Telangana Politics: ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಆಘಾತ, 6 ಎಂಎಲ್​ಸಿಗಳು ಕಾಂಗ್ರೆಸ್​ಗೆ ಸೇರ್ಪಡೆ

|

Updated on: Jul 05, 2024 | 11:17 AM

ಬಿಆರ್​ಎಸ್​ನ 6 ಎಂಎಲ್​ಸಿಗಳು ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಲ 10ಕ್ಕೆ ಏರಿಕೆಯಾಗಲಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ 119 ಸ್ಥಾನಗಳಲ್ಲಿ ಕೇವಲ 39 ಸ್ಥಾನಗಳನ್ನು ಗೆದ್ದಿತ್ತು.

Telangana Politics: ತೆಲಂಗಾಣದಲ್ಲಿ ಬಿಆರ್​ಎಸ್​ಗೆ ಆಘಾತ, 6 ಎಂಎಲ್​ಸಿಗಳು ಕಾಂಗ್ರೆಸ್​ಗೆ ಸೇರ್ಪಡೆ
ಎಂಎಲ್​ಸಿಗಳು
Follow us on

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತೆಲಂಗಾಣದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಗುರುವಾರ ಮುಖ್ಯಮಂತ್ರಿ ರೇವಂತ್ ರೆಡ್ಡಿ(Revanth Reddy) ಅವರ ಸಮ್ಮುಖದಲ್ಲಿ ಆರು ಬಿಆರ್‌ಎಸ್ ಎಂಎಲ್​ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಬಿಆರ್‌ಎಸ್ ಎಂಎಲ್​ಸಿಗಳು ಪಕ್ಷ ತೊರೆಯುವ ಪ್ರಕ್ರಿಯೆ ನಡೆದಿದೆ. ದಂಡೆ ವಿಠ್ಠಲ್, ಭಾನು ಪ್ರಸಾದ್ ರಾವ್, ಎಂಎಸ್ ಪ್ರಭಾಕರ್, ಬೊಗ್ಗರಪು ದಯಾನಂದ್, ಯೆಗ್ಗೆ ಮಲ್ಲೇಶಂ ಮತ್ತು ಬಸವರಾಜು ಸರಯ್ಯ ಸೇರಿದಂತೆ ಆರು ಎಂಎಲ್​ಸಿಗಳು ಕಾಂಗ್ರೆಸ್ ಸೇರಿದರು.

ಸಿಎಂ ರೇವಂತ್ ರೆಡ್ಡಿ, ತೆಲಂಗಾಣ ಎಐಸಿಸಿ ಉಸ್ತುವಾರಿ ದೀಪಾ ದಾಸ್‌ಮುನ್ಶಿ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಬಿಆರ್‌ಎಸ್ ಎಂಎಲ್​ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಿಆರ್‌ಎಸ್ 25 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ ನಾಲ್ವರನ್ನು ಹೊಂದಿದೆ. 40 ಸದಸ್ಯ ಬಲದ ಸದನದಲ್ಲಿ ಎರಡು ಸ್ಥಾನಗಳು ಖಾಲಿ ಇವೆ.

ಅದೇ ಸಮಯದಲ್ಲಿ, ನಾಲ್ಕು ನಾಮನಿರ್ದೇಶಿತ ಎಂಎಲ್‌ಸಿ , ಎಐಎಂಐಎಂನ ಇಬ್ಬರು ಸದಸ್ಯರು, ಬಿಜೆಪಿ, ಪಿಆರ್‌ಟಿಯುನಿಂದ ತಲಾ ಒಬ್ಬರು ಮತ್ತು ಒಬ್ಬ ಸ್ವತಂತ್ರ ಸದಸ್ಯ ಇದ್ದಾರೆ. ಸಿಎಂ ರೇವಂತ್ ರೆಡ್ಡಿ ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಮರಳಿದ ನಂತರವೇ ಬಿಆರ್‌ಎಸ್ ಶಾಸಕ ಕಾಂಗ್ರೆಸ್ ಸೇರಿದ್ದಾರೆ.

ಬಿಆರ್‌ಎಸ್‌ ಎಂಎಲ್​ಸಿಗಳು  ಕಾಂಗ್ರೆಸ್‌ ಸೇರ್ಪಡೆಗೊಂಡ ನಂತರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಲ 10ಕ್ಕೆ ಏರಿಕೆಯಾಗಲಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ 119 ಸ್ಥಾನಗಳಲ್ಲಿ ಕೇವಲ 39 ಸ್ಥಾನಗಳನ್ನು ಗೆದ್ದಿತ್ತು.

ಮತ್ತಷ್ಟು ಓದಿ: ತೆಲುಗು ಚಿತ್ರರಂಗಕ್ಕೆ ಷರತ್ತು ವಿಧಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ

ಆದರೆ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿತ್ತು. ಇತ್ತೀಚೆಗೆ, ಸಿಕಂದರಾಬಾದ್ ಕಂಟೋನ್ಮೆಂಟ್‌ನ ಬಿಆರ್‌ಎಸ್ ಶಾಸಕಿ ಜಿ ಲಾಸ್ಯ ನಂದಿತಾ ಅವರು ರಸ್ತೆ ಅಪಘಾತದಲ್ಲಿ ನಿಧನರಾದರು, ನಂತರ ಇಲ್ಲಿ ಉಪಚುನಾವಣೆ ನಡೆಯಿತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.

ಪಿಸಿಸಿ ಅಧ್ಯಕ್ಷರೂ ಆಗಿರುವ ಸಿಎಂ ರೇವಂತ್ ರೆಡ್ಡಿ ಅವರ ನಿವಾಸದಲ್ಲಿ ಬಿಆರ್‌ಎಸ್ ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ತೆಲಂಗಾಣದಲ್ಲಿ ಎಐಸಿಸಿ ಪಕ್ಷದ ವ್ಯವಹಾರಗಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ