ತಮಿಳುನಾಡು: ಮನೆ ಕೆಡವುದನ್ನು ತಡೆಯಲು ತನ್ನ ಮೈಗೆ ಬೆಂಕಿ ಹಚ್ಚಿಕೊಂಡ ಯುವಕ
ಕಣ್ಣೆದುರೇ ಮನೆ ನೆಲಸಮವಾಗುತ್ತಿರುವುದನ್ನು ನೋಡಲಾರದೆ ಅಧಿಕಾರಿಗಳನ್ನು ತಡೆಯುವ ಉದ್ದೇಶದಿಂದ ಯುವಕನೊಬ್ಬ ಮೈಗೆ ಬೆಂಕಿ ಹಚ್ಚಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮನೆಯನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು ಮನೆ ಕೆಡವಲು ಮುಂದಾಗಿದ್ದರು
ಮನೆ ಕೆಡವುದನ್ನು ತಡೆಯಲು ಯುವಕನೊಬ್ಬ ಮೈಗೆ ಬೆಂಕಿ ಹಚ್ಚಿಕೊಂಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ. ಅವರು ಆ ಜಾಗವನ್ನು ಅತಿಕ್ರಮಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂದೆಯ ಮರಣದ ನಂತರ ರಾಜ್ಕುಮಾರ್ ಎಂಬ ವ್ಯಕ್ತಿ ಕುಟುಂಬದೊಂದಿಗೆ ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿದ್ದ. ನಮ್ಮ ಸ್ಥಿತಿಯಿಂದ ಬೇಸರಗೊಂಡು ಯಾರೋ ನಮಗೆ ಈ ಆಸ್ತಿ ನೀಡಿದ್ದರು ಎಂದು ಆತನ ತಾಯಿ ಕಲ್ಯಾಣಿ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ತಿರುವಳ್ಳೂರಿನ ಗುಮ್ಮಿಡಿಪೂಂಡಿ ಬಳಿಯ ನೇತಾಜಿ ನಗರದಲ್ಲಿ ಆಕೆಯ ಮನೆಯ ಪಕ್ಕದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್ ನಿರ್ಮಾಣವಾದಾಗ ಪರಿಸ್ಥಿತಿ ಮತ್ತೊಂದು ತಿರುವು ಪಡೆಯಿತು. ಕಲ್ಯಾಣಿ ಅವರ ಮನೆ ಅತಿಕ್ರಮಣವಾಗಿದ್ದು ನಮ್ಮ ದಾರಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ನಿವಾಸಿಗಳು ದೂರು ನೀಡಿದ್ದರು.
ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಭೂಮಿಯ ಭಾಗವು ಇನ್ನೂ ಜಾಗ ನೀಡಿದವರ ಹೆಸರಿನಲ್ಲಿದೆ. ಆದರೂ ಕೂಡ ವಾರಗಳ ಹಿಂದೆ ಕಲ್ಯಾಣಿಯವರ ನಿವಾಸಕ್ಕೆ ಅಧಿಕಾರಿಗಳು ಬಂದು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು. ಕಲ್ಯಾಣಿ ಒಂದು ತಿಂಗಳ ಕಾಲಾವಕಾಶ ಕೋರಿದ್ದರು, ಗುರುವಾರ ಅಧಿಕಾರಿಗಳು ಬುಲ್ಡೋಜರ್ನೊಂದಿಗೆ ಆಗಮಿಸಿ ಮನೆ ಕೆಡವಲು ಮುಂದಾಗಿದ್ದರು.
ಮತ್ತಷ್ಟು ಓದಿ: ಯುವತಿಯನ್ನು ಥಳಿಸಿ, ಅತ್ಯಾಚಾರವೆಸಗಿ, ಬಾಯಿಗೆ ಫೆವಿಕ್ವಿಕ್ ಹಾಕಿದ್ದ ಆರೋಪಿಯ ಮನೆ ನೆಲಸಮ
ಈ ಕ್ರಮ ತಡೆಯುವ ನಿಟ್ಟಿನಲ್ಲಿ ರಾಜ್ಕುಮಾರ್ ಮೈಗೆ ಬೆಂಕಿ ಹಚ್ಚಿಕೊಂಡು ಹೊರಗೆ ಓಡಿ ಅಧಿಕಾರಿಗಳನ್ನು ಬೆದರಿಸಲು ಪ್ರಯತ್ನಿಸಿದರು.ಅಗ್ನಿ ಶಾಮಕ ತಂಡವು ತಕ್ಷಣವೇ ಅವರನ್ನು ರಕ್ಷಿಸಿದ್ದಾರೆ. ಆದರೆ ಅವರ ದೇಹದ 60ರಷ್ಟು ಭಾಗಕ್ಕೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕ್ರಮಗಳನ್ನು ಖಂಡಿಸಿದ್ದಾರೆ ಮತ್ತು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವನ್ನು ದೂಷಿಸಿದ್ದಾರೆ. ಈ ಡಿಎಂಕೆ ಆಡಳಿತದಲ್ಲಿ ರಿಯಲ್ ಎಸ್ಟೇಟ್ ದೊರೆಗಳು ಲಾಭಗಳು ಮತ್ತು ಅಭೂತಪೂರ್ವ ಸವಲತ್ತುಗಳನ್ನು ಅನುಭವಿಸುತ್ತಿದ್ದರೆ, ಸಾಮಾನ್ಯ ಜನರ ಮನೆಗಳು ಅಕ್ರಮ ನಿರ್ಮಾಣ ಎಂದು ನೆಲಸಮವಾಗಿವೆ ಎಂದು ದೂರಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ