ಯುವತಿಯನ್ನು ಥಳಿಸಿ, ಅತ್ಯಾಚಾರವೆಸಗಿ, ಬಾಯಿಗೆ ಫೆವಿಕ್ವಿಕ್​ ಹಾಕಿದ್ದ ಆರೋಪಿಯ ಮನೆ ನೆಲಸಮ

ಮಧ್ಯಪ್ರದೇಶದ ಗುನಾದಲ್ಲಿ ಯುವತಿಯೊಬ್ಬಳ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನಿಗೆ ಸೇರಿದ ಹಾಗೂ ಅಕ್ರಮವಾಗಿ ಕಟ್ಟಿದ್ದ ಮನೆಯಲ್ಲಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಯುವತಿಯನ್ನು ಥಳಿಸಿ, ಅತ್ಯಾಚಾರವೆಸಗಿ, ಬಾಯಿಗೆ ಫೆವಿಕ್ವಿಕ್​ ಹಾಕಿದ್ದ ಆರೋಪಿಯ ಮನೆ ನೆಲಸಮ
Follow us
ನಯನಾ ರಾಜೀವ್
|

Updated on:Apr 21, 2024 | 11:49 AM

ಒಂದು ತಿಂಗಳ ಕಾಲ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯ ಮನೆಯನ್ನು ನೆಲಸಮಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಯುವತಿಯ ತಾಯಿಯ ಆಸ್ತಿ ಬಗ್ಗೆ ಕಣ್ಣಿಟ್ಟಿದ್ದ ಆರೋಪಿಯ ಆಕೆಯ ಮಗಳನ್ನು ಮದುವೆಯಾಗುವ ಕನಸು ಕಂಡಿದ್ದ. ಆದರೆ ಅದಕ್ಕೊಪ್ಪದಿದ್ದಾಗ ಆಕೆಯನ್ನು ಅಪಹರಿಸಿ ಒಂದು ತಿಂಗಳು ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿ, ಥಳಿಸಿ ಗಾಯಕ್ಕೆ ಖಾರದ ಪುಡಿ ಎರಚಿ, ಆಕೆಯ ಕೂಗು ಯಾರಿಗೂ ಕೇಳಬಾರದೆಂದು ಬಾಯಿಗೆ ಫೆವಿಕ್ವಿಕ್ ಅಂಟಿಸಿ ಚಿತ್ರಹಿಂಸೆ ನೀಡುತ್ತಿದ್ದ ವ್ಯಕ್ತಿಯ ಮನೆಯ ಈಗ ನೆಲಸಮವಾಗಿದೆ.

ಅಯಾನ್ ಪಠಾಣ್ ಎಂಬಾತ ಪಕ್ಕದಲ್ಲೇ ಮನೆಯಲ್ಲಿದ್ದ 23 ವರ್ಷದ ಯುವತಿ ಮೇಲೆ ಕಣ್ಣಿಟ್ಟಿದ್ದ, ಆಕೆಯನ್ನು ಅಪಹರಿಸಿ ತಿಂಗಳುಕಾಲ ಕಾಲ ಹಿಂಸೆ ನೀಡಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಅಯಾನ್ ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಆಕೆ ಆಸ್ತಿಯನ್ನು ಹಸ್ತಾಂತರಿಸಲು ನಿರಾಕರಿಸಿದಾಗ ಆಕೆಗೆ ಥಳಿಸಲು ಶುರು ಮಾಡಿದ್ದ.

ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ತುಂಬಿದ್ದ, ಜತೆಗೆ ಫೆವಿಕ್ವಿಕ್ ಅಂಟಿಸಿದ್ದ.ಈತ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ.

ಮತ್ತಷ್ಟು ಓದಿ: ಬೆಲ್ಟ್​, ಪೈಪ್​ನಿಂದ ಯುವತಿಗೆ ಥಳಿಸಿ, ಗಾಯಕ್ಕೆ ಖಾರದ ಪುಡಿ ಎರಚಿ, ಬಾಯಿಗೆ ಫೆವಿಕ್ವಿಕ್​ ಹಾಕಿ ಚಿತ್ರಹಿಂಸೆ

ತೀವ್ರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ಬಂದ ನಂತರ ಅಯಾನ್‌ನನ್ನು ಬಂಧಿಸಲಾಗಿದೆ. ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಿ ಜಮೀನಿನಲ್ಲಿ ಅಯಾನ್ ಅವರ ಮನೆ ನಿರ್ಮಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ನಂತರ ಅದನ್ನು ಕೆಡವಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:47 am, Sun, 21 April 24

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ