ಬಿಎಸ್‌ಪಿ (BSP) ನಾಯಕಿ ಮಾಯಾವತಿ (Mayawati) ಅವರು ನಾಳೆ ಪಾಟ್ನಾದಲ್ಲಿ (Patna) ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಗುರುವಾರ ಸರಣಿ ಟ್ವೀಟ್ ಮಾಡಿದ ಮಾಯಾವತಿ, ದೇಶದಲ್ಲಿ ಹಣದುಬ್ಬರ, ಬಡತನ, ನಿರುದ್ಯೋಗ, ಹಿಂದುಳಿದಿರುವಿಕೆ, ಅನಕ್ಷರತೆ, ಜಾತಿ ದ್ವೇಷ, ಧಾರ್ಮಿಕ ಹಿಂಸಾಚಾರ ಇತ್ಯಾದಿಗಳಿಂದ ನರಳುತ್ತಿರುವ ಬಹುಜನರ ಸ್ಥಿತಿ ನೋಡಿದರೆ ಪರಮಪೂಜ್ಯ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಮಾನವೀಯ ಸಮಾನತೆಯ ಸಂವಿಧಾನವನ್ನು ಸರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯ ಕಾಂಗ್ರೆಸ್, ಬಿಜೆಪಿಯಂಥಾ ಪಕ್ಷಗಳಿಗಿಲ್ಲ ಎಂದು ತೋರುತ್ತದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ಒಟ್ಟಾಗಿ ಎತ್ತುತ್ತಿರುವ ವಿಚಾರಗಳು ಮತ್ತು ಇಂತಹ ಪರಿಸ್ಥಿತಿಯಲ್ಲಿ ಜೂನ್ 23 ರಂದು ನಿತೀಶ್ ಕುಮಾರ್ ಅವರು ನಡೆಸಲಿರುವ ವಿರೋಧ ಪಕ್ಷದ ನಾಯಕರ ಪಾಟ್ನಾ ಸಭೆಯು ದಿಲ್ ಮಿಲೇ ನಾ ಮಿಲೇ ಹಾಥ್ ಮಿಲಾತೇ ರಹೀಯೇ (ಯೋಚನೆಗಳು ಒಂದೇ ಆಗಿರದಿದ್ದರೂ, ಕೈಕುಲುಕುತ್ತಲೇ ಇರಿ) ಎಂಬ ನುಡಿಗಟ್ಟನ್ನು ನೆನಪಿಸುತ್ತದೆ ಎಂದಿದ್ದಾರೆ.
1.महंगाई, गरीबी, बेरोजगारी, पिछड़ापन, अशिक्षा, जातीय द्वेष, धार्मिक उन्माद/हिंसा आदि से ग्रस्त देश में बहुजन के त्रस्त हालात से स्पष्ट है कि परमपूज्य बाबा साहेब भीमराव अम्बेडकर के मानवतावादी समतामूलक संविधान को सही से लागू करने की क्षमता कांग्रेस, बीजेपी जैसी पार्टियों के पास नही
— Mayawati (@Mayawati) June 22, 2023
ಅಂದಹಾಗೆ, ಮುಂದಿನ ಲೋಕಸಭಾ ಚುನಾವಣೆಯ ತಯಾರಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರಯತ್ನ ಮಾಡುವ ಮುನ್ನ ಈ ಪಕ್ಷಗಳು ಜನಸಾಮಾನ್ಯರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಿ ತಮ್ಮ ಉದ್ದೇಶವನ್ನು ಸ್ವಲ್ಪವಾದರೂ ಸರಿ ಮಾಡಿಕೊಂಡಿದ್ದರೆ ಚೆನ್ನಾಗಿತ್ತು. ‘ಬಾಯಲ್ಲಿ ರಾಮ, ಬದಿಯಲ್ಲಿ ಚಾಕು’ ಎಷ್ಟು ದಿನ ಉಳಿಯುತ್ತದೆ?
ಯುಪಿಯಲ್ಲಿ 80 ಲೋಕಸಭಾ ಸ್ಥಾನಗಳು ಚುನಾವಣಾ ಯಶಸ್ಸಿಗೆ ಪ್ರಮುಖವೆಂದು ಹೇಳಲಾಗುತ್ತದೆ, ಆದರೆ ವಿರೋಧ ಪಕ್ಷಗಳ ವರ್ತನೆಯಿಂದ ಅವರು ಇಲ್ಲಿ ತಮ್ಮ ಉದ್ದೇಶದ ಬಗ್ಗೆ ಗಂಭೀರವಾಗಿ ಮತ್ತು ನಿಜವಾದ ಕಾಳಜಿಯನ್ನು ಹೊಂದಿದ್ದಾರೆಂದು ತೋರುತ್ತಿಲ್ಲ. ಸರಿಯಾದ ಆದ್ಯತೆಗಳಿಲ್ಲದೆ, ಇಲ್ಲಿನ ಲೋಕಸಭಾ ಚುನಾವಣೆಯ ಸಿದ್ಧತೆಗಳು ನಿಜವಾಗಿಯೂ ಅಗತ್ಯ ಬದಲಾವಣೆಯನ್ನು ತರುತ್ತವೆಯೇ? ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Manipur Violence: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜೂ.24ರಂದು ಸರ್ವಪಕ್ಷಗಳ ಸಭೆ ಕರೆದ ಅಮಿತ್ ಶಾ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ಮತ್ತು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳ ಭಾಗವಾಗಿ ಸಭೆಯನ್ನು ಕರೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Thu, 22 June 23