ಒಂದು ಕೋಣೆಯಲ್ಲಿ ಇಟ್ಟರು. ವರ ಮುಂಜೇಶ್​ಗೆ ತಂಗಿ ನಿಶಾಳನ್ನು ಕೊಟ್ಟು ಮದುವೆ ಮಾಡಲಾಯಿತು. ಸಮಾರಂಭ ಮುಗಿದ ಬಳಿಕ ಸುರಭಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಸೌರಭ್​ ಹೇಳಿದ್ದಾರೆ.

‘ನಮ್ಮ ಕುಟುಂಬಕ್ಕೆ ಅದು ಕಷ್ಟದ ಸಮಯವಾಗಿತ್ತು. ಒಂದು ಕಡೆ ಒಂದು ಮಗಳ ಶವ ಕೋಣೆಯಲ್ಲಿದೆ. ಇನ್ನೊಂದು ಮಗಳನ್ನು ವಿವಾಹ ಮಾಡಿಕೊಡಬೇಕಿದೆ. ಇಂತಹ ಪರಿಸ್ಥಿತಿಯನ್ನು ನಾನು ಎಂದಿಗೂ ಯೋಚಿಸಿಯೂ ಇರಲಿಲ್ಲ’ ಎಂದು ಸುರಭಿ ಚಿಕ್ಕಪ್ಪ ಅಜಾಬ್​ ಸಿಂಗ್​ ಹೆಳಿದ್ದಾರೆ.

ಇದನ್ನೂ ಓದಿ:

ಯಾದಗಿರಿ: ಇಂದು ಒಂದೇ ದಿನ 3 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

Published On - 2:13 pm, Sun, 30 May 21