ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆಯಲ್ಲಿ ಹಲವು ಮಂದಿಗೆ ಗಾಯ
2024ರ ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ದೇಶಕ್ಕೆ ಮರಳಿದೆ. ಎಲ್ಲರೂ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮುಂಬೈನ ಮರೈನ್ ಡ್ರೈವ್‌ನಲ್ಲಿ ಭಾರತದ ಎಲ್ಲಾ ಆಟಗಾರರನ್ನು ಸ್ವಾಗತಿಸಲು ವಿಜಯೋತ್ಸವದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ ಫಿನಾಲೆಯಲ್ಲಿ ಭಾರತ ತಂಡವು ಜಯಗಳಿಸಿತು. ವಿಜೇತ ತಂಡದ ವಿಜಯೋತ್ಸವ ಪರೇಡ್ ಮುಂಬೈನ ಮರೈನ್ ಡ್ರೈವ್‌ನಲ್ಲಿ ನಡೆಯಿತು. ಈ ಮೆರವಣಿಗೆಯಲ್ಲಿ ಹಲವು ಕ್ರಿಕೆಟ್ ಅಭಿಮಾನಿಗಳು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ನೇತೃತ್ವದ ತಂಡ ಮರೈನ್ ಡ್ರೈವ್ನಿಂದ ಬಸ್ ಪರೇಡ್ಗೆ ಚಾಲನೆ ನೀಡಿತು.
ಭಾರತ ತಂಡದ ಆಟಗಾರರನ್ನು ಸ್ವಾಗತಿಸಲು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿದ್ದರು. ತೆರೆದ ಬಸ್ಸಿನಲ್ಲಿ ಆಟಗಾರರು ಈ ಪ್ರಯಾಣವನ್ನು ಸಂಪೂರ್ಣವಾಗಿ ಆನಂದಿಸಿದರು. ಈ ವಿಜಯೋತ್ಸವದ ಮೆರವಣಿಗೆಯೂ ಕೆಲ ಅಭಿಮಾನಿಗಳಿಗೆ ಸಮಸ್ಯೆಯಾಯಿತು. ಜನಸಂದಣಿಯಿಂದಾಗಿ ಕೆಲವು ಕ್ರಿಕೆಟ್ ಅಭಿಮಾನಿಗಳು ಗಾಯಗೊಂಡರು ಮತ್ತು ಕೆಲವರು ಉಸಿರಾಟದ ತೊಂದರೆ ಅನುಭವಿಸಿದರು.
ಜುಲೈ 4 ರಂದು ನಡೆದ ವಿಜಯ ಯಾತ್ರೆಯಲ್ಲಿ ವಾಂಖೆಡೆ ಸ್ಟೇಡಿಯಂಗೆ ಹೋಗುವ ಮುನ್ನ ಲಕ್ಷಾಂತರ ಅಭಿಮಾನಿಗಳು ಚಾಂಪಿಯನ್‌ಗಳನ್ನು ಸ್ವಾಗತಿಸಲು ಬಂದಿದ್ದರು. ಅಭಿಮಾನಿಗಳ ಇಂತಹ ಉತ್ಸಾಹವನ್ನು ಕಂಡ ವಿಶ್ವ ಚಾಂಪಿಯನ್‌ಗಳು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
VIDEO | Indian cricket team greets overjoyed fans during its victory parade at Marine Drive in Mumbai. pic.twitter.com/FeM8f1mPT6
— Press Trust of India (@PTI_News) July 4, 2024
ಈ ಯಾತ್ರೆಯ ನಂತರ ರಸ್ತೆಯ ಮೇಲೆ ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಮತ್ತು ಮರೈನ್ ಡ್ರೈವ್ ಸುತ್ತಮುತ್ತ ನಿಲ್ಲಿಸಿದ್ದ ಕಾರುಗಳಿಗೂ ಹಾನಿಗಳಾಗಿವೆ. ಬಾಲಕಿಯೊಬ್ಬಳು ಪ್ರಜ್ಞಾಹೀನಳಾಗಿ ಬಿದ್ದಿದ್ದಳು.
ಮತ್ತಷ್ಟು ಓದಿ: ಟೀಂ ಇಂಡಿಯಾ ವಿಜಯೋತ್ಸವ ಸಂಪನ್ನ: ಭಾರತ ತಂಡಕ್ಕೆ ಸಿಕ್ತು 125 ಕೋಟಿ ರೂ ಗಿಫ್ಟ್
ವಿಜಯೋತ್ಸವದ ಮೆರವಣಿಗೆಯು ದಕ್ಷಿಣ ಮುಂಬೈನಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು ಮತ್ತು ಪೊಲೀಸರು ಮರೈನ್ ಡ್ರೈವ್ ಕಡೆಗೆ ವಾಹನ ಸಂಚಾರವನ್ನು ನಿಲ್ಲಿಸಿದರು, ಪರ್ಯಾಯ ಮಾರ್ಗಗಳಲ್ಲಿ ಗೊಂದಲವನ್ನು ಉಂಟುಮಾಡಿದರು. ಅದೇ ಸಮಯದಲ್ಲಿ, ವಾಂಖೆಡೆ ಕ್ರೀಡಾಂಗಣವು ಕಿಕ್ಕಿರಿದು ತುಂಬಿತ್ತು, ಅಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳು ಆಟಗಾರರಿಗೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ನೀಡಿ ಗೌರವಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ