Budget 2021 | ಮನೆ ಖರೀದಿದಾರರಿಗೆ ಬಿಗ್​ ರಿಲೀಫ್​, ಗೃಹಸಾಲದ ವಿನಾಯ್ತಿಗಳು ವಿಸ್ತರಣೆ

ಸೆಕ್ಷನ್ 80 ಇಇಎ ಅಡಿಯಲ್ಲಿ ಗೃಹಸಾಲದ ಬಡ್ಡಿ ಪಾವತಿಯ ಮೇಲೆ ಸಿಗುತ್ತಿದ್ದ ಹೆಚ್ಚುವರಿ ವಿನಾಯಿತಿ ಮಿತಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದ್ದಾರೆ. ವಿತ್ತ ಸಚಿವರ ಹೊಸ ಘೋಷಣೆಯ ಅನ್ವಯ ಈ ಯೋಜನೆಯು ಮಾರ್ಚ್​ 2022ರವರೆಗೆ ಅಸ್ತಿತ್ವದಲ್ಲಿರುತ್ತದೆ.

Budget 2021 | ಮನೆ ಖರೀದಿದಾರರಿಗೆ ಬಿಗ್​ ರಿಲೀಫ್​, ಗೃಹಸಾಲದ ವಿನಾಯ್ತಿಗಳು ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
ಪೃಥ್ವಿಶಂಕರ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 01, 2021 | 2:51 PM

ದೆಹಲಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಹು ನಿರೀಕ್ಷಿತ ಬಜೆಟ್​ ಮಂಡನೆ ಮಾಡಿದ್ದು, ಮನೆ ಖರೀದಿದಾರರಿಗೆ ನೆಮ್ಮದಿ ನೀಡುವ ಹಲವು ವಿಷಯಗಳು ಬಜೆಟ್​ನಲ್ಲಿವೆ. ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಯ ವೇಗ ಸುಧಾರಿಸಲು ಇದು ನೆರವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸೆಕ್ಷನ್ 80 ಇಇಎ ಅಡಿಯಲ್ಲಿ ಗೃಹಸಾಲದ ಬಡ್ಡಿ ಪಾವತಿಯ ಮೇಲೆ ಸಿಗುತ್ತಿದ್ದ ಹೆಚ್ಚುವರಿ ವಿನಾಯಿತಿ ಮಿತಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದ್ದಾರೆ. ಈ ಮೊದಲು ಘೋಷಿಸಿದ್ದ ಪ್ರಕಾರ ಈ ಯೋಜನೆಯು ಮಾರ್ಚ್ 2021ಕ್ಕೆ ಕೊನೆಯಾಗಬೇಕಿತ್ತು. ವಿತ್ತ ಸಚಿವರ ಹೊಸ ಘೋಷಣೆಯ ಅನ್ವಯ ಈ ಯೋಜನೆಯು ಮಾರ್ಚ್​ 2022ರವರೆಗೆ ಅಸ್ತಿತ್ವದಲ್ಲಿರುತ್ತದೆ.

ಕೈಗೆಟುಕುವ ದರದ ವಸತಿಗಾಗಿ ಸರ್ಕಾರ 2019ರ ಬಜೆಟ್‌ನಲ್ಲಿ ಸೆಕ್ಷನ್ 80 ಇಇಎ ತಂದಿತ್ತು ಎಂದು ವಿವರಿಸಿದ ನಿರ್ಮಲಾ ಸೀತಾರಾಮನ್, ಇದರ ಅಡಿಯಲ್ಲಿ ಬಡ್ಡಿ ಮರುಪಾವತಿಗೆ ₹ 1.5 ಲಕ್ಷ ರಿಯಾಯಿತಿ ಪ್ರತ್ಯೇಕವಾಗಿ ಲಭ್ಯವಿದೆ. ಈ ವಿನಾಯಿತಿ ಸೆಕ್ಷನ್ 24 ಬಿ ಗಿಂತ ಭಿನ್ನವಾಗಿದೆ. ಸೆಕ್ಷನ್ 24 ಬಿ ಗೃಹ ಸಾಲದ ಬಡ್ಡಿ ಮರುಪಾವತಿಗೆ ಪ್ರತಿ ಹಣಕಾಸು ವರ್ಷದಲ್ಲಿ ₹ 2 ಲಕ್ಷದಷ್ಟು ರಿಯಾಯಿತಿ ಸಿಗುತ್ತದೆ. ಈ ಬಜೆಟ್‌ನಲ್ಲಿಯೂ ಕೈಗೆಟುಕುವ ವಸತಿಗಳ ವಿಚಾರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಕಾರ್ಪೆಟ್ ಪ್ರದೇಶ ಮತ್ತು ಮನೆಯ ಬೆಲೆಯ ಆಧಾರದ ಮೇಲೆ ಕೈಗೆಟುಕುವ ವಸತಿಗಳನ್ನು ಸರ್ಕಾರ ವರ್ಗೀಕರಿಸಿದೆ. ಗೃಹಸಾಲ ಮರುಪಾವತಿಯ ಮೂಲ ಮೊತ್ತದ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿಯೂ ಇದೆ.

ಮನೆಯ ಬೆಲೆ ₹ 45 ಲಕ್ಷಕ್ಕಿಂತ ಹೆಚ್ಚಿರಬಾರದು.. ಸೆಕ್ಷನ್ 80 ಇಇಎ ವಿನಾಯ್ತಿ ಪಡೆಯಲು ಮೊದಲ ಷರತ್ತು ಎಂದರೆ, ಮನೆಯ ಖರೀದಿ (ಸ್ಟಾಂಪ್) ಮೌಲ್ಯವು ₹ 45 ಲಕ್ಷ ಮೀರಬಾರದು. ಗೃಹ ಸಾಲದ ಅವಧಿಯನ್ನು 1 ಏಪ್ರಿಲ್ 2019 ರಿಂದ 2021 ಮಾರ್ಚ್ 31 ರವರೆಗೆ ನೀಡಲಾಗಿತ್ತು. ಆದರೆ ಈಗ ಅದೇ ಗಡುವನ್ನು 31 ಮಾರ್ಚ್ 2022 ಕ್ಕೆ ಹೆಚ್ಚಿಸಲಾಗಿದೆ. ಈ ಸೌಲಭ್ಯ ಪಡೆಯಲು ಕಾರ್ಪೆಟ್ ಪ್ರದೇಶವು 60 ಚದರ ಮೀಟರ್ ಅಥವಾ 645 ಚದರ ಅಡಿಗಿಂತ ಹೆಚ್ಚಿರಬಾರದು.

ದೆಹಲಿ, ಮುಂಬೈ, ಬೆಂಗಳೂರು, ನೋಯ್ಡಾ, ಗುರುಗ್ರಾಮ್, ಹೈದರಾಬಾದ್, ಕೋಲ್ಕತ್ತಾದ ನಗರಗಳನ್ನು ಒಳಗೊಂಡಿರುವ ಮೆಟ್ರೋ ನಗರಗಳಿಗೆ ಈ ಷರತ್ತು ಇದೆ. ಇತರ ನಗರಗಳಿಗೆ ಕಾರ್ಪೆಟ್ ಪ್ರದೇಶವು ಗರಿಷ್ಠ 90 ಮೀಟರ್ ಅಥವಾ 968 ಚದರ ಅಡಿ ಆಗಿರಬಹುದು.

ಹಳೆಯ ನಿಯಮದ ಪ್ರಕಾರ, ಸೆಪ್ಟೆಂಬರ್ 1, 2019 ರ ಮೊದಲು ರಿಯಲ್ ಎಸ್ಟೇಟ್ ಯೋಜನೆಗೆ ಅನುಮೋದನೆ ದೊರೆತರೆ ಮಾತ್ರ ಸೆಕ್ಷನ್ 80 ಇಇಎಗೆ ಲಾಭವಾಗುತ್ತಿತ್ತು. ಪ್ರಸ್ತುತ, ರಿಯಲ್ ಎಸ್ಟೇಟ್ ಯೋಜನೆಯ ಗಡುವಿನ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ತೆರಿಗೆದಾರರು ಸೆಕ್ಷನ್ 24 ಬಿ ಯ ಸಂಪೂರ್ಣ ಲಾಭವನ್ನು ಪಡೆದ ನಂತರ ಮಾತ್ರ ಸೆಕ್ಷನ್ 80 ಇಇಎ ಲಾಭ ಪಡೆಯಬಹುದು.

Budget 2021 LIVE: ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಇಲ್ಲ.. ಹಿರಿಯ ನಾಗರಿಕರಿಗೆ ಐಟಿ ರಿಟರ್ನ್​ ಸಲ್ಲಿಕೆ ವಿನಾಯ್ತಿ

Budget 2021 | ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ 6 ಪ್ರಮುಖ ಅಂಶಗಳು

Published On - 2:50 pm, Mon, 1 February 21

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್