Budget 2021 | ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ 6 ಪ್ರಮುಖ ಅಂಶಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 01, 2021 | 1:53 PM

ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದ ಅವರು, ಇದು ಸ್ವತಂತ್ರದ 76ನೇ ವರ್ಷ, ಗೋವಾ ವಿಮೋಚನೆಯ 60ನೇ ವರ್ಷ, ಪಾಕ್-ಭಾರತ ಯುದ್ಧದ (ಬಾಂಗ್ಲಾ) 50ನೇ ವರ್ಷ. ಹಲವು ಕಾರಣಗಳಿಂದ 2020 ಭಾರತಕ್ಕೆ ಮುಖ್ಯ ಎಂದು ಇತಿಹಾಸದ ಅಂಶಗಳನ್ನು ಸ್ಮರಿಸಿದರು.

Budget 2021 | ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ 6 ಪ್ರಮುಖ ಅಂಶಗಳು
ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
Follow us on

ದೆಹಲಿ: ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್​ಗೆ ಆರು ಮುಖ್ಯ ಆಧಾರ ಸ್ತಂಭಗಳನ್ನು ಗುರುತಿಸಿದ್ದಾಗಿ ಘೋಷಿಸಿದರು.

1) ಆರೋಗ್ಯ
2) ಭೌತಿಕ ಮತ್ತು ಹಣಕಾಸು ಬಂಡವಾಳ ಹಾಗೂ ಮೂಲಸೌಕರ್ಯ
3) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ
4) ಮಾನವ ಸಂಪನ್ಮೂಲ
5) ಆವಿಷ್ಕಾರ- ಸಂಶೋಧನೆ ಮತ್ತು ಅಭಿವೃದ್ಧಿ (ಆರ್​ ಅಂಡ್ ಡಿ)
6) ಮೂಲಸೌಕರ್ಯ ಅಭಿವೃದ್ಧಿ

ತಮ್ಮ ಬಜೆಟ್ ಭಾಷಣವನ್ನು ಆರಂಭಿಸಿದ ಅವರು, ಇದು ಸ್ವತಂತ್ರದ 76ನೇ ವರ್ಷ, ಗೋವಾ ವಿಮೋಚನೆಯ 60ನೇ ವರ್ಷ, ಪಾಕ್-ಭಾರತ ಯುದ್ಧದ (ಬಾಂಗ್ಲಾ) 50ನೇ ವರ್ಷ. ಹಲವು ಕಾರಣಗಳಿಂದ 2020 ಭಾರತಕ್ಕೆ ಮುಖ್ಯ ಎಂದು ಇತಿಹಾಸದ ಅಂಶಗಳನ್ನು ಸ್ಮರಿಸಿದರು.

ಬಡವರು, ದಲಿತರು, ಹಿರಿಯರು, ವಲಸೆ ಕಾರ್ಮಿಕರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ.ಎರಡು ಮಹಾಯುದ್ಧಗಳ ನಂತರದ ಪರಿಸ್ಥಿತಿಯ ಮಾದರಿಯಲ್ಲಿಯೇ ಕೋವಿಡ್-19ರ ನಂತರವೂ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕಳೆದ ವರ್ಷದ ನಮ್ಮ ನಡೆ ಇದನ್ನು ಎತ್ತಿ ತೋರಿಸಿದೆ. ಕೊರೊನಾ ನಿರ್ವಹಣೆಯನ್ನು ನಮ್ಮ ಸರ್ಕಾರ ಚೆನ್ನಾಗಿ ಮಾಡಿದೆ. ಇದೇ ಕಾರಣಕ್ಕೆ ದೇಶದ ಆರ್ಥಿಕತೆ ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ.ಎಂದು ವಿವರಿಸಿದರು.

Budget 2021 LIVE: ಬಜೆಟ್​ ಭಾಷಣ ಮುಕ್ತಾಯ.. ಬಜೆಟ್​ಗೆ ಅನುಮೋದನೆ ಸೂಚಿಸಿದ ಲೋಕಸಭೆ