ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಲ್ಲಿ ಆಪ್ತ; ಮೇಲುಗೈ ಸಾಧಿಸಿದ್ದೇನೆ ಎಂದ ಬ್ರಿಜ್ ಭೂಷಣ್ ಶರಣ್ ಸಿಂಗ್

Brij Bhushan Sharan Singh: ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಪಡೆದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರನ್ನು ಪರಾಭವಗೊಳಿಸಿದ್ದಾರೆ. ಸಂಜಯ್ ಸಿಂಗ್ ಗೆಲುವಿಗೆ ಖುಷಿ ವ್ಯಕ್ತ ಪಡಿಸಿದ ಬ್ರಿಜ್ ಭೂಷಣ್, ನಾನು ಮೇಲುಗೈ ಸಾಧಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಲ್ಲಿ ಆಪ್ತ; ಮೇಲುಗೈ ಸಾಧಿಸಿದ್ದೇನೆ ಎಂದ ಬ್ರಿಜ್ ಭೂಷಣ್ ಶರಣ್ ಸಿಂಗ್
ಬ್ರಿಜ್ ಭೂಷಣ್ ಜತೆ ಸಂಜಯ್ ಸಿಂಗ್
Follow us
ರಶ್ಮಿ ಕಲ್ಲಕಟ್ಟ
|

Updated on: Dec 21, 2023 | 6:54 PM

ದೆಹಲಿ ಡಿಸೆಂಬರ್ 21: ಭಾರತದ ಕುಸ್ತಿ ಫೆಡರೇಶನ್‌ಗೆ (Wrestling Federation of India)ನಡೆದ ಚುನಾವಣೆಯಲ್ಲಿ ತಮ್ಮ ಆಪ್ತ ಸಂಜಯ್ ಸಿಂಗ್ (Sanjay Singh) ಅಧ್ಯಕ್ಷ ಸ್ಥಾನಕ್ಕೇರುತ್ತಿದ್ದಂತೆ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ದಬ್ದಬಾ ಥಾ, ದಬ್ದಬಾ ರಹೇಗಾ (ಮೇಲುಗೈ ಇತ್ತು, ಮೇಲುಗೈ ಸಾಧಿಸಿದ್ದೇನೆ) ಎಂದು ಹೇಳಿದ್ದಾರೆ. ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ ತಿಂಗಳುಗಳ ಕಾಲ  ಪ್ರತಿಭಟನೆ ನಡೆಸಿದ್ದರು.

ಗುರುವಾರ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಪಡೆದಿದ್ದು, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರನ್ನು ಪರಾಭವಗೊಳಿಸಿದ್ದಾರೆ . ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ಶೆರಾನ್ ಅವರನ್ನು ಬೆಂಬಲಿಸಿದ್ದರು.

ಸಂಜಯ್ ಸಿಂಗ್ ವಾರಣಾಸಿಯವರಾಗಿದ್ದು WFI ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿ. “ಜಿನ್ಕೋ ಕುಸ್ತಿ ಕರ್ನಿ ಹೈ ವೋ ಕುಸ್ತಿ ಕರೇಂ. ಜಿನ್ಕೋ ರಾಜನೀತಿ ಕರನೀ ಹೈಂ ವೋ ರಾಜನೀತಿ ಕರೇಂ. (ಸ್ಪರ್ಧಿಸಲು ಬಯಸುವ ಕುಸ್ತಿಪಟುಗಳು ಕುಸ್ತಿಯಾಡಬಹುದು.. ರಾಜಕೀಯ ಮಾಡಲು ಬಯಸುವವರು ರಾಜಕೀಯ ಮಾಡಬೇಕು). ಕಳೆದ ಏಳು-ಎಂಟು ತಿಂಗಳಲ್ಲಿ ನೋವು ಅನುಭವಿಸಿದ ದೇಶದ ಸಾವಿರಾರು ಕುಸ್ತಿಪಟುಗಳ ಗೆಲುವು ಇದು ಎಂದು ಸಿಂಗ್ ಹೇಳಿದರು.

ಆದಾಗ್ಯೂ, 27-19 ರಲ್ಲಿ ದರ್ಶನ್ ಲಾಲ್ ಅವರನ್ನು ಸೋಲಿಸಿ RSPB (ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ) ಮಾಜಿ ಕಾರ್ಯದರ್ಶಿ ಪ್ರೇಮ್ ಚಂದ್ ಲೊಚಬ್ ಪ್ರಧಾನ ಕಾರ್ಯದರ್ಶಿ ಸ್ಥಾನ ಗೆದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಹಾರ ಮಳಿಗೆಗಳನ್ನು ನಡೆಸುತ್ತಿರುವ ದೇವೆಂದರ್ ಸಿಂಗ್ ಕಾಡಿಯನ್, ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಹತ್ತಿರವಾಗಿದ್ದಾರೆ ಎಂದು ಪರಿಗಣಿಸಲಾಗಿದೆ. ಐ ಡಿ ನಾನಾವತಿ ಅವರನ್ನು ಕಾಡಿಯನ್ 32-15 ಮತಗಳ ಅಂತರದಿಂ ಸೋಲಿಸಿ ಹಿರಿಯ ಉಪಾಧ್ಯಕ್ಷ ಸ್ಥಾನವನ್ನು ಪಡೆದರು.

ದೆಹಲಿಯ ಜೈ ಪ್ರಕಾಶ್ (37), ಪಶ್ಚಿಮ ಬಂಗಾಳದ ಅಸಿತ್ ಕುಮಾರ್ ಸಹಾ (42), ಪಂಜಾಬ್‌ನ ಕರ್ತಾರ್ ಸಿಂಗ್ (44) ಮತ್ತು ಮಣಿಪುರದ ಎನ್ ಫೋನಿ (38) ಗೆಲುವಿನೊಂದಿಗೆ ಬ್ರಿಜ್ ಭೂಷಣ್ ಪಾಳಯವು ಎಲ್ಲಾ ನಾಲ್ಕು ಉಪಾಧ್ಯಕ್ಷರ ಹುದ್ದೆಗಳನ್ನು ಗೆದ್ದಿದೆ. ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಚುನಾವಣೆಗೆ ಬಾರದೆ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇವಲ ಐದು ಮತಗಳನ್ನು ಪಡೆದರು.

ಇದನ್ನೂ ಓದಿ: WFIನ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ: ನಾನು ಕುಸ್ತಿಯನ್ನು ತ್ಯಜಿಸುತ್ತೇನೆ ಎಂದ ಸಾಕ್ಷಿ ಮಲಿಕ್

ಬ್ರಿಜ್ ಭೂಷಣ್ ಬಣದವರೂದ ಉತ್ತರಾಖಂಡದ ಸತ್ಯಪಾಲ್ ಸಿಂಗ್ ದೇಶ್ವಾಲ್ ಅವರು ಹೊಸ ಖಜಾಂಚಿಯಾಗಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ದುಶ್ಯಂತ್ ಶರ್ಮಾ ಅವರನ್ನು 34-12 ರಿಂದ ಸೋಲಿಸಿದರು. ಎಲ್ಲಾ ಐವರು ಕಾರ್ಯಕಾರಿ ಸಮಿತಿಯ ಸದಸ್ಯರು ಸಹ ನಿರ್ಗಮಿತ ಮುಖ್ಯಸ್ಥರ ಬಣದವರು.

ಬ್ರಿಜ್ ಭೂಷಣ್ ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಆಪ್ತರು WFI ಚುನಾವಣಾ ಕಣಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ ನಂತರ ಕುಸ್ತಿಪಟುಗಳು ಜೂನ್ 7 ರಂದು ಅಧಿಕೃತವಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು